ಏರ್‍ಸೆಲ್-ಮ್ಯಾಕ್ಸಿಸ್ ಪ್ರಕರಣ: ಆ.7ರವರೆಗೂ ಪಿ. ಚಿದಂಬರಂ ಬಂಧನಕ್ಕೆ ತಡೆ
ದೇಶ-ವಿದೇಶ

ಏರ್‍ಸೆಲ್-ಮ್ಯಾಕ್ಸಿಸ್ ಪ್ರಕರಣ: ಆ.7ರವರೆಗೂ ಪಿ. ಚಿದಂಬರಂ ಬಂಧನಕ್ಕೆ ತಡೆ

July 24, 2018

ನವದೆಹಲಿ: ಏರ್ ಸೆಲ್-ಮ್ಯಾಕ್ಸಿಸ್ ಪ್ರಕರಣ ದಲ್ಲಿ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಅವರು ಆಗಸ್ಟ್ 7ರವರೆಗೂ ಬಂಧನ ಭೀತಿಯಿಂದ ಪಾರಾಗಿದ್ದಾರೆ. ಚಿದಂಬರಂ ಅವರು 3,500 ಕೋಟಿ ಮೊತ್ತ ಏರ್ ಸೆಲ್-ಮ್ಯಾಕ್ಸಿಸ್ ಮತ್ತು 305 ಕೋಟಿ ಐಎನ್‍ಎಕ್ಸ್ ಮೀಡಿಯಾ ಹಗರಣ ದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದು, ದೆಹಲಿಯ ಪಟಿಯಾಲ ಕೋರ್ಟ್ ಇಂದು ವಿಚಾರಣೆ ನಡೆಸಿ ಆಗಸ್ಟ್ 7ರವರೆಗೂ ಬಂಧನಕ್ಕೆ ಮಧ್ಯಂತರ ತಡೆ ನೀಡಿದೆ. ಏರ್‍ಸೆಲ್-ಮ್ಯಾಕ್ಸಿಸ್ ಸಂಬಂಧಿಸಿದಂತೆ 2011ರಲ್ಲಿ ಸಿಬಿಐ ಮತ್ತು 2012ರಲ್ಲಿ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ದಾ ಲಿಸಿತ್ತು. ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಬಂಧನಕ್ಕೆ ನೀಡಲಾಗಿದ್ದ ಮಧ್ಯಂತರ ತಡೆ ಆದೇಶವನ್ನು ದೆಹಲಿ ಹೈಕೋರ್ಟ್ ಆಗಸ್ಟ್ 7ರವರೆಗೂ ವಿಸ್ತರಿಸಿದೆ.

Translate »