ಆಂತರಿಕ ಗೊಂದಲದಲ್ಲೇ ಮೈತ್ರಿ ಸರ್ಕಾರ ಪತನ
ಮೈಸೂರು

ಆಂತರಿಕ ಗೊಂದಲದಲ್ಲೇ ಮೈತ್ರಿ ಸರ್ಕಾರ ಪತನ

June 23, 2019

ಬೆಂಗಳೂರು,ಜೂ.22(ಕೆಎಂಶಿ)-ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಆಂತರಿಕ ಗೊಂದಲದಿಂದಲೇ ಪತನಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.

ಇಂತಹ ಸನ್ನಿವೇಶದಲ್ಲಿ ರಾಜ್ಯದ ಜನತೆ ಮತ್ತೊಂದು ಚುನಾವಣೆ ಎದುರಿಸಲು ಸಿದ್ಧರಿಲ್ಲ, ಜನತೆಯ ಆಶೋ ತ್ತರಗಳಿಗೆ ಸ್ಪಂದಿಸಿ ಬಿಜೆಪಿ ಸರ್ಕಾರ ರಚನೆಗೊಳ್ಳಲಿದೆ ಎಂದರು. ಮಧ್ಯಂತರ ಚುನಾವಣೆಗೆ ಅವಕಾಶ ನೀಡು ವುದಿಲ್ಲ. ಯಾವುದೇ ಪಕ್ಷದ ಶಾಸಕರು ಅಂಜಬೇಕಿಲ್ಲ. ಅಂತಹ ಸನ್ನಿವೇಶ ಎದುರಾದಲ್ಲಿ ಬಿಜೆಪಿ ಜೊತೆ ಕೈಜೋಡಿಸಿ ಎಂದು ಅವರು ಕರೆ ನೀಡಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ, ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪ್ಪ (ದೇವೇಗೌಡ) ಚುನಾವಣೆಗೆ ಹೋಗಲು ಸಿದ್ಧರಾಗಿದ್ದರೆ, ಮಗ (ಕುಮಾರಸ್ವಾಮಿ) ನಾವೇ ಪೂರ್ಣಾ ವಧಿಗೆ ಇರುತ್ತೇವೆ ಎನ್ನುತ್ತಾರೆ. ಇದುವರೆಗೂ ಮೈತ್ರಿ ಪಕ್ಷ ಗಳಲ್ಲಿ ಗೊಂದಲವಿತ್ತು, ಇದೀಗ ಗೌಡರ ಕುಟುಂಬ ಸದಸ್ಯ ರಲ್ಲೇ ಗೊಂದಲ ಆರಂಭವಾಗಿದೆ. ಕುಟುಂಬ ಕಲಹ ಸಮ್ಮಿಶ್ರ ಸರ್ಕಾರಕ್ಕೆ ನಾಂದಿ ಹಾಡಲಿದೆ ಎಂದು ಭವಿಷ್ಯ ನುಡಿದ ಅವರು, ಮ್ಯಾಜಿಕ್ ಸಂಖ್ಯೆಯೊಂದಿಗೆ ಸರ್ಕಾರ ರಚನೆ ಮಾಡಿಯೇ ಮಾಡುತ್ತೇವೆ ಎಂದರು. ಪಕ್ಷದ ಸಂಘಟನೆ ಒಂದೆಡೆ ನಡೆಯುತ್ತಿರಲಿ, ಮತ್ತೊಂದೆಡೆ ಸರ್ಕಾರ ರಚನೆ ಸಂದರ್ಭ ಬಂದರೆ ಅದನ್ನೂ ಮಾಡೋಣ, ಅಲ್ಲಿಯವರೆಗೆ ಸಹನೆಯಿಂದ ಕಾಯೋಣ. ಯಾವ ಕಾರಣಕ್ಕೂ ಈ ಸರ್ಕಾರ ಹೆಚ್ಚು ದಿನ ಅಧಿಕಾರ ದಲ್ಲಿ ಮುಂದುವರಿಯುವುದಿಲ್ಲ, ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಮರುಕ್ಷಣವೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಿತ್ತು. ಕುಮಾರಸ್ವಾಮಿ ಆಡಳಿತದ 1 ವರ್ಷದ ಸಾಧನೆಯ ಪುಸ್ತಕ ನೋಡಿದ್ದೇನೆ, ಅದರಲ್ಲಿ ಹೇಳಿಕೊಳ್ಳುವಂತಹ ಯಾವ ಸಾಧನೆಯೂ ಇಲ್ಲ, ಸುಳ್ಳು ಭರವಸೆಗಳ, ಅಂತೆ-ಕಂತೆಗಳ ಪುರಾಣವನ್ನೇ ಹೇಳಲಾಗಿದೆ. ಒಂದು ವರ್ಷದಲ್ಲಿ ಏನು ಸಾಧನೆ ಮಾಡಿ ಜನತೆ ಮುಂದೆ ಹೋಗಿದ್ದೀರಿ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು. ಗ್ರಾಮ ವಾಸ್ತವ್ಯ ಮಾಡಿದರೆ ಜನತೆಗೆ ಯಾವುದೇ ಪ್ರಯೋಜನವಿಲ್ಲ, ಜನತೆ ಬರಗಾಲದಿಂದ ತತ್ತರಿಸುತ್ತಿದ್ದಾರೆ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಸುವ ಬದಲು ಇಂತಹ ನಾಟಕ ಮಾಡುವುದನ್ನು ನಿಲ್ಲಿಸಿ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಕಿತ್ತೆಸೆದು ಪಕ್ಷ ಅಧಿಕಾರಕ್ಕೆ ತರುವುದೇ ನಮ್ಮ ಮುಂದಿರುವ ಏಕೈಕ ಗುರಿ ಎಂದರು. ಜುಲೈ 6ರಿಂದ ಆಗಸ್ಟ್ 11ರವರೆಗೆ ಸದಸ್ಯತ್ವ ಅಭಿಯಾನ ರಾಜ್ಯಾದ್ಯಂತ ನಡೆಯಲಿದ್ದು, ಈ ಬಾರಿ ಸುಮಾರು 50 ಲಕ್ಷ ಹೊಸ ಸದಸ್ಯರ ನೋಂದಣಿ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ.

ಮುಂದಿನ ನಾಲ್ಕು ವರ್ಷವೂ ಕುಮಾರಸ್ವಾಮಿಯೇ ಸಿಎಂ
ಬೆಂಗಳೂರು, ಜೂ. 22(ಕೆಎಂಶಿ)- ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ರಾಜ್ಯ ವಿಧಾನ ಸಭೆಗೆ ಮಧ್ಯಂತರ ಚುನಾ ವಣಾ ವಿಷಯ ಪ್ರಸ್ತಾಪಿಸುತ್ತಿ ದ್ದಂತೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ, ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯೇ ಮುಂದಿನ ನಾಲ್ಕು ವರ್ಷಕ್ಕೂ ಆಡಳಿತ ನಡೆಸಲಿದ್ದಾರೆ ಎಂದಿದ್ದಾರೆ. ಟ್ವೀಟ್ ಮೂಲಕ ಗೌಡರ ಆರೋಪಗಳನ್ನು ಪರೋಕ್ಷವಾಗಿ ನಿರಾಕರಿಸಿದ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಧಕ್ಕೆ ಇಲ್ಲ ಎಂದಿದ್ದಾರೆ. ಈ ಸರ್ಕಾರ ಯಶಸ್ವಿಯಾಗಿ ತನ್ನ ಅವಧಿ ಪೂರ್ಣಗೊಳಿಸಲಿದೆ. ಇದರಲ್ಲಿ ನನಗೆ ಯಾವುದೇ ಸಂಶಯ ಇಲ್ಲ. ಬೇರೆಯವರಿಗೆ ಈ ಬಗ್ಗೆ ಆಗಾಗ್ಗೆ ಏಕೆ ಅನುಮಾನ ಮೂಡುತ್ತಿದೆ ಎಂಬುದು ನನಗೆ ತಿಳಿಯುತ್ತಿಲ್ಲ. ರಾಹುಲ್ ಗಾಂಧಿ ಅವರನ್ನು ಇತ್ತೀ ಚೆಗೆ ದೆಹಲಿಯಲ್ಲಿ ಭೇಟಿ ಮಾಡಿದಾಗ ಪಕ್ಷ ಸಂಘ ಟನೆ ಬಗ್ಗೆ ಮಾತುಕತೆ ನಡೆಸಿದ್ದು, ಮಾಧ್ಯಮಗಳಲ್ಲಿ ಈ ಬಗ್ಗೆ ಇಲ್ಲ-ಸಲ್ಲದ ಊಹಾಪೆÇೀಹಗಳು ಪ್ರಕಟಣೆ ಗೊಂಡಿವೆ. ಇಂತಹ ಕಟ್ಟುಕಥೆ ವರದಿಗಳು ಪತ್ರಿಕೋ ದ್ಯಮಕ್ಕೆ ಮಾರಕ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Translate »