ತಾಪಂ ನೌಕರ ಪೆಟ್ರೋಲ್ ಕದಿಯುತ್ತಿದ್ದಾಗ ಬೆಂಕಿ
ಮೈಸೂರು

ತಾಪಂ ನೌಕರ ಪೆಟ್ರೋಲ್ ಕದಿಯುತ್ತಿದ್ದಾಗ ಬೆಂಕಿ

July 24, 2018

ತಿ.ನರಸೀಪುರ:  ತಾಲೂಕು ಪಂಚಾಯಿತಿ ನೌಕರನೊಬ್ಬ ದ್ವಿಚಕ್ರ ವಾಹನದಲ್ಲಿ ಪೆಟ್ರೋಲ್ ಕದಿಯುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಮೂರು ವಾಹನ ಗಳು ಬೆಂಕಿಗಾಹುತಿಯಾಗಿರುವ ಘಟನೆ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ನಡೆದಿದೆ.

ಸೋಮವಾರ ಬೆಳಿಗ್ಗೆ 10 ಗಂಟೆ ಸಮಯ ದಲ್ಲಿ ಪಟ್ಟಣದ ಮಿನಿ ವಿಧಾನಸೌಧದ ನೆಲ ಮಾಳಿಗೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್‍ನಲ್ಲಿ ತಾ.ಪಂ ಬೊರ್‍ವೆಲ್ ರಿಪೇರಿ ಮಾಡುವ ನೌಕರ ಜಾಫರ್ ಪೆಟ್ರೋಲ್ ಕದಿಯುತ್ತಿದ್ದ ಸಂದರ್ಭ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸ್ಕೂಟರ್ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ತಹಸೀಲ್ದಾರ್ ಕಚೇರಿಗೆ ಸೇರಿದ ಹಳೆಯ ಟಾಟಾಸುಮೋ ಹಾಗೂ ಅಂಗವಿಕಲರೊಬ್ಬರ ತ್ರಿಚಕ್ರವಾಹನ ಬೆಂಕಿಗಾಹುತಿಯಾಗಿದ್ದು, ಅಂದಾಜು 1.70 ಲಕ್ಷ ರೂ.ಗಳ ನಷ್ಟ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಮಿನಿ ವಿಧಾನ ಸೌಧದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿಲಾಗಿ ಜಾಫರ್ ಪೆಟ್ರೋಲ್ ಕದಿಯುತ್ತಿದ್ದು ಸ್ಪಷ್ಟವಾದ ಹಿನ್ನಲೆಯಲ್ಲಿ ತಹಸೀಲ್ದಾರ್ ರಾಜು ದೂರು ದಾಖಲಿಸಿದರು.

ತಹಸೀಲ್ದಾರ್ ದೂರಿನನ್ವಯ ತಿ.ನರಸೀ ಪುರ ಠಾಣೆಯ ಪಿಎಸ್‍ಐ ಎನ್.ಆನಂದ್ ಪ್ರಕರಣ ದಾಖಲಿಸಿಕೊಂಡು ಜಾಫರ್ ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿ ದ್ದಾರೆ. ಘಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕ ಎಂ. ಅಶ್ವಿನ್‍ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Translate »