ನಂಜನಗೂಡು: ತಾಲೂಕಿನ ಹೊರಳವಾಡಿ ಗ್ರಾಮಪಂಚಾ ಯಿತಿ ವ್ಯಾಪ್ತಿಯಲ್ಲಿ ಬಡ ಜನರಿಗೆ ತಲುಪ ಬೇಕಾದ ಸ್ವಚ್ಚ ಭಾರತ್‍ದ ಅನುದಾನವನ್ನು ತನ್ನ ಸಂಬಂಧಿಕರ ಹೆಸರಿಗೆ ಹಾಕಿ, ಹಣ ವನ್ನು ದುರುಪಯೋಗ ಪಡಿಸಿಕೊಂಡಿ ರುವ ಹಿನ್ನಲೆಯಲ್ಲಿ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಬಣ್ಣ ಬಯಲಾಗಿ ಈಕೆಯ ವಿರುದ್ದ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪಿಡಿಓ ಜ್ಯೋತಿಯವರು ದೂರು ದಾಖಲಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಹೊರಳವಾಡಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಸರ್ಕಾರದಿಂದ ಬಂದಿರುವ ಎಲ್ಲ ಅನು ದಾನ ಹಾಗೂ ಕೇಂದ್ರ ಸರ್ಕಾರದ ಅನು ದಾನವನ್ನು ದುರ್ಬಳಕೆ ಮಾಡಿಕೊಂಡಿ ರುವ ಆರೋಪಗಳು ಕೇಳಿ ಬರುತ್ತಿತ್ತು.
ನಂಜನಗೂಡು ತಾಲೂಕಿನ ವರುಣಾ ಕ್ಷೇತ್ರ ವ್ಯಾಪ್ತಿಯ ಹೊರಳವಾಡಿ ಗ್ರಾಮ ಪಂಚಾಯಿತಿಯಲ್ಲಿ ಬಗೆದಷ್ಟು ಬಯಲಾಗು ತ್ತಿರುವ ಭ್ರಷ್ಟಾಚಾರ ಬೆಳಕಿಗೆ ಬಂದಿದ್ದು, ಹೊರಳವಾಡಿ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ವರ್ಷಗಳಿಂದಲೂ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಡಿ.ಎಸ್.ಚಾಂದಿನಿ. ತನ್ನ ಕುಟುಂಬದವರು ಮತ್ತು ಸಂಬಂಧಿಕರ ಹೆಸರಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಸುಮಾರು 63 ಸಾವಿರ ಬಡ ಜನರ ಫಲಾನುಭವಿಗಳ ಹಣ ದುರ್ಬಳಕೆಯಾಗಿದೆ.
ಈ ಬಗ್ಗೆ ಹೊರಳವಾಡಿ ಅಭಿವೃಧಿ ಅಧಿಕಾರಿ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಹಣ ದುರುಪಯೋಗಕ್ಕೆ ಕಾರಣವಾಗಿ ರುವ ಕಂಪ್ಯೂಟರ್ ಆಪರೇಟರ್ ಡಿ.ಎಸ್. ಚಾಂದಿನಿ ವಿರುದ್ದ ದೂರು ನೀಡಿದ್ದಾರೆ.
ಬಿಳಿಗೆರೆ ಠಾಣೆಯ ಪಿ.ಎಸ್.ಐ ಸತೀಶ್ ರವರು ಆಪರೇಟರ್ ವಿರುದ್ದ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬಡ ಜನರ ತೆರಿಗೆ ಮತ್ತು ಸರ್ಕಾರದ ಅನುದಾನ ಸಾರ್ವಜನಿಕರ ಉಪಯೋಗಕ್ಕೆ ತಲುಪಬೇಕು ಎಂದು ಸರ್ಕಾರ ಕೋಟಿ ಕೋಟಿ ಅನುದಾವನ್ನು ಬಿಡುಗಡೆ ಮಾಡು ತ್ತದೆ. ಆದರೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಅಧಿ ಕಾರಿಗಳು ಬಡ ಜನರಿಗೆ ತಲುಪಬೇಕಾದ ಹಣವನ್ನು ಹೇಗೆ ಕೊಳ್ಳೆ ಹೊಡೆಯುತ್ತಾರೆ ಎಂಬುದಕ್ಕೆ ಇದೊಂದು ದೊಡ್ಡ ಉದಾ ಹರಣೆಯಾಗಿದೆ.
ಉನ್ನತ ಮಟ್ಟದ ಅಧಿಕಾರಿಗಳು ನಂಜನಗೂಡು ತಾಲೂಕಿನ ಹಲವಾರು ಗ್ರಾಮ ಪಂಚಾಯಿತಿಗಳನ್ನು ಪರಿಶೀಲನೆ ನಡೆಸಿದರೆ ಅನುದಾನ ದುರ್ಬಳಕೆ ಯಾಗಿರುವ ಪ್ರಕರಣಗಳು ಬೆಳಕಿಗೆ ಬರುವುದರಲ್ಲಿ ಸಂಶಯವೇ ಇಲ್ಲ.