ಮೈಸೂರು, ಮಾ.28(ಎಸ್ ಬಿಡಿ)- ಮೈಸೂರು ಜಿಲ್ಲೆಯಲ್ಲಿ ಒಟ್ಟು 1832 ಜನರ ಮೇಲೆ ನಿಗಾವಹಿಸಲಾಗಿದೆ.
ಇವರಲ್ಲಿ 1192 ಮಂದಿಯನ್ನು 14 ದಿನಗಳ ಗೃಹ ದಿಗ್ಭಂದನದಲ್ಲಿಟ್ಟು ನಿಗಾ ಇಡಲಾಗಿದ್ದು, ಈವರೆಗೆ 637 ಮಂದಿ ಈ ಪ್ರಕ್ರಿಯೆ ಪೂರೈಸಿದ್ದಾರೆ.
ಒಟ್ಟು 69 ಸ್ಯಾಂಪಲ್ ಟೆಸ್ಟ್ ನಲ್ಲಿ 65 ನೆಗಿಟಿವ್ ಹಾಗೂ 3 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. 1 ಸ್ಯಾಂಪಲ್ ರಿಜೆಕ್ಟ್ ಆಗಿದ್ದು, ಸದ್ಯ ಕೆ.ಆರ್.ಆಸ್ಪತ್ರೆ ಐಸೋಲೇಷನ್ ವಾರ್ಡ್ ನಲ್ಲಿ ಮೂವರು ದಾಖಲಾಗಿದ್ದಾರೆ.
ಒಟ್ಟಾರೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ, ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದರೂ ಮೈಸೂರಿನಲ್ಲಿ ಮೂವರಿಗೆ ಕೊರೊನಾ ಇರುವುದು ದೃಢಪಟ್ಟಿರುವುದು ಆತಂಕ ಹೆಚ್ಚಿಸಿದೆ. ಸ್ವಯಂ ದಿಗ್ಭಂದನವೇ ಕೊರೊನಾ ನಿಯಂತ್ರಣಕ್ಕೆ ಪರಿಹಾರವಾಗಿದ್ದು, ಪ್ರತಿಯೊಬ್ಬರು ಪಾಲಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.