ಮೈಸೂರು,ಜು.21(ಎಂಕೆ)-ಸಣ್ಣ ಸಣ್ಣ ಸೇವೆಯಲ್ಲೂ ಆನಂದ ಪಡುವವನೇ ನಿಜವಾದ ಸೇವಕ ಎಂದು ಜವಳಿ ಮತ್ತು ಕೈಮಗ್ಗ ಇಲಾಖೆ ಆಯುಕ್ತ ಡಾ.ಎಂ.ಆರ್.ರವಿ ಹೇಳಿದರು.
ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ನಡೆದ ರೋಟರಿ ಹೆರಿಟೇಜ್ ಕ್ಲಬ್ ಮೈಸೂರಿನ 2019-20ನೇ ಸಾಲಿನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರೆ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಳ್ಳೆಯ ಹೃದಯವಂತರಿಂದ ಸಮಾಜದಲ್ಲಿ ಒಳ್ಳೆಯ ಕೆಲಸವಾಗುತ್ತದೆ. ರೋಟರಿ ಸಂಸ್ಥೆ ಈ ನಿಟ್ಟಿನಲ್ಲಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಸಮಾಜ ನಮಗೆ ಸಾಕಷ್ಟು ನೀಡಿದೆ. ಅದರಂತೆ ಸಮಾಜವು ನಮ್ಮಿಂದ ಸೇವೆ ಯನ್ನು ಬಯಸುತ್ತದೆ. ಇದಕ್ಕೂ ಮೊದಲು ಸಮಾಜ ಸೇವೆ ವ್ಯಾಖ್ಯಾನದ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಸೇವೆಯಿಂದ ಸಮಾಜದ ಸಮಸ್ಯೆಗಳನ್ನು ಸರಿಪಡಿಸ ಬಹುದು. ಸೇವೆ ಹವ್ಯಾಸ, ಫ್ಯಾಷನ್ ಮತ್ತು ಬದ್ಧತೆಯಿಂದ ಕೂಡಿರಬೇಕು. ಇಂದು ಸಮಾಜ ಸೇವಕರು ಸಾಕಷ್ಟು ಜನರಿದ್ದಾರೆ. ಆದರೆ, ನಿಸ್ವಾರ್ಥ ಸೇವೆ ಮಾಡುವವರು ಮಾತ್ರ ವಿರಳ ಎಂದು ಹೇಳಿದರು.
ಮೈಸೂರು ಹೆರಿಟೇಜ್ ಕ್ಲಬ್ ಹೆಸರಿ ನಲ್ಲೇ ವಿಶೇಷತೆಯಿದೆ. ಏಕೆಂದರೆ ದೇಶ ದಲ್ಲಿ ಹಲವಾರು ಸಾಂಸ್ಕøತಿಕ, ಪಾರಂ ಪರಿಕ, ಸಂಸ್ಕøತಿ ಹಿನ್ನೆಲೆಯಳ್ಳ ನಗರಿ ಗಳಿವೆ. ಆದರೆ, ಎಲ್ಲವೂ ಒಟ್ಟಿಗೆ ಇರು ವುದು ಮೈಸೂರಿಗೆ ಮಾತ್ರ. ರೋಟರಿ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯ ಗಳನ್ನು ಮಾಡುತ್ತಿದ್ದು, 2019-20ನೇ ಸಾಲಿನ ಪದಗ್ರಹಣ ಮಾಡಿರುವ ತಲಕಾಡು ಮಂಜುನಾಥ್ ಅಧ್ಯಕ್ಷತೆಯಲ್ಲಿ ಉತ್ತಮ ಕೆಲಸಗಳಾಗಲಿ ಎಂದು ಆಶಿಸಿದರು.
ತಲಕಾಡು ಮಂಜುನಾಥ್ ಮುಂದೆ ದೊಡ್ಡ ಸವಾಲುಗಳಿವೆ. ಸಂಘಟನೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ. ಸೇವೆಯೆಂಬುದು ಸುಲಭ ವಲ್ಲ. ತ್ಯಾಗ, ತಾಳ್ಮೆ ಇದ್ದರೆ ಮಾತ್ರ ಸಮಾಜ ಸೇವೆ ಸಾಧ್ಯ. ಇಂದು ನನ್ನದು, ನನ್ನ ಮನೆ ಎನ್ನುವರೇ ಹೆಚ್ಚು ಎಂದರು.
ಡಿಜಿಟಲ್ ತಂತ್ರಜ್ಞಾನ ಪ್ರಪಂಚದ ನಾನಾ ದೇಶಗಳ ಕೊಂಡಿಯಾದಂತೆ ರೋಟರಿ ಸಂಸ್ಥೆ ಸಮಾಜ ಕಾರ್ಯದಲ್ಲಿ ವಿಶ್ವವನ್ನು ಒಗ್ಗೂಡಿಸುವ ಸಂಪರ್ಕದ ಕೊಂಡಿಯಾಗಿದೆ. ಆದರೆ, ಅದೇ ತಂತ್ರ ಜ್ಞಾನ ಸಂಬಂಧಗಳನ್ನು ಕಸಿದುಕೊಳ್ಳುತ್ತಿ ರುವುದು ಬೇಸರ ಸಂಗತಿ. ನಮ್ಮ ಮಕ್ಕಳ ಜೊತೆ ಒಟ್ಟಿಗೆ ಕುಳಿತು ಊಟ ಮಾಡಲು ಮೊಬೈಲ್‍ನಲ್ಲಿ ಸಂದೇಶ ಕಳುಹಿಸುವ ಪರಿಸ್ಥಿತಿ ಎದುರಾಗಿದೆ ಎಂದರು.
ರೋಟರಿ ಹೆರಿಟೇಜ್ ಕ್ಲಬ್ ಸದಸ್ಯರು ಗೋವುಗಳನ್ನು ದಾನವಾಗಿ ನೀಡುತ್ತಿರು ವುದು ಎಲ್ಲರೂ ಮೆಚ್ಚುವ ವಿಷಯ. ದಾನ ಕೊಡುವ ಮೂಲಕ ಮತ್ತೊಬ್ಬರ ಜೀವನ ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡುವುದು ಸೇವೆಯ ನಿಜವಾದ ಸಾರ್ಥಕತೆ ಎಂದರು.
ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಿ: ಸಮುದಾಯಕ್ಕೆ ಮಾಡುವ ಸೇವೆ ಎಲೆ ಮರೆ ಕಾಯಿಯಂತಿರಬೇಕು. ಇದನ್ನು ಆಡಂಬರದ ರೀತಿ ಆಚರಿಸಬಾರದು. ಸಮಾಜ ಸೇವೆಯನ್ನು ನಮ್ಮ ಆತ್ಮಸಾಕ್ಷಿಗೆ ಅನು ಗುಣವಾಗಿ ಬದುಕು ರೂಪಿಸಿಕೊಳ್ಳಬೇಕು ಎಂದರು.
70 ವರ್ಷಗಳ ನಂತರ ಸ್ವಚ್ಛತೆ ಬಗ್ಗೆ ಅರಿವು: ಪ್ರಧಾನಿ ನರೇಂದ್ರಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸ್ವಚ್ಛತೆ ಬಗ್ಗೆ ನಮ್ಮ ದೇಶದ ಜನರಲ್ಲಿ ಜಾಗೃತಿ ಮೂಡಿಸಿದರು. ಅವರು ಸ್ವಚ್ಛತೆ ಬಗ್ಗೆ ತೆಗೆದುಕೊಂಡ ಬಿಗಿ ನಿಲುವಿ ನಿಂದ ಇಂದು ಹಳ್ಳಿಯಿಂದ ಡೆಲ್ಲಿಯ ವರೆಗೂ ಜಾಗೃತಿ ಮೂಡುತ್ತಿರುವುದು ಉತ್ತಮ ವಿಚಾರ. ಆದರೆ, ಈ ವಿಷಯ ದಲ್ಲಿ 70 ವರ್ಷಗಳಿಂದ ನಮ್ಮ ದೇಶದಲ್ಲಿ ಯಾರೂ ಜಾಗೃತಿ ಮೂಡಿಸದಿರುವುದು ಹಿಂದಿನ ಆಡಳಿತದ ಕಾರ್ಯ ವೈಖರಿಗೆ ಕೈಗನ್ನಡಿ ಎಂದರು.
ಸಮಾಜಕ್ಕಿನ್ನೂ ಶಿಸ್ತು ಬಂದಿಲ್ಲ: ಪ್ರತಿನಿತ್ಯ ನಾವು ಎಷ್ಟು ಸಾಧ್ಯವೋ ಅಷ್ಟನ್ನೂ ಪಡೆಯಬೇಕೆಂದು ಕಾತುರರಾಗಿರುತ್ತೇವೆ. ಇದನ್ನು ಗಮನಿಸಿದರೆ, ಸಮಾಜಕ್ಕಿನ್ನೂ ಶಿಸ್ತು ಅಳವಡಿಕೆಯಾಗಿಲ್ಲ ಎಂದರ್ಥ. ಇದರ ಜೊತೆಗೆ ಒಳಿತನ್ನು ಅರಿಯುವ ತಾಳ್ಮೆ ಇಂದಿನ ಯುವ ಪೀಳಿಗೆ ಅಳವಡಿ ಸಿಕೊಳ್ಳುತ್ತಿಲ್ಲ. ಎಲ್ಲಿಯವರೆಗೆ ಸಮಾಜದ ಋಣ ನಮ್ಮ ಮೇಲಿರುತ್ತದೋ ಅಲ್ಲಿಯ ವರೆಗೆ ಸಮಾಜಕ್ಕೆ ಕೊಡುಗೆ ನೀಡಬೇ ಕೆಂಬುದನ್ನು ಎಲ್ಲರೂ ಅರಿಯಬೇಕು. ಒಳ್ಳೆಯ ಕೆಲಸ ಮಾಡದಿದ್ದರೂ ಕೆಟ್ಟ ಗುಣಗಳನ್ನು ಅಳವಡಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
2018-19ನೇ ಸಾಲಿನ ರೋಟರಿ ಹೆರಿಟೇಜ್ ಕ್ಲಬ್ ಅಧ್ಯಕ್ಷ ರೊ.ಶಿವರುದ್ರಪ್ಪ ಅವರಿಂದ 2019-20ನೇ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರೊ.ತಲಕಾಡು ಮಂಜುನಾಥ್ ಅವರಿಗೆ ಮಾಜಿ ಜಿಲ್ಲಾ ಗೌರ್ನರ್ ಕೆ.ಎ.ಕುರಿ ಯಚ್ಚನ್(ಕುರಿಯನ್) ಸಮ್ಮುಖದಲ್ಲಿ ಅಧಿಕಾರ ಪದಗ್ರಹಣ ಮಾಡಿದರು.
ಸಮಾರಂಭದಲ್ಲಿ ಸಹಾಯಕ ಗೌರ್ನರ್ ಡಾ.ಬಿ.ಎಂ.ಸುಬ್ರಾಯ, ರೊ.ಕೆ.ಮಂಜು ನಾಥ್, ರೊ.ಡಾ.ಕೆ.ಮುರುಗೇಶ್, ನಿಕಟ ಪೂರ್ವ ಕಾರ್ಯದರ್ಶಿ ರೊ.ಪಿ. ಸುರೇಂದ್ರ, ರೊ.ಜಿ.ಎಂ.ಸುರೇಶ್ ಇದ್ದರು.