ಶಿಸ್ತು-ಛಲದಿಂದ ಗುರಿ ಸಾಧನೆ
ಕೊಡಗು

ಶಿಸ್ತು-ಛಲದಿಂದ ಗುರಿ ಸಾಧನೆ

March 30, 2019

ವಿರಾಜಪೇಟೆ: ಯುವ ಜನತೆ ಜೀವನದಲ್ಲಿ ಶಿಸ್ತು ಮತ್ತು ಛಲದಿಂದ ತಮ್ಮ ಗುರಿಯನ್ನು ಸಾಧಿಸುವಂತಾಗಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ತಂತ್ರಜ್ಞಾನ ಬೆಳೆ ದಿದ್ದು, ವಿರಾಜಪೇಟೆ ಕಾವೇರಿ ಕಾಲೇಜು ಕಳೆದ 39 ವರ್ಷಗಳಿಂದಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಕ್ರೀಡೆಯಲ್ಲಿಯೂ ಸಾಧನೆ ಮಾಡುವಂತಹ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಹೇಳಿದರು.

ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಮತ್ತು ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ ಹಾಗೂ ಆಶ್ವಿನಿ ಅಚ್ಚಪ್ಪ ಸ್ಮರ ಣಾರ್ಥ ಕಾವೇರಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ರಾಜ್ಯ ಮಟ್ಟದ ಹಾಕಿ ಮತ್ತು ಬಾಸ್ಕೆಟ್‍ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ’ ದಲ್ಲಿ ದಿ.ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ ಹಾಗೂ ಆಶ್ವಿನಿ ಅಚ್ಚಪ್ಪ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಜೀವನ ದಲ್ಲಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ದೇಶದ ಉತ್ತಮ ಪ್ರಜೆ ಗಳಾಗಬೇಕು ಎಂದರು.

ಪಂದ್ಯಾಟದ ಪ್ರಾಯೋಜಕರಾದ ಬುಟ್ಟಿ ಯಂಡ ಬೋಪಣ್ಣ ಅವರ ಪರ ಗೋಣಿ ಕೊಪ್ಪ ಲಯನ್ ಸಂಸ್ಥೆಯ ಮಾಜಿ ಅಧ್ಯಕ್ಷ ಸೋಮೆಯಂಡ ಲಯನ್ ಪೂಣಚ್ಚ ಮಾತ ನಾಡುತ್ತಾ, ಗ್ರಾಮೀಣ ಮಟ್ಟದ ಪ್ರತಿಭೆ ಗಳನ್ನು ಪೋಷಿಸುವಲ್ಲಿ ಪ್ರತಿಯೊಬ್ಬರು ಶ್ರಮ ವಹಿಸಬೇಕೆಂದು ಹೇಳಿದರು. ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎ.ಸಿ.ಗಣಪತಿ ಅವರು ಕ್ರೀಡಾ ಪಟುಗಳಿಗೆ ಇಂತಹ ಪಂದ್ಯಾಟ ಗಳು ಹೆಚ್ಚು ಹೆಚ್ಚಾಗಿ ಆಯೋಜನೆಗೊಳ್ಳು ವಂತಾಗಬೇಕೆಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅಥಿತಿಗಳಗಿ ಕಾವೇರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಉತ್ತಪ್ಪ ನಿರ್ದೇಶಕರಾದ ಕೆ.ಪಿ. ಬೋಪ್ಪಣ್ಣ, ಪ್ರಣೀತ್ ಪೂಣಚ್ಚ, ಅಂತರ್ ರಾಷ್ಟ್ರೀಯ ಮಾಜಿ ಬಾಸ್ಕೆಟ್ ಬಾಲ್ ಆಟ ಗಾರ್ತಿ ಕಾಡ್ಯಮಾಡ ದೇಚಮ್ಮ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಪಟ್ಟಡ ರೀನಾ ಪ್ರಕಾಶ್ ಹಾಗೂ ಕಾಲೇಜಿನ ಪ್ರಾಂಶು ಪಾಲರಾದ ಪ್ರೊ.ಎ.ಎಂ.ಕಮಲಾಕ್ಷಿ ಮುಂತಾದವರು ಉಪಸ್ಥಿತರಿದ್ದರು.

Translate »