ಇಂದಿನಿಂದ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಕಾನೂನು ಅರಿವು
ಮೈಸೂರು

ಇಂದಿನಿಂದ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಕಾನೂನು ಅರಿವು

July 24, 2018

ಹೆಚ್.ಡಿ.ಕೋಟೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚಾರ ರಥದ ಮೂಲಕ ಕಾನೂನು ಮತ್ತು ಜನತಾ ನ್ಯಾಯಾಲಯ ಕುರಿತು ಅರಿವು ಮೂಡಿ ಸುವ ಕಾರ್ಯಕ್ರಮವನ್ನು ಇಂದಿನಿಂದ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳೀಯ ನ್ಯಾಯಾಧೀಶರಾದ ಕೆ.ಕೇಶವ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಅವರು ಸಂಚಾರ ರಥಕ್ಕೆ ಜುಲೈ 24(ಇಂದು) ಮಂಗಳವಾರ ಬೆಳಿಗ್ಗೆ 10.30ಕ್ಕೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಲಾಗುವುದು. ಜು.26 ಮತ್ತು 27ರಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ.ಶಂಕರ್ ಕಾರ್ಯಕ್ರಮದಲ್ಲಿ ಭಾಗಿ ಯಾಗಲಿದ್ದಾರೆ ಎಂದು ಹೇಳಿದರು.

4 ದಿನಗಳ ಕಾಲ ನಡೆಯಲಿರುವ ಕಾರ್ಯ ಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿ ಗಳು ಭಾಗವಹಿಸುತ್ತಾರೆ ಎಂದರು.
ಜುಲೈ 24 ಡಿ.ಬಿ.ಕುಪ್ಪೆ, ಕೆ.ಬೆಳತ್ತೂರು, ಅಂತರಸಂತೆ. ಜುಲೈ 25 ಬಿ.ಮಟಕೆರೆ, ಹಂಚೀಪುರ, ತುಂಬಸೋಗೆ, ಜುಲೈ 26 ಭೀಮನಹಳ್ಳಿ, ಅಣ್ಣೂರು ಸವ್ವೆ, ಜುಲೈ 27 ಹೈರಿಗೆ, ಕೆ. ಬೆಳತ್ತೂರು, ಹಂಪಾಪುರ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ನ್ಯಾಯಾಧೀಶರು ವಿವರಿಸಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಚಂದ್ರ ಶೇಖರ್, ಹಿರಿಯ ವಕೀಲ ಜಿ.ಎನ್. ನಾರಾಯಣಗೌಡ, ವಕೀಲರಾದ ಎಂ.ಎನ್. ರವಿಶಂಕರ್, ಎಂ.ಬಿ.ಶ್ರೀನಿವಾಸ್ ಮತ್ತಿತ ರರು ಹಾಜರಿದ್ದರು.

Translate »