ಕೊಳ್ಳೇಗಾಲ: 4 ದಿನದ ಹಿಂದೆ ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆ ಯಾಗಿರುವ ಘಟನೆ ತಾಲೂಕಿನ ಸಿಲಕಲ್ ಪುರದಲ್ಲಿ ನಡೆದಿದೆ.
ಗ್ರಾಮದ ಪ್ರೀತಂ(7) ಮೃತಪಟ್ಟ ಬಾಲಕ. ಗ್ರಾಮದ ನಂಜುಂಡ ಮತ್ತು ಸವಿತಾ ಎಂಬ ದಂಪತಿ ಪುತ್ರನಾಗಿದ್ದು, ಕಳೆದ ಅ.6 ರಂದು ಕಾಣೆಯಾಗಿದ್ದ. ಆತಂಕಗೊಂಡ ಪೆÇೀಷಕರು ದೂರು ನೀಡಿದ್ದರು.
ಇಂದು ಮಧ್ಯಾಹ್ನ ಗ್ರಾಮದ ಸಮೀಪದ ಕೆರೆಯಲ್ಲಿ ಬಾಲಕನ ಶವ ಪತ್ತೆ ಯಾಗಿದೆ. ಪೆÇೀಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಕೊಳ್ಳೇಗಾಲ ಗ್ರಾಮಾಂತರ ಪೆÇಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.