ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಕ್ರಮ
ಕೊಡಗು

ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಕ್ರಮ

January 31, 2019

ವಿರಾಜಪೇಟೆ: ನೀರಿನ ಸಮಸ್ಯೆಗಳಿರುವ ಕಡೆಗಳಲ್ಲಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಾಗಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವಿರಾಜಪೇಟೆ ಬಳಿಯ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಬರ್ ಕಾಫಿಮಿಲ್ ಪಕ್ಕದ ಮಾದಂಡ ರಸ್ತೆಯಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕೊಡಗು ಜಿಲ್ಲಾ ಪಂಚಾಯಿತಿಯಿಂದ ರೂ.2 ಲಕ್ಷ ವೆಚ್ಚದಲ್ಲಿ ನೂತನ ಬೋರ್‍ವೆಲ್ ಅಳವಡಿಸಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯಕ್ಕೆ ಸ್ವಿಚ್ ಒತ್ತುವ ಮೂಲಕ ಚಾಲನೆ ನೀಡಿದ ಬೋಪಯ್ಯ, ಬಳಿಕ ಮಾತನಾಡುತ್ತ ಕೊಡಗು ಜಿಲ್ಲೆಯನ್ನು ಈಗಾಗಲೇ ಬರ ಪೀಡಿತ ಜಿಲ್ಲೆ ಎಂದು ಗುರುತಿ ಸಲಾಗಿದೆ. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕಾಗಿದೆ ಎಂದರು.

ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಜಿಲ್ಲಾ ಪಂಚಾಯಿತಿ ವತಿಯಿಂದ ನೂತನ ಬೋರ್ವೆಲ್ ಹಾಗೂ ವಿದ್ಯುತ್ ಸಂಪರ್ಕಕ್ಕೆ ನೂತನ ಟ್ರಾನ್ಸ್‍ಫಾರಂ ಅಳವಡಿಸಿ ಕದನೂರು ಮತ್ತು ಕೆ.ಬೊಯಿಕೇರಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳು ವಂತಾಗಬೇಕು ಎಂದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯರಾದ ಆಲತಂಡ ಸೀತಮ್ಮ, ಮಾಳೇಟಿರ ಪ್ರಶಾಂತ್ ಉತ್ತಪ್ಪ, ಕದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್.ಶೋಭ, ಉಪಾಧ್ಯಕ್ಷೆ ತಟ್ಟಂಡ ರಾಣಿ ಸರಸ್ವತಿ, ಸದಸ್ಯರಾದ ಪಿ.ವಾಣಿ, ಕೆ.ಬಿ. ದೇವಯ್ಯ, ಮಹ್ಮದ್ ಹನೀಫ್, ಮಾಜಿ ಸದಸ್ಯರಾದ ಎ.ಎಂ.ರಾಜ ನಂಜಪ್ಪ, ಕೆ.ಎಂ.ಧನು ಬೋಪಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಜಿ.ಪೂಣಚ್ಚ, ಎಂ.ಆರ್.ರವಿ, ಜಿಲ್ಲಾ ಬಿಜೆಪಿ ಸಮಿತಿಯ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಮಲ್ಲಂಡ ಮಧುದೇವಯ್ಯ, ಜೋಕಿಂ ರಾಡ್ರಿಗಾಸ್, ವಿಷ್ಣು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Translate »