ಯುವಕನ ವಿರುದ್ಧ ಅತ್ಯಾಚಾರ ಆರೋಪ; ಪ್ರಕರಣ ದಾಖಲು
ಚಾಮರಾಜನಗರ

ಯುವಕನ ವಿರುದ್ಧ ಅತ್ಯಾಚಾರ ಆರೋಪ; ಪ್ರಕರಣ ದಾಖಲು

July 19, 2018

ಕೊಳ್ಳೇಗಾಲ: ಯುವಕನೋರ್ವ ಕಿಡ್ನಾಪ್ ಮಾಡಿ ನಿರಂತರವಾಗಿ ಅತ್ಯಾಚಾರವೆಸಗಿರುವುದಾಗಿ ಯುವತಿಯೋರ್ವಳು ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಯುವತಿ ಅದೇ ಗ್ರಾಮದ ಕೃಷ್ಣಶೆಟ್ಟಿ ಎಂಬುವರ ಮಗ ಹರೀಶ್ ವಿರುದ್ಧ ಅತ್ಯಾಚಾರ ದೂರು ನೀಡಿದ್ದಾರೆ. ಕಳೆದ ಮೇ 10 ರಂದು ತಾನು ಬಹಿರ್ದೆಸೆಗೆ ಹೋಗಿದ್ದ ವೇಳೆ ಆರೋಪಿಯು ವಿಡಿಯೋ ಮಾಡಿಕೊಂಡಿದ್ದಾನೆ. ವಿಡಿಯೋ ಮಾಡಿರುವ ಮೆಮೊರಿ ಕಾರ್ಡ್ ನೀಡಬೇಕಾದರೆ ತಾನು ಹೇಳಿದ ಜಾಗಕ್ಕೆ ಬರಬೇಕೆಂದು ಬೆದರಿಸಿ ತನ್ನನ್ನು ಬೆಂಗಳೂರಿಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ ತಾವಿಬ್ಬರೂ ಕಳೆದ 5-6 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಕುಟುಂಬದವರ ವಿರೋಧದಿಂದ ಮನೆಬಿಟ್ಟು ಓಡಿ ಹೋಗಿದ್ದೆವು ಎಂದು ವಿಚಾರಣೆ ವೇಳೆ ಹರೀಶ್ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.

ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಒಟ್ಟಿನಲ್ಲಿ ತನಿಖೆಯಿಂದ ಸತ್ಯ ಬಹಿರಂಗಗೊಳ್ಳಬೇಕಿದೆ.

Translate »