ಹೆಚ್.ಡಿ.ಕೋಟೆ: ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಕರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದಲ್ಲಿ ಗುಣಮಟ್ಟದ ಶಿಕ್ಷಣದಿಂದ ಮಕ್ಕಳು ವಂಚಿತರಾಗಿದ್ದು ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ಸರಿಪಡಿಸದೇ ಇದ್ದಲ್ಲಿ ಸಾಮೂಹಿಕವಾಗಿ ಬೇರೆ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಬೇಕಾಗುತ್ತದೆ ಎಂದು ಪೋಷಕರು ಮತ್ತು ಎಸ್‍ಡಿಎಂಸಿ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಎಸ್‍ಡಿಎಂಸಿ ಪದಾಧಿಕಾರಿ ಗಳು ಮತ್ತು ಕೆಲ ಪೋಷಕರು ತುರ್ತು ಸಭೆ ನಡೆಸಿದರು. ಆದರ್ಶ ಶಾಲೆಯಲ್ಲಿ ಐದರಿಂದ ಆರು ಶಿಕ್ಷಕರುಗಳು ಕಿತಾಪತಿ ಬೇಜವಾಬ್ದಾರಿಗೆ ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆಯೇ ಹದಗೆಟ್ಟಿದೆ. ಮುಖ್ಯ ಉಪಾ ಧ್ಯಾಯರು ಸಮರ್ಥವಾಗಿ ಕೆಲಸ ನಿರ್ವ ಹಿಸದೇ ಇರುವುದು ಇಂತಹ ಸಮಸ್ಯೆ ಗಳಿಗೆ ಕಾರಣವಾಗಿದೆ.
ಬಿಸಿ ಊಟದ ಯೋಜನೆಯನ್ನು ನಿರ್ವಹಿಸಲು ಶಿಕ್ಷಕರು ಪೈಪೆÇೀಟಿ ನಡೆಸು ತ್ತಾರೆ. ಶಶಿಕಲಾ ಎಂಬ ಶಿಕ್ಷಕಿ ಹತ್ತನೇ ತರಗತಿಯಲ್ಲಿ ಇಂಗ್ಲಿಷ್ ಪಾಠ ಮಾಡಲು ಸಮರ್ಥರಾಗಿಲ್ಲ ಎಂದು ಪತ್ರ ನೀಡಿದ್ದಾರೆ ಶಾಲೆಯ ಅವ್ಯವಸ್ಥೆಗಳ ಬಗ್ಗೆ ಎಡಿಎಂಸಿ ಮತ್ತು ಪೋಷಕರುಗಳು ಪ್ರಶ್ನಿಸಿದರೆ ಅವರ ಮಕ್ಕಳಿಗೆ ನಾನಾ ತರದ ಕಿರುಕುಳ ಕೊಡುತ್ತಾರೆ ಎಂದು ಆರೋಪಿಸಿದರು.
ಶಾಲೆಯ ಪ್ರಾರಂಭದ ನಾಲ್ಕೈದು ವರ್ಷಗಳ ಕಾಲ ಯಾವುದೇ ಮೂಲ ಭೂತ ಸೌಕರ್ಯಗಳಿಲ್ಲದಿದ್ದರೂ ಹಳೆ ಕಟ್ಟಡದಲ್ಲೇ ಕೆಲ ಶಿಕ್ಷಕರ ಮುಖಾಂತರ ಉತ್ತಮ ಫಲಿತಾಂಶದ ಜೊತೆಗೆ ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿತ್ತು. ಎಲ್ಲ ಸೌಕರ್ಯದೊಂದಿಗೆ ನಾಲ್ಕು ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಾಣ ಗೊಂಡಿದ್ದರೂ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಶಿಕ್ಷಣದಲ್ಲಿ ಕುಸಿತ ಕಾಣುತ್ತಿರು ವುದರಿಂದ ಕಳೆದ ಸಾಲಿನ ಹದಿನೈದು, ಈ ಸಾಲಿನಲ್ಲಿ ಹತ್ತು ವಿದ್ಯಾರ್ಥಿಗಳು ಖಾಸಗಿ ಶಾಲೆಗೆ ಸೇರ್ಪಡೆಗೊಂಡಿದ್ದಾರೆ.
ಶಾಲೆಯ ಇನ್ನು ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿ ಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಇನ್ನು ಪ್ರಯೋ ಜನವಾಗಿಲ್ಲ ಎಂದು ತಿಳಿಸಿದ ಅವರು, ಶಾಲೆಯ ಎಲ್ಲ ಶಿಕ್ಷಕರನ್ನೂ ವರ್ಗಾವಣೆ ಮಾಡಿ ಕಳೆದ ಸಾಲಿನಲ್ಲಿ ಬಿಡುಗಡೆ ಯಾದ 20 ಲಕ್ಷ ರೂಪಾಯಿ ಅನುದಾನದ ಬಗ್ಗೆ ತನಿಖೆಯಾಗಬೇಕು. ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗಬೇಕು. ಇದಕ್ಕಾಗಿ ಅಲ್ಲಿ ನಿರಂತರ ಹೋರಾಟ ನಡೆಸಲಾಗು ವುದು ಸಂಬಂಧಪಟ್ಟವರು ಬಗೆಹರಿಸದೇ ಇದ್ದಲ್ಲಿ ಸಾಮೂಹಿಕವಾಗಿ ಮಕ್ಕಳನ್ನು ಬೇರೆ ಕಡೆಗೆ ಸೇರಿಸಲಾಗುವುದೆಂದು ತೀರ್ಮಾನಿಸಿದರು