ಬೆಂಕಿ ಹಚ್ಚಿ ಪತ್ನಿ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ
ಚಾಮರಾಜನಗರ

ಬೆಂಕಿ ಹಚ್ಚಿ ಪತ್ನಿ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

December 4, 2018

ಚಾಮರಾಜನಗರ: ಬೆಂಕಿ ಹಚ್ಚಿ ಪತ್ನಿಯನ್ನು ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಚಾಮ ರಾಜನಗರ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ. ವಿನಯ್ ಅವರು ತೀರ್ಪು ನೀಡಿದ್ದಾರೆ. ಚಾಮರಾಜನಗರ ತಾಲೂಕು ಕೆರೆಹಳ್ಳಿ ಗ್ರಾಮದ ಮಂಜು ಶಿಕ್ಷೆಗೊಳಗಾದವನಾಗಿದ್ದು, ಈತನಿಗೆ ಹಾಸನ ಜಿಲ್ಲೆ ದೇವಿನಗರದ ನಂಜೇಗೌಡ ಎಂಬುವರ ಪುತ್ರಿಯನ್ನು 2007ರ ಏ.29 ರಂದು ಮದುವೆ ಮಾಡಿಕೊಡಲಾಗಿತ್ತು.

ಮದುವೆ ನಂತರ ತವರಿನಿಂದ ಹಣ ತರುವಂತೆ ಮಂಜು ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ. 2014ರ ಸೆಪ್ಟೆಂಬರ್‍ನಲ್ಲಿ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಎನ್ನಲಾಗಿದೆ. ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಂಜು ವಿನ ಪತ್ನಿ ಪೊಲೀಸರಿಗೆ ತನ್ನ ಪತಿಯೇ ತನಗೆ ಬೆಂಕಿ ಹಚ್ಚಿದ ಎಂದು ಹೇಳಿ ನೀಡಿ 2014ರ ಸೆ.6 ರಂದು ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಪಿದ್ದಳು.

ಈ ಸಂಬಂಧ ಚಾಮರಾಜ ನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾ ಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮಂಜುವಿಗೆ ಜೀವಾವಧಿ ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಎನ್. ಉಷಾ ವಾದ ಮಂಡಿಸಿದ್ದರು.

Translate »