ಮೈಸೂರು: ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿತಗೊಳಿ ಸುವ ವಿಧಾನಗಳನ್ನು ಕಟ್ಟಡ ನಿರ್ಮಾಣ ದಲ್ಲಿ ಅಳವಡಿಸಿಕೊಳ್ಳಲು ಸಿವಿಲ್ ಇಂಜಿನಿ ಯರ್‍ಗಳು ಹಾಗೂ ವಾಸ್ತುಶಿಲ್ಪಿಗಳು ಮುಂದಾಗಬೇಕು ಎಂದು ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‍ವೈರ್ನ ಮೆಂಟ್‍ನ ಕಾರ್ಯಕ್ರಮ ನಿರ್ದೇಶಕ ರಜನೇಶ್ ಸರೇನ್ ತಿಳಿಸಿದರು.
ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‍ವೈರ್ನ ಮೆಂಟ್ ಹಾಗೂ ಮೈಸೂರು ವಿವಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ (ಎಸ್‍ಪಿಎ) ಜಂಟಿ ಆಶ್ರಯದಲ್ಲಿ `ನಿರ್ಮಿತ ಪರಿಸರದಲ್ಲಿ ಸುಸ್ಥಿರತೆ’ ಕುರಿತು ಹಮ್ಮಿಕೊಂಡಿ ರುವ 2 ದಿನಗಳ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.
ಕಟ್ಟಡ ನಿರ್ಮಾಣ ಹಾಗೂ ವಿನ್ಯಾಸ ದಲ್ಲಿ ಪರಿಸರಕ್ಕೆ ಪೂರಕವಾದ ಸಾಮಗ್ರಿ ಬಳಕೆಗೆ ಒತ್ತು ನೀಡುವುದಕ್ಕೆ ಆದ್ಯತೆ ನೀಡ ಬೇಕು. ಈ ನಿಟ್ಟಿನಲ್ಲಿ ಯಾವ ರೀತಿಯ ನೀತಿ-ನಿಯಮಗಳನ್ನು ಅಳವಡಿಸಿಕೊಳ್ಳ ಬೇಕು ಎಂಬುದನ್ನು ಈ ತರಬೇತಿ ಕಾರ್ಯ ಕ್ರಮದಲ್ಲಿ ತಿಳಿಸಿಕೊಡಲಾಗುವುದು. ಮೈಸೂರು ವಿವಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ ಆಶ್ರಯದಲ್ಲಿ ನಿರ್ಮಿತ ಪರಿಸರಕ್ಕೆ ಸಂಬಂಧಿಸಿದಂತೆ ವರ್ಷಕ್ಕೆ 2 ಕಾರ್ಯಕ್ರಮಗಳನ್ನು ನಡೆಸಲು ಉದ್ದೇ ಶಿಸಲಾಗಿದ್ದು, ಇದು ಮೊಟ್ಟ ಮೊದಲ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಉದ್ಘಾಟನೆ ನೆರವೇರಿಸಿದ ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ಇಂದಿನ ಕಾರ್ಯಕ್ರಮ ಅತ್ಯಂತ ಮುಖ್ಯವಾದದ್ದು. 2 ವರ್ಷಗಳ ಹಿಂದೆಯಷ್ಟೇ ಮೈಸೂರು ವಿವಿಯಲ್ಲಿ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ ಸಂಸ್ಥೆ ಆರಂಭಿಸಲಾಯಿತು. ಸಂಸ್ಥೆ ಸ್ವಾಯತ್ತ ಸಂಸ್ಥೆಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ನಿರ್ಮಿತ ಪರಿಸರದಲ್ಲಿ ಸುಸ್ಥಿರತೆಗೆ ಒತ್ತು ನೀಡುವ ಕುರಿತಂತೆ ಎರಡು ದಿನಗಳು ವಿವಿಧ ಗೋಷ್ಠಿಗಳು ನಡೆಯಲಿದ್ದು, ನಾಳೆ (ಮೇ 9) ಸಂಜೆ 4ಕ್ಕೆ ಸಮಾರೋಪ ಸಮಾ ರಂಭ ಹಮ್ಮಿಕೊಳ್ಳಲಾಗಿದೆ. ಮೈಸೂರು ವಿವಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗ ಸೇರಿ 200ಕ್ಕೂ ಹೆಚ್ಚು ಮಂದಿ ತರಬೇತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದಾರೆ. ಎಸ್‍ಪಿಎ ಸಂಸ್ಥೆ ನಿರ್ದೇಶಕ ಪ್ರೊ.ಚಿದಂಬರ ಸ್ವಾಮಿ, ಸ್ಥಳೀಯ ಸಂಘಟನಾ ಕಾರ್ಯದರ್ಶಿ ಡಾ. ಹೆಚ್.ಎಸ್. ಕುಮಾರ್ ಮತ್ತಿತರರು ಹಾಜರಿದ್ದರು.