ಅಪಘಾತ: ದಂಪತಿಗಳ ದುರ್ಮರಣ
ಮಂಡ್ಯ

ಅಪಘಾತ: ದಂಪತಿಗಳ ದುರ್ಮರಣ

June 4, 2018

ಮಂಡ್ಯ:  ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್‍ನಲ್ಲಿದ್ದ ದಂಪತಿ ಮೃತಪಟ್ಟಿರುವ ಘಟನೆ ಮದ್ದೂರು ಸಮೀಪದ ಗೆಜ್ಜಲಗೆರೆಯ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಂದು ನಡೆದಿದೆ.

ಸಾದೊಳಲು ಗ್ರಾಮದ ಚಂದ್ರಶೇಖರಾಚಾರಿ (63) ಮತ್ತು ಜಯಮ್ಮ (55) ಮೃತ ದಂಪತಿಯಾಗಿದ್ದಾರೆ. ಘಟನೆ ಹಿನ್ನೆಲೆ: ಭಾನುವಾರ ಬೆಳಗ್ಗೆ ಮಂಡ್ಯಕ್ಕೆ ಮಗಳ ಮನೆಗೆ ಹೋಗಿ ವಾಪಸ್ ಸ್ವಗ್ರ್ರಾಮಕ್ಕೆ ಬೈಕ್‍ನಲ್ಲಿ ಹಿಂದುರುಗುತ್ತಿದ್ದ ವೇಳೆ ಮೊದಲು ಬೇರೆ ಬೈಕ್ ಡಿಕ್ಕಿ ಹೊಡೆದು ಹೆದ್ದಾರಿ ಯಲ್ಲಿ ಇಬ್ಬರು ಬಿದ್ದಿದ್ದಾರೆ. ಈ ಸಂದರ್ಭ ಹಿಂದಿನಿಂದ ಅತಿವೇಗವಾಗಿ ಬಂದ ಕಾರು ಇವರ ಮೇಲೆ ಹರಿದ ಪರಿಣಾಮ ಚಂದ್ರ ಶೇಖರಾಚಾರಿ ಮತ್ತು ಜಯಮ್ಮ ಇಬ್ಬರೂ ಸಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದೀಗ ಇಬ್ಬರ ಶವಗಳನ್ನು ಪಟ್ಟಣದ ಕೆ.ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಮದ್ದೂರು ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »