ಸದೃಢ ಸಂಕಲ್ಪದಿಂದ ಹೊಸ ಬದುಕು ರೂಪಿಸಿಕೊಳ್ಳಲು ಸಲಹೆ
ಹಾಸನ

ಸದೃಢ ಸಂಕಲ್ಪದಿಂದ ಹೊಸ ಬದುಕು ರೂಪಿಸಿಕೊಳ್ಳಲು ಸಲಹೆ

March 17, 2019

ಹೊಸಬೆಳಕು ಸಮಾವೇಶದಲ್ಲಿ 150 ಜೋಡಿ ಭಾಗಿ, 30 ಜೋಡಿ ಸಂಗಾತಿ ಆಯ್ಕೆ
ಹಳೇಬೀಡು: ಹೆಚ್‍ಐವಿ ಸೋಂಕಿತರು ನೋವು, ಸಂಕಷ್ಟಗಳಿಂದ ಎದೆಗುಂದದೆ ಸವಾಲಿನ ಸಂಕೋಲೆ ಗಳನ್ನು ದಾಟಿ ದೃಢÀ ಸಂಕಲ್ಪದಿಂದ ಹೊಸ ಬದುಕು ಕಟ್ಟಿಕೊಳ್ಳಬೇಕು. ಆ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಮತ್ತು ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವಿಜಯಪ್ರಕಾಶ್ ಸಲಹೆ ನೀಡಿದರು.

ಇಲ್ಲಿನ ಪುಷ್ಪಗಿರಿಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಬೆಂಗ ಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಸನ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಂಯು ಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಹೆಚ್‍ಐವಿ ವಧು-ವರರ ಸಮಾವೇಶ ಹೊಸಬೆಳಕು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಸಬೆಳಕು ವಧು-ವರರ ಸಮಾ ವೇಶ ಹೆಚ್‍ಐವಿ/ಏಡ್ಸ್ ಸೋಂಕಿತರ ಪಾಲಿನ ಹೊಸ ಆಶಾಕಿರಣವಾಗಿದೆ. ಹೆಚ್‍ಐವಿ/ಏಡ್ಸ್ ಸೋಂಕಿತರು ಧನಾತ್ಮಕ ಚಿಂತನೆಗಳಿಂದ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬಹುದು ಹಾಗೂ ಉತ್ತಮ ಜೀವನ ಶೈಲಿಯಿಂದ ತಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಬದುಕನ್ನು ಸುಧಾ ರಿಸಿಕೊಳ್ಳಬಹುದು ಎಂದು ಹೇಳಿದರು.
ಹೆಚ್‍ಐವಿ ಸೋಂಕಿತರ ಭಾವನೆಗಳಿಗೆ ಸಮಾಜವೂ ಸ್ಪಂದಿಸಿ ಅವರ ಜೀವನ ಮಟ್ಟ ಸುಧಾರಣೆಗೆ ನೆರವಾಗಬೇಕಿದೆ. ಅದೇ ರೀತಿ ಹೆಚ್‍ಐವಿ ಸೋಂಕಿತರು ಸಮಾ ಜಕ್ಕೆ ಪೂರಕವಾಗಿ ತಮ್ಮ ಬದುಕನ್ನು ನಡೆಸಬೇಕಿದೆ ಎಂದು ತಿಳಿಸಿದರು.

ಇದೇ ವೇಳೆ ಪ್ರತಿಯೊಬ್ಬ ಮತದಾರರು ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ತಪ್ಪದೇ ಮತ ಚಲಾಯಿಸುವ ಮೂಲಕ ತಮ್ಮ ಕರ್ತವ್ಯ ಪಾಲನೆ ಮಾಡ ಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ಪೀಪ್ ಸಮಿತಿ ಅಧ್ಯಕ್ಷ ಡಾ. ಕೆ.ಎನ್.ವಿಜಯ ಪ್ರಕಾಶ್ ಮನವಿ ಮಾಡಿದರು.

ಜಿಲ್ಲಾ ಏಡ್ಸ್ ಹಾಗೂ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಸುಮಾರು 10,950ಕ್ಕೂ ಹೆಚ್ಚು ಜನರಲ್ಲಿ ಹೆಚ್‍ಐವಿ ಸೋಂಕು ಪತ್ತೆ ಹಚ್ಚಲಾಗಿದೆ. ಇನ್ನೂ ಪರೀಕ್ಷೆಗೆ ಒಳಪಡದ ಹಲವರು ಇದ್ದಾರೆ ಅವರ ಜೀವನ ಮಟ್ಟ ಸುಧಾ ರಣೆ ಹಾಗೂ ಸೋಂಕಿತರಿಗೆ ಪರಸ್ಪರ ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿ ಕೊಳ್ಳಲು ಅವಕಾಶ ಕಲ್ಪಿಸಲು ಹೊಸ ಬೆಳಕು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸೋಂಕಿತರಿಗೆ ಸರಿಯಾದ ಚಿಕಿತ್ಸೆಯ ಜೊತೆಗೆ ಅವರ ಜೀವನ ಶೈಲಿಯು ಉತ್ತಮಗೊಳ್ಳಲು ಅನೇಕ ಸವಲತ್ತುಗಳು ಸಿಗಬೇಕಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಸಹಾಯಕ ನಿರ್ದೇಶಕ ಗೋವಿಂದರಾಜು ಮಾತನಾಡಿ, ಸೋಂಕಿತ ಸಮುದಾಯದವರ ಹಿತಕಾಯುವ ಸಲು ವಾಗಿ ರಾಜ್ಯ ಹಾಗೂ ವಿಭಾಗ ಮಟ್ಟ ದಿಂದ ವಧುವರರ ಸಮಾವೇಶ ನಡೆಸಲಾ ಗುತ್ತಿದ್ದು, ಈಗಾಗಲೇ 30ಕ್ಕೂ ಹೆಚ್ಚು ಜೋಡಿಗಳು ತಮ್ಮ ಬಾಳ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
ಹೆಚ್‍ಐವಿ/ಏಡ್ಸ್ ಸೋಂಕಿತರ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶ್ರೀನಿವಾಸ್ ಅವರು ಹೆಚ್‍ಐವಿ ಸೋಂಕಿ ತರ ಜೀವನ ಸಮಸ್ಯೆ, ಸವಾಲು, ಅವಕಾಶ ಹಾಗೂ ಸಮಾಜದಿಂದ ಬೇಕಿರುವ ನೆರವುಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆ ಯಿಂದ 150 ಕ್ಕೂ ಹೆಚ್ಚಿನ ಸೊಂಕಿತರು ತಮ್ಮ ಜೀವನ ಸಂಗಾತಿಗಳ ಆಯ್ಕೆಗಾಗಿ ಭಾಗವಹಿಸಿದ್ದರು. ಪ್ರತಿಯೊಬ್ಬರಿಗೂ ಆಪ್ತ ಸಮಾಲೋಚನೆಯ ಜೊತೆಗೆ ಮಾರ್ಗ ದರ್ಶನ ನೀಡಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಸತೀಶ್ ಕುಮಾರ್ ಕಡ್ಡಾಯ ಮತದಾನದ ಪ್ರತಿ ಜ್ಞಾವಿಧಿ ಬೋಧಿಸಿದರು. ಬೇಲೂರು ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಆಡಳಿತಾ ಧಿಕಾರಿ ಡಾ.ನರಸೇಗೌಡ, ಹಾಸನ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಮೇಲ್ವಿ ಚಾರಕರಾದ ರವಿಕುಮಾರ, ಕೆಂಚೆಗೌಡ, ಧರಣೇಶ್ ಮತ್ತಿತರರು ಹಾಜರಿದ್ದರು.

ಹೆಚ್‍ಐವಿ/ಏಡ್ಸ್ ಸೋಂಕು ನಿಯಂತ್ರಣ ಹಾಗೂ ತಡೆಗೆ ಎಲ್ಲರ ಸಹಕಾರವು ಅಗತ್ಯ ಬಾಳ ಸಂಗಾತಿಗಳ ಆಯ್ಕೆಯು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂತಹವರಿಗೆ ಹೊಸಬೆಳಕು ಎಂಬ ವಧುವರರ ವೇದಿಕೆ ಉತ್ತಮ
ಅವಕಾಶಗಳನ್ನು ಸೃಷ್ಟಿಸಿದ್ದು ಇದಕ್ಕಾಗಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ಏಡ್ಸ್ ಪ್ರಿವೆನ್‍ಷನ್ ಸೊಸೈಟಿಯ ಪ್ರಯತ್ನ ಅಭಿನಂದನಾರ್ಹ
– ಡಾ.ಕೆ.ಎನ್.ವಿಜಯಪ್ರಕಾಶ್, ಜಿಪಂ ಸಿಇಓ

Translate »