ರಾಜೀವ್ ನಗರದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟನೆ
ಮೈಸೂರು

ರಾಜೀವ್ ನಗರದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟನೆ

June 15, 2019

ಮೈಸೂರು: ಮೈಸೂರಿನ ರಾಜೀವ್‍ನಗರ 2ನೇ ಹಂತದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಿರ್ಮಿಸಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಶಾಸಕ ತನ್ವೀರ್ ಸೇಠ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇಂದು ಶಿಕ್ಷಣ ಪಡೆಯುವ ಹಂಬಲ ಎಲ್ಲರಿಗೂ ಬಂದಿದೆ. ಎನ್.ಆರ್. ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಿ ಗುಣಮಟ್ಟದ ಶಿP್ಷÀಣ ದೊರಕಿಸಿಕೊಡಲು ಪ್ರಯತ್ನಿಸುತ್ತಾ ಬಂದಿz್ದÉೀನೆ. ಎನ್.ಆರ್. ಕ್ಷೇತ್ರ ಶೈP್ಷÀಣಿಕ ವಾಗಿ ಹಿಂದುಳಿದ ಪ್ರದೇಶವಾಗಿದೆ. ಬಡವರು, ಕೂಲಿ ಕಾರ್ಮಿಕರು ಮತ್ತು ದಿನಗೂಲಿ ನೌಕರರು ಹೆಚ್ಚಿನ ಸಂಖ್ಯೆಯ ಲ್ಲಿದ್ದು, ತಮ್ಮ ಮಕ್ಕಳನ್ನು ಅಧಿಕ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸುವ ಸಾಮಥ್ರ್ಯ ಅವರಿಗಿಲ್ಲ. ಹೀಗಾಗಿ, ಸರ್ಕಾರಿ ಶಾಲೆಗಳ ಮೂಲಕ ಗುಣಮಟ್ಟದ ಶಿP್ಷÀಣ ಒದಗಿಸಲು ಪ್ರಯತ್ನಿಸುತ್ತಾ ಬಂದಿದ್ದೇನೆ ಎಂದು ಹೇಳಿದರು.

ಶಿಕ್ಷಣ ದುಬಾರಿಯಾಗುತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿತ ಶುಲ್ಕವನ್ನು ಪಡೆಯಬೇಕು ಎಂಬುದನ್ನು ಜಾರಿಗೊಳಿಸಲಾಗಿದೆ. ಖಾಸಗಿ ಶಾಲಾ-ಕಾಲೇಜುಗಳಂತೆಯೇ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ನೀಡ ಲಾಗುತ್ತಿದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ 250 ರೂ. ಶುಲ್ಕದಲ್ಲಿ ಶಿಕ್ಷಣ ಪಡೆಯಬಹುದು. ಆದ್ದರಿಂದ ಪ್ರತಿಯೊ ಬ್ಬರು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆದುಕೊಳ್ಳಿ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗುವ ಮಟ್ಟದಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ರಾಜ್ಯ ಸರ್ಕಾರ ಜನತೆಗೆ ನೀಡಿದೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಜತೆಗೆ ಪರೀಕ್ಷೆಯಲ್ಲಾಗುವ ಅಕ್ರಮಗಳನ್ನು ತಡಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇಲ್ಲಿನ ಹಲವು ಮನೆಗಳಲ್ಲಿ ಮಕ್ಕಳು ಇದೇ ಮೊದಲ ಬಾರಿಗೆ ಶಾಲೆಗೆ ಹೋಗುತ್ತಿz್ದÁರೆ. ಹೀಗಾಗಿ, ಆರಂಭದಲ್ಲಿ ಈ ಕ್ಷೇತ್ರದಲ್ಲಿ ಪ್ರಾಥಮಿಕ ಶಿP್ಷÀಣವನ್ನು ಬಲಪಡಿಸಲು ಹೆಚ್ಚಿನ ಗಮನ ನೀಡಿz್ದÉ. 2016-17 ರಲ್ಲಿ ನಾಲ್ಕು ಪಿಯು ಕಾಲೇಜು ಗಳಿಗೆ ಮಂಜೂರಾತಿ ದೊರಕಿಸಿಕೊಟ್ಟಿ z್ದÉೀನೆ. ಇಂದು ಉದ್ಘಾಟನೆಯಾಗಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕೆ ಶಾಸಕರ ನಿಧಿ ಯಿಂದ 50 ಲP್ಷÀ ನೀಡಿದ್ದು, ಬಾಕಿ ಹಣವನ್ನು ನಗರಾಭಿವೃದ್ಧಿ ಪ್ರಾಧಿಕಾರ ನೀಡಿದೆ ಎಂದರು.

ಖಾಸಗಿ ಕಾಲೇಜುಗಳಿಗಿಂತ ಸುಸಜ್ಜಿತ ವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಕಲಾ ಮತ್ತು ವಾಣಿಜ್ಯ ವಿಭಾ ಗಕ್ಕೆ ವಿದ್ಯಾರ್ಥಿನಿಯರು ದಾಖಲಾಗು ತ್ತಿದ್ದು, ವಿಜ್ಞಾನಕ್ಕೂ ಆದ್ಯತೆಯನ್ನು ನೀಡಲಾಗಿದೆ. ಅಲ್ಲದೆ ನಿಗದಿ ಪಡಿಸಿದ ದಿನಾಂಕದೊಳಗೆ ದಾಖಲಾಗಿ ದಂಡ ಪಾವತಿಸಬೇಡಿ. ಸರ್ಕಾರಿ ಶಾಲಾ-ಕಾಲೇ ಜನ್ನು ತಮ್ಮದೆಂದು ಭಾವಿಸಿ, ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.

ಇದೇ ವೇಳೆ ಮುಡಾ ಅನುದಾನದಲ್ಲಿ ನಿರ್ಮಿಸಿರುವ ಕಾಲೇಜು ಕಟ್ಟಡವನ್ನು ಪದವಿ ಪೂರ್ವ ಶಿP್ಷÀಣ ಇಲಾಖೆಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮೇಯರ್ ಪುಪ್ಪ ಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹಮದ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎನ್.ರತ್ನ, ಮೈಸೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ್ ಕುಮಾರ್, ನಗರಪಾಲಿಕೆ ಸದಸ್ಯರಾದ ಅನ್ವರ್ ಬೇಗ್, ಶಾಂತಕುಮಾರಿ, ಹಜೀರಾ ಸಲ್ಮಾ, ನಗರ ಪಾಲಿಕೆ ಮಾಜಿ ಸದಸ್ಯ ಸೌಕತ್ ಪಾಷಾ, ಕಾಲೇಜು ಪ್ರಾಂಶುಪಾಲೆ ಧನ್ವಂತರಿ, ಮುಡಾ ಇಂಜಿನಿಯರ್‍ಗಳಾದ ಜಿ.ಸುವರ್ಣ, ಪ್ರಭಾ ಕರ್, ಮೋಹನ್, ಸ್ಥಳೀಯ ಮುಖಂಡ ರಾದ ನರಸಿಂಹಮೂರ್ತಿ, ಕಲೀಲ್ ರೆಹಮಾನ್, ಮುದಾಸಿರ್, ಸತ್ಯರಾಜ್, ಪ್ರದೀಪ್, ಅಬ್ದುಲ್ ಖಾದರ್ ಸಾಹಿದ್ ಉಪಸ್ಥಿತರಿದ್ದರು.

ಐಎಂಎ ಸಂಸ್ಥೆಯಲ್ಲಿ ಹಣ ಹೂಡಿದ ಮೈಸೂರಿಗರಿಗೆ ಶಾಸಕ ತನ್ವೀರ್ ಸೇಠ್ ಅಭಯ
ಮೈಸೂರು: ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ, ಮೋಸ ಹೋಗಿರುವ ಮೈಸೂರಿಗರು ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಭರವಸೆ ನೀಡಿದರು.

ಮೈಸೂರಿನ ರಾಜೀವ್‍ನಗರ 2ನೇ ಹಂತದಲ್ಲಿ ನಿರ್ಮಿಸಿ ರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇವತ್ತು ಉಡಾಫೆ ಮಾತನಾಡುವವವರಿಗೆ ತಲೆಕೆಡಿಸಿಕೊಳ್ಳಬೇಡಿ. ನೆಮ್ಮದಿ ಜೀವನವನ್ನು ಸಾಗಿಸುವ ಆಸೆಯಿಂದ ಹಣ ಹೂಡಿಕೆ ಮಾಡಿ ದ್ದಾರೆ. ಕಾನೂನು ರೀತಿಯಲ್ಲಿ ಯಾರಿಂದ ತಪ್ಪಾಗಿದೆ ಎಂಬು ದರ ಪರಿಶೀಲನೆ ಜತೆಗೆ ಹೂಡಿಕೆದಾರರಿಗೆ ತಮ್ಮ ಹಕ್ಕು ದೊರಕುವಂತೆ ಮಾಡಲು ಸಹಾಯ ಮಾಡುತ್ತೇನೆ ಎಂದರು.

ಹೂಡಿಕೆದಾರರು ದೂರು ನೀಡುವಾಗ ಪೂರಕವಾದ ದಾಖಲಾತಿಗಳನ್ನು ನೀಡಿ. ನಿಮ್ಮ ಮಾಹಿತಿ ಸಂಪೂರ್ಣವಾಗಿರಲಿ. ಹಣ ಕಳೆದುಕೊಂಡವರ ರಕ್ಷಣೆಗೆ ನಿಲ್ಲುತ್ತೇವೆ. ಯಾವುದೇ ಗಾಬರಿಪಡುವ ಅಗತ್ಯವಿಲ್ಲ. ಇಮೇಲ್ ಮೂಲಕವೂ ದೂರನ್ನು ದಾಖಲಿಸಬಹುದು. ಮೈಸೂರು ನಗರದಲ್ಲಿ ಬರುವ ಒಟ್ಟಾರೆ ದೂರುಗಳನ್ನು ಒಂದು ಎಫ್‍ಐಆರ್ ಮಾಡಲು ಸೂಚಿಸಲಾಗಿದೆ.

ಅದೇ ರೀತಿಯಲ್ಲಿ ಕೊಡಗು, ಮಂಡ್ಯ, ಚಾಮರಾಜನಗರ ದಲ್ಲಿಯೂ ಒಟ್ಟಾರೆ ದೂರುಗಳನ್ನು ಆದರಿಸಿ ಇಂದು ಎಫ್‍ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗ ಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.

ಮೈತ್ರಿ ಧರ್ಮ ಪಾಲನೆಯಿಂದ ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ
ಸಂಪುಟ ಪುನರ್ ರಚನೆ ಮಾಡ ಬೇಕು ಎಂಬ ಬೇಡಿಕೆ ಇತ್ತು. ಆದರೆ, ಮೈತ್ರಿ ಸರ್ಕಾರ ಐದು ವರ್ಷ ನಡೆಯುವುದು ಮುಖ್ಯವಾಗಿದ್ದು, ವಿಸ್ತರಣೆ ಮಾಡಲಾಗು ತ್ತದೆ. ಕೆಲಸ ಮಾಡುವವರಿಗೆ ಅವಕಾಶ ನೀಡಬೇಕು. ಇದರಿಂದ ಪಕ್ಷವನ್ನು ಮತ್ತಷ್ಟು ಕಟ್ಟಲು ಸಾಧ್ಯವಾಗುತ್ತದೆ. ಮೈತ್ರಿ ಧರ್ಮ ಪಾಲನೆಯಿಂದಾಗಿ ಇಬ್ಬರು ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನವನ್ನು ನೀಡಿದೆ. ಸರ್ಕಾರ ಮೈತ್ರಿ ಸರಿಯಾದರೂ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಯಾಗಬಾರದಿತ್ತು. ಕಾಂಗ್ರೆಸ್ ಪ್ರತ್ಯೇಕ ವಾಗಿ ಸ್ಪರ್ಧಿಸಿದ್ದರೆ 8 ರಿಂದ 10 ಸ್ಥಾನಗಳನ್ನು ಗೆಲ್ಲುತ್ತಿತ್ತು. ಈ ವಿಚಾರ ವಾಗಿ ಈಗಾಗಲೇ ಪಕ್ಷದ ವೇದಿಕೆ ಗಳಲ್ಲಿ ಚರ್ಚೆ ಮಾಡಿದ್ದೇವೆ. ಈ ಸಂಬಂಧ ಯಾವ ನಾಯಕರನ್ನು ದೂಷಿಸುವುದು ಸರಿಯಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

Translate »