ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲ ವೃತ್ತಿ ಶ್ರೇಷ್ಠವಾದದ್ದು ನ್ಯಾಯಾಧೀಶ ಡಿ.ವಿನಯ್ ಅಭಿಮತ
ಚಾಮರಾಜನಗರ

ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲ ವೃತ್ತಿ ಶ್ರೇಷ್ಠವಾದದ್ದು ನ್ಯಾಯಾಧೀಶ ಡಿ.ವಿನಯ್ ಅಭಿಮತ

December 4, 2018

ಚಾಮರಾಜನಗರ: ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲ ವೃತ್ತಿ ಶ್ರೇಷ್ಠವಾ ದದ್ದು, ಎಲ್ಲಾ ಹುದ್ದೆಗಳಿಗಿಂತ ವಕೀಲ ವೃತ್ತಿ ಉತ್ತಮವಾದುದಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಡಿ.ವಿನಯ್ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ವಕೀಲರ ಸಂಪs ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮÁತನಾಡಿದ ಅವರು ಭಾರತದ ಪ್ರಥಮ ರಾಷ್ಟ್ರದs್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್‍ರವರ ಹುಟ್ಟುಹಬ್ಬವನ್ನು ವಕೀಲರ ದಿನಾಚರಣೆಯಾಗಿ ಆಚರಿಸು ತ್ತಿದ್ಧು ವಕೀಲ ವೃತ್ತಿಗೆ ತನ್ನದೇ ಆದ ಘನತೆ ಇದೆ. ಇದನ್ನು ಉಳಿಸಿಕೊಳ್ಳುವ ಮತ್ತು ಹೆಚ್ಚಿಸಿಕÉೂಳ್ಳುವ ಜವಾಬ್ದಾರಿ ವಕೀಲರ ಮೇಲೆ ಇದೆ ಎಂದರು.
ಜಿಲ್ಲಾ ವಕೀಲರ ಸಂಘ ಏರ್ಪಡಿಸಿದ್ದ ವಿವಿದs ಆಟೋಟ ಮತ್ತು ಸ್ಪರ್ಧಾ ವಿಜೇತ ರಿಗೆ ಹಿರಿಯ ಸಿವಿಲ್ ನ್ಯಾಯಾಧೀಶರ ಎಂ.ರಮೇಶ ಬಹುಮಾನ ವಿತರಿಸಿ ಮಾತ ನಾಡಿ, ವೈದ್ಯರು ಜೀವ ಉಳಿಸಿದರೆ ವಕೀಲರು ಜೀವನ ಉಳಿಸುತÁ್ತರೆ. ಈ ನಿಟ್ಟಿನಲ್ಲಿ ವಕೀಲ ವೃತ್ತಿ ಪವಿತ್ರವಾದದ್ಧು, ವಕೀಲರು ಪರಿಶ್ರಮದಿಂದ ವೃತ್ತಿ ನಡೆಸಿ ದರೆ ಮಾತ್ರ ಜೀವನದಲ್ಲಿ ಸಪsಲರಾಗಲು ಸಾದs್ಯ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅದs್ಯಕ್ಷ ಉಮ್ಮ ತ್ತೂರು ಇಂದುಶೇಖರ್ ಕಾರ್ಯಕ್ರಮದ ಅದs್ಯಕ್ಷತೆ ವಹಿಸಿ ಮಾತನಾಡಿ ಸ್ವತಂತ್ರ್ಯ ಪೂರ್ವ ದಿಂದಲೂ ವಕೀಲ ವೃತ್ತಿಗೆ ಮಹತ್ವದ ಸ್ಥಾನ, ಗೌರವವಿದೆ. ವಕೀಲರು ಕಕ್ಷಿದಾರರ ಹಿತ ಬಯಸುವುದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ನ್ಯಾಯಾಧೀಶರ ಹಾಗೂ ವಕೀಲರ ಬಾಂಧವ್ಯ ಉತ್ತಮವಾಗಿದ್ದಲ್ಲಿ ಕಕ್ಷಿದಾರರಿಗೆ ನ್ಯಾಯಯುತ ಪರಿಹಾರ ಕಲ್ಪಿಸಬಹುದಾಗಿದೆ ಎಂದು ತಿಳಿಸಿದರು. ಹಿರಿಯ ವಕೀಲರಾದ ಕೆ.ಬಿ.ಶಿವರುದ್ರಪ್ಫ, ಪುಟ್ಟನಂಜಯ್ಯ ಡಿ.ನರಸಿಂಹಯ್ಯ ಅವರುಗಳನ್ನು ವಕೀಲರ ಸಂಘದಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಸಿ.ಜಿ.ವಿಶಾಲಾಕ್ಷಿ, ಸಿವಿಲ್ ನ್ಯಾಯಾ ಧೀಶೆ ವಿ.ದೀಪಾ, ತರಬೇತು ಸಿವಿಲ್ ನ್ಯಾಯಾಧೀಶ ಎಂ.ಪಿ.ಉಮೇಶ್, ಸರ್ಕಾರಿ ಅಭಿಯೋಜಕಿಯರಾದ ಲೋಲಾಕ್ಷಿ ಮತ್ತು ಉಷಾ, ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್‍ಕುಮಾರ್, ಯಳಂದೂರು ತಾಲೂಕು ವಕೀಲರ ಸಂಘದ ಅದs್ಯಕ್ಷ ಕೆ.ಬಿ.ಶಶಿದsರ್, ಜಂಟಿ ಕಾರ್ಯದರ್ಶಿ ಎಂ.ದಲಿತರಾಜು, ಖಜಾಂಜಿ ಎಸ್.ಜಿ.ಮಹಾಲಿಂಗಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್.ಎಸ್. ಮಹೇಂದ್ರ, ಕಾಗಲವಾಡಿ ಮಹೇಶ್ ಕುಮಾರ್, ಎಂ.ಎಸ್ ಮೋಹನ್ ಜಗದೀಶ್, ವಕೀಲೆ ಬಿ.ಮಮತ, ಇನ್ನಿತರರು ಹಾಜರಿದ್ದರು. ವಕೀಲರು ಮತ್ತು ನುರಿತ ಕಲಾವಿದರಿಂದ ಸಂಗೀತ ರಸ ಸಂಜೆಯನ್ನು ಏರ್ಪಡಿಸಲಾಗಿತ್ತು

Translate »