ಮೈಸೂರು: ನಕಲಿ ದಾಖಲೆ ಸೃಷ್ಟಿಸಿಕೊಂಡಿರುವವರಿಗೆ ಪಾಲಿಕೆ ಅಧಿಕಾರಿ ಖಾತೆ ಮಾಡಿಕೊಟ್ಟು ಅಮಾಯಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ಮೈಸೂ ರಿನ ಬಿಡಾರ ಕೃಷ್ಣಪ್ಪ ರಸ್ತೆಯ ಕೆಲ ನಿವಾಸಿಗಳು ಸೋಮವಾರ ಪಾಲಿಕೆ ಕಚೇರಿ ಬಳಿ ವಿಷದ ಬಾಟಲಿ ಹಿಡಿದು ಕೊಂಡು ಪ್ರತಿಭಟನೆ ನಡೆಸಿದರು.
ದೇವರಾಜ ಮೊಹಲ್ಲಾದ ಬಿಡಾರ ಕೃಷ್ಣಪ್ಪ ರಸ್ತೆಯಲ್ಲಿ ಮಹಾದೇವಿ ಎಂಬು ವರಿಗೆ ಸೇರಿದ 120×80 ಅಡಿ ವಿಸ್ತೀ ರ್ಣದ ನಿವೇಶನವನ್ನು ನಗರಪಾಲಿಕೆ ಅಧಿ ಕಾರಿಗಳು ಬೇರೊಬ್ಬರಿಗೆ ಖಾತೆ ಮಾಡಿ ಕೊಟ್ಟಿದ್ದಾರೆ. ಒಂದೇ ನಿವೇಶನವನ್ನು ಮೂರ್ನಾಲ್ಕು ಜನರಿಗೆ ಖಾತೆ ಮಾಡಿ ಕೊಡುವ ಮೂಲಕ ಬೇಜವಾಬ್ದಾರಿ ಧೋರಣೆ ಪ್ರದರ್ಶಿಸಿದ್ದಾರೆ. ಇದರಿಂದ ನಿಜವಾದ ನಿವೇಶನ ಮಾಲೀಕರಿಗೆ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವಲಯ ಕಚೇರಿ 6ರ ಅಧಿಕಾರಿ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ನಕಲಿ ದಾಖಲೆ ನೀಡಿರುವವರಿಗೆ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನೈಜ ನಿವೇಶನದ ಮಾಲೀಕರಿಗೆ ನ್ಯಾಯ ದೊರಕಿಸಿಕೊಡ ಬೇಕು. ಇಲ್ಲದಿದ್ದರೆ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಭಟನಾ ಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ನಿವೇಶನ ಮಾಲೀಕರಾದ ಸುರೇಶ್, ಕೃಷ್ಣಪ್ಪ, ವೆಂಕಟೇಶ್, ಮಹದೇವಿ, ಲಕ್ಷ್ಮೀ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.