ಡಿ.8ರಂದು ಮಡಿಕೇರಿಯಲ್ಲಿ ಬೃಹತ್ ರ‍್ಯಾಲಿ
ಮೈಸೂರು

ಡಿ.8ರಂದು ಮಡಿಕೇರಿಯಲ್ಲಿ ಬೃಹತ್ ರ‍್ಯಾಲಿ

December 5, 2018

ಮೈಸೂರು:  ಕೊಡಗು ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಚತುಷ್ಪಥ ಹೆದ್ದಾರಿ ನಿರ್ಮಾಣ ಸೇರಿದಂತೆ 10 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳು ಜಿಲ್ಲೆಯ ವಿನಾಶಕ್ಕೆ ಕಾರಣವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿರುವ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ, ಈ ಸಂಬಂಧ ಡಿ.8 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲು ನಿರ್ಧರಿಸಿದೆ.

ಕೊಡಗಿನಲ್ಲಿ ಎರಡು ರೈಲ್ವೆ ಮಾರ್ಗ ಹಾಗೂ ಮೈಸೂರು-ಕುಶಾಲನಗರ-ಮಡಿಕೇರಿ ಮಾರ್ಗದಲ್ಲಿ ಚತುಷ್ಪಥ ರಸ್ತೆ ನಿರ್ಮಿಸುವುದು ಸೇರಿದಂತೆ ಒಟ್ಟು ನಾಲ್ಕು ಬಹುಪಥ ಹೆದ್ದಾರಿಗಳನ್ನು ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ. ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯ ಮಾನವ ನಿರ್ಮಿತ ಎಂದು ಭಾರತೀಯ ಭೌಗೋಳಿಕ ಸರ್ವೇ (ಜಿಎಸ್‍ಐ) ವರದಿ ನೀಡಿದೆ. ಇಷ್ಟಾದರೂ ಯೋಜನೆಗಳ ಹೆಸರಿ ನಲ್ಲಿ ಜಿಲ್ಲೆಯಲ್ಲಿ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಸುವಂತಹ ಚಟುವಟಿಕೆಗಳನ್ನು ಅನು ಷ್ಠಾನಗೊಳಿಸಲು ಸರ್ಕಾರ ಉತ್ಸುಕತೆ ತೋರು ತ್ತಿದೆ ಎಂದು ವೇದಿಕೆ ಆರೋಪಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಘಟಕರೂ ಆದ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಸಂಚಾಲಕ ಕರ್ನಲ್ (ನಿವೃತ್ತ) ಸಿ.ಪಿ.ಮುತ್ತಣ್ಣ, ಆರ್‍ಟಿಐ ಮೂಲಕ ಮಾಹಿತಿಪಡೆದಂತೆ ಕೊಡಗು ಜಿಲ್ಲೆಯಲ್ಲಿ 2 ರೈಲ್ವೆ ಮಾರ್ಗ ಹಾಗೂ ನಾಲ್ಕು ಬಹುಪಥ ರಸ್ತೆ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಈ ಪೈಕಿ ಮೊದಲ ಹಂತದಲ್ಲಿ ಮೈಸೂರು-ಕುಶಾಲನಗರ-ಮಡಿ ಕೇರಿ ಮಾರ್ಗವನ್ನು ಚತುಷ್ಪಥ ರಸ್ತೆ ಯಾಗಿ ನಿರ್ಮಿಸಲು ಸರ್ಕಾರ ಪ್ರಕ್ರಿಯೆ ಆರಂಭಿಸುತ್ತಿದೆ. ಆದರೆ ಈ ಯೋಜನೆಗಳು ಕೊಡಗಿನ ಮೇಲೆ ದುಷ್ಪರಿಣಾಮ ಉಂಟು ಮಾಡಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರು-ಕುಶಾಲನಗರ-ಮಡಿ ಕೇರಿ ಮಾರ್ಗದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್‍ವರೆಗೆ ಕುಶಾಲನಗರದಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸ ಲಾಗಿದೆ. ಈ ವೇಳೆ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. ಈ ಎಲ್ಲಾ ಯೋಜನೆ ಗಳು ಕೊಡಗು ಜಿಲ್ಲೆಗೆ ಮಾರಕವಾಗ ಲಿದ್ದು, ಇದರ ದುಷ್ಪರಿಣಾಮ ಕೇವಲ ಕೊಡಗಿಗೆ ಮಾತ್ರ ಸೀಮಿತವಲ್ಲ. ಕೊಡಗು ಕಾವೇರಿ ನದಿಯ ಮೂಲ ಸ್ಥಾನವಾಗಿದ್ದು, ದಕ್ಷಿಣ ಭಾರತದ ಸುಮಾರು 8 ಕೋಟಿ ಜನರಿಗೆ ನೀರುಣಿಸುವ ಮೂಲಕ ಜೀವನಾಡಿ ಯಾಗಿದೆ. ಸದರಿ ಯೋಜನೆಗಳು ಇದಕ್ಕೆ ಮಾರಕವಾಗಲಿದೆ ಎಂದು ಹೇಳಿದರು.

ಮೈಸೂರು ಜನತೆ ಕೈಜೋಡಿಸಲಿ: ಕೋಟ್ಯಾನು ಕೋಟಿ ಜನತೆಯ ನೀರು ಹಾಗೂ ಆಹಾರ ಭದ್ರತೆ, ಆ ಮೂಲಕ ಆರ್ಥಿಕ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾವೇರಿ ನದಿಯ ಮೂಲ ಸ್ಥಾನವನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ. ಹೀಗಾಗಿ ಇದೊಂದು ರಾಷ್ಟ್ರೀಯ ವಿಷಯವಾಗಿ ಪರಿಗಣಿತವಾಗಬೇಕಿದ್ದು, ಕಾವೇರಿ ನೀರನ್ನು ಅವಲಂಬಿ ಸಿರುವ ಮೈಸೂರು, ಮಂಡ್ಯ, ಬೆಂಗಳೂರು ನಗರ ಹಾಗೂ ಗ್ರಾಮಾಂತರದ ಜನತೆಯೂ ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಮುತ್ತಣ್ಣ ಕೋರಿದರು.

ಮರ ಕಡಿದು ಮಳೆ ಬಾರದಂತಾಯಿತು: ವೇದಿಕೆ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ, ಮಾರಕ ಯೋಜನೆಗಳು ಈಗಾಗಲೇ ಕೊಡಗಿನಲ್ಲಿ ಅನುಷ್ಠಾನಗೊಂಡು ಸಾಕಷ್ಟು ಅನಾಹುತವನ್ನು ಸೃಷ್ಟಿಸಿವೆ. ಇತ್ತೀಚೆಗೆ ಜಲಪ್ರಳಯದಿಂದ ಕೊಡಗು ಜಿಲ್ಲೆ ತತ್ತರಿಸಿದೆ. ಹೀಗೆ ಅವಘಡಗಳು ಕಣ್ಮುಂದೆ ಇದ್ದರೂ ನಮ್ಮ ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಕೊಡಗಿಗೆ ಮಾರಕ ಆಗುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉತ್ಸಾಹ ತೋರುತ್ತಿವೆ. 2015-16ನೇ ಸಾಲಿನಲ್ಲಿ ಮೈಸೂರು-ಕೋಜಿಕೋಡು 400 ಕೆವಿ ಹೈಟೆನ್ಷನ್ ವಿದ್ಯುತ್ ಲೈನ್ ನಿರ್ಮಿಸಲು 54 ಸಾವಿರ ಮರಗಳನ್ನು ಕಡಿಯಲಾಗಿದೆ. ಇದರ ಪರಿಣಾಮ ಜೂನ್ ಮಾಸದಲ್ಲಿ ವಾಡಿಕೆಯಂತೆ ಮಳೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯಲ್ಲಿ ರಸ್ತೆ, ವಿದ್ಯುತ್ ಸಂಪರ್ಕ ಕಾಣದ ಪ್ರದೇಶಗಳಿವೆ. ಇವುಗಳ ಅಭಿವೃದ್ಧಿಗೆ ಹಣ ತೊಡಗಿಸುವುದನ್ನು ಬಿಟ್ಟು ಮಾರಕವಾಗುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿರುವುದು ದುರಂತ. ಹೀಗೆ ಕೊಡಗಿಗೆ ಪ್ರಯೋಜನವಾದ ಯೋಜನೆಗಳಿಗೆ ಬದಲು ಇಲ್ಲಿನ ಭತ್ತ, ಕಾಫಿ ಹಾಗೂ ಮೆಣಸಿಗೆ ಬೆಂಬಲ ಬೆಲೆಯನ್ನು ಸರ್ಕಾರ ನೀಡಲಿ ಎಂದು ಒತ್ತಾಯಿಸಿದರು.

4 ಲಕ್ಷ ಮರಗಳಿಗೆ ಕೊಡಲಿ ಪೆಟ್ಟು: ಉದ್ದೇಶಿತ ಯೋಜನೆಗಳಿಂದ ಕೊಡಗಿನಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ. ಜೊತೆಗೆ ಸಾವಿರ ಸಂಸಾರಗಳು ಮನೆ-ಮಠ ಬಿಟ್ಟು ಸ್ಥಳಾಂತರಗೊಳ್ಳಬೇಕಾಗುತ್ತದೆ. ಚತುಷ್ಪಥ ಹೆದ್ದಾರಿ ಮಾಡುವ ಅಗತ್ಯವಿಲ್ಲ ಎಂಬ ಬಗ್ಗೆ ಕೊಡಗು ಜಿಲ್ಲಾ ಪಂಚಾಯಿತಿಯೂ ಈಗಾಗಲೇ ನಿಲುವು ಪ್ರಕಟಿಸಿದೆ. ಇರುವ ಅಳತೆಯಲ್ಲಿ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ಅಭಿವೃದ್ಧಿಗೊಳಿಸಿದರೆ ಜನತೆಗೆ ಉಪಯೋಗವಾಗಲಿದೆ ಎಂದು ರಾಜೀವ್ ಬೋಪಯ್ಯ ಹೇಳಿದರು. ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ಮೈಸೂರು ಸಂಚಾಲಕ ಗಣೇಶ್ ಅಯ್ಯಣ್ಣ, ಕಾರ್ಯಕರ್ತ ರವೀಂದ್ರ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಚಂದ್ರಮೋಹನ್ ಗೋಷ್ಠಿಯಲ್ಲಿದ್ದರು.

Translate »