ಮೆರಿಟ್ ಆಧಾರದಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಆಯ್ಕೆಗೆ ವಕೀಲ ಓ.ಶ್ಯಾಂ ಭಟ್ ಸಲಹೆ
ಮೈಸೂರು

ಮೆರಿಟ್ ಆಧಾರದಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಆಯ್ಕೆಗೆ ವಕೀಲ ಓ.ಶ್ಯಾಂ ಭಟ್ ಸಲಹೆ

July 8, 2019

ಮೈಸೂರು, ಜು.7(ಆರ್‍ಕೆಬಿ)- ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿದರೆ ಮಾತ್ರ ಮಕ್ಕಳ ಶೈಕ್ಷಣಿಕ ಉನ್ನತಿ ಸಾಧ್ಯ ಎಂದು ಹಿರಿಯ ವಕೀಲ ಓ.ಶ್ಯಾಂ ಭಟ್ ಅಭಿಪ್ರಾಯಪಟ್ಟರು.

ಮೈಸೂರಿನ ಪುರಭವನದಲ್ಲಿ ಚಾಮುಂ ಡೇಶ್ವರಿ ಗೆಳೆಯರ ಪ್ರಗತಿಪರ ಸೇವಾ ಪ್ರತಿ ಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಅನೇಕ ಶಿಕ್ಷಕರಿಗೆ `ಅ’ ಕಾರ `ಹ’ ಕಾರ ತಿಳಿಯದ ಶಿಕ್ಷಕರೂ ಇದ್ದು, ಅವರಿಂದ ಸಮಾಜದಲ್ಲಿ ಶಿಕ್ಷಣ ಸಾಧನೆ ಸಾಧ್ಯವೇ? ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಏರಿಸಬಾರದೇಕೆ? ಎಂದು ಪ್ರಶ್ನಿ ಸಿದರು. ಯಾವುದೇ ಸಮಾಜದ ಜನರು ತಮ್ಮ ಕ್ಷೇತ್ರದ ಬಗ್ಗೆ ಕೀಳರಿಮೆ ಇಟ್ಟುಕೊಳ್ಳ ಬಾರದು. ಸ್ವಚ್ಛತೆ ಅಪಾಯಕಾರಿ ಕ್ಷೇತ್ರ ವಾದರೂ ಅದನ್ನು ಸಮರ್ಪಕವಾಗಿ ನಡೆಸಿ ಕೊಂಡು ಬಂದಿರುವ ಆ ಸಮುದಾಯ ತೊಂದರೆಯಲ್ಲಿ ಸಿಲುಕಿದ್ದು, ಅಂತಹ ಕುಟುಂಬ ಗಳಿಗೆ ಸೌಲಭ್ಯ ದೊರೆಯಬೇಕು. ಆ ನಿಟ್ಟಿ ನಲ್ಲಿ ಚಾಮುಂಡೇಶ್ವರಿ ಗೆಳೆಯರ ಪ್ರಗತಿ ಪರ ಸೇವಾ ಪ್ರತಿಷ್ಠಾನ ಸರ್ಕಾರಿ ಸೌಲಭ್ಯ ಗಳನ್ನು ತಲುಪಿಸುವ ಪ್ರಯತ್ನ ಮಾಡಲಿ ಎಂದು ಹಾರೈಸಿದರು. ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರು ಪೀಠದ ಶಿವ ಶರಣ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಚಾಲನೆ ನೀಡಿದರು. ಪ್ರತಿ ಷ್ಠಾನದ ಅಧ್ಯಕ್ಷ ಪಿ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಸೈಕಲ್ ಪ್ಯೂರ್ ಅಗರಬತ್ತಿ ಮಾಲೀಕ ಆರ್.ಗುರು, ಮಾತಾ ಅಮೃತಾ ನಂದಮಯಿ ಮಠದ ರಾಮಕೃಷ್ಣಾಜಿ, ಕೃಷ್ಣಾಜಿ, ಆಹಾರ ಇಲಾಖೆ ಅಧಿಕಾರಿ ಮಹ ದೇವಪ್ಪ, ಪ್ರತಿಷ್ಠಾನದ ಪದಾಧಿಕಾರಿಗಳಾದ ಎಂ.ನಾಗರಾಜು, ಕೆ.ಸಿ.ಗಣೇಶ್, ಜಿ.ಶ್ರೀನಿ ವಾಸ್ ಇತರರು ಉಪಸ್ಥಿತರಿದ್ದರು.

Translate »