ಸಿಎಂ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದ ಅಡ್ಡಂಡ ಕಾರ್ಯಪ್ಪ
ಕೊಡಗು

ಸಿಎಂ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದ ಅಡ್ಡಂಡ ಕಾರ್ಯಪ್ಪ

July 7, 2018

ಮಡಿಕೇರಿ:  ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖ್ಯ ಮಂತ್ರಿ ಹೆಚ್.ಡಿ. ಕುಮಾ ರಸ್ವಾಮಿ ತಮ್ಮ ಚೊಚ್ಚಲ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ಯಾವುದೇ ಯೋಜನೆ ಮತ್ತು ಅನುದಾನ ಘೋಷಿಸದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತಗೊಂಡಿದೆ.

ಹಿರಿಯ ಸಾಹಿತಿ, ರಂಗಕರ್ಮಿ, ಅಡ್ಡಂಡ ಕಾರ್ಯಪ್ಪ, ರಾಜ್ಯ ಸರಕಾರದ ಬಜೆಟ್ ವಿರುದ್ಧ ಹರಿ ಹಾಯ್ದಿರುವ ವೀಡಿಯೋ ವೈರಲ್ ಆಗಿದ್ದು, ಸರಕಾರವನ್ನು ತೀವ್ರ ತರಾಟೆಗೆ ತೆಗೆದು ಕೊಂಡಿದ್ದಾರೆ. ಕೊಡಗು ಜಿಲ್ಲೆಯನ್ನು ಕರ್ನಾ ಟಕದಿಂದಲೇ ಹೊರಗಿಡಲಾಗಿದ್ದು, ಜಿಲ್ಲೆಯ ಜನತೆಯ ಪ್ರತ್ಯೇಕ ರಾಜ್ಯದ ಕೂಗಿಗೆ ಮುಖ್ಯ ಮಂತ್ರಿಗಳೇ ಮುನ್ನುಡಿ ಬರೆದಿದ್ದಾರೆ.

ಕಾವೇರಿ ನೀರನ್ನು ಬಳಸಿಕೊಂಡು ಕಾವೇರಿ ಉಗ ಮಿಸುವ ಕೊಡಗು ಜಿಲ್ಲೆಗೆ ಬಜೆಟ್‍ನಲ್ಲಿ ಅನ್ಯಾಯ ಎಸಗಲಾಗಿದೆ. ಕೇವಲ ಅಧಿಕಾ ರದ ಆಸೆಗಾಗಿ ಮಣ್ಣಿನ ಮಕ್ಕಳೆಂದು ಹೇಳಿ ಕೊಂಡು ಲಾಭದಾಯಕ ಖಾತೆ ಪಡೆದು ಕೊಂಡಿದ್ದೀರಾ? ಎಂದು ಅಡ್ಡಂಡ ಕಾರ್ಯಪ್ಪ ಪ್ರಶ್ನಿಸಿದ್ದಾರೆ. ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳಿಗೆ ಹೆಚ್ಚಿನ ಯೋಜನೆ ಜಾರಿ ಮಾಡಿದ್ದು, ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂದು ಭಾವಿಸಿ ದ್ವೇಷದ ರಾಜಕಾರಣ ಮಾಡಲಾಗಿದೆ ಎಂದೂ ಆರೋಪಿಸಿರುವ ಅಡ್ಡಂಡ ಕಾರ್ಯಪ,್ಪ ಸಿಎಂ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Translate »