ಅಂಬೇಡ್ಕರ್ ಎಲ್ಲಾ ಸಮುದಾಯಗಳಿಗೂ ಸೇರಿದ ವ್ಯಕ್ತಿ
ಹಾಸನ

ಅಂಬೇಡ್ಕರ್ ಎಲ್ಲಾ ಸಮುದಾಯಗಳಿಗೂ ಸೇರಿದ ವ್ಯಕ್ತಿ

December 7, 2018

ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 62ನೇ ವರ್ಷದ ಮಹಾ ಪರಿನಿಬ್ಬಾಣದ ಅಂಗವಾಗಿ ಹಮ್ಮಿ ಕೊಳ್ಳಲಾಗಿದ್ದ ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಅಂಬೇ ಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ನಂತರ ಮಾತನಾಡಿದ ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ, ಡಾ. ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಸಮಾಜಕ್ಕೆ ಸೇರಿದ ವ್ಯಕ್ತಿಯಲ್ಲ. ಇಡೀ ಭಾರತ ದೇಶಕ್ಕೆ ಸಂವಿಧಾನ ಕೊಟ್ಟಿರುವು ದರಿಂದ ಎಲ್ಲಾ ಸಮುದಾಯಕ್ಕೂ ಸೇರಿ ದವರು. ಅವರು ದೇಶಕ್ಕೆ ನೀಡಿದ ಸಂವಿ ಧಾನದಿಂದ ನಾವುಗಳು ಶಾಂತಿಯಿಂದ ಬದುಕುತ್ತಿದ್ದೇವೆ ಎಂದರು.ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ರವರ ನಿರ್ಣಯ ಕೇವಲ ಒಂದು ಜಿಲ್ಲೆಗೆ ಸೀಮಿತವಾಗಿಲ್ಲ. ರಾಜ್ಯದ 30 ಜಿಲ್ಲೆಗಳಿಗೂ ಆದ್ಯತೆ ನೀಡಿದ್ದಾರೆ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಗಲಿ, ಕುಮಾರಸ್ವಾಮಿ ಆಗಲಿ ಅಥವಾ ನಾನು ಎಂದಿಗೂ ಹಿಂದುಳಿದ ವರ್ಗಗಳ ವಿರುದ್ಧ ದ್ವೇಷ ಸಾಧಿಸಿಲ್ಲ. ದಲಿತರ ಮೀಸ ಲಾತಿಯನ್ನು ಶೇ.15 ರಿಂದ 18ಕ್ಕೆ ಹೆಚ್ಚಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ. ದಲಿತ ಸಮುದಾಯಗಳ ಏಳಿಗೆಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿ ಕೊಂಡಿದ್ದು, ಮುಂದಿನ ದಿನಗಳಲ್ಲಿ ಅನು ಷ್ಠಾನಗೊಳಿಸಲಾಗುವುದು ಎಂದರು.

ಶಾಸಕ ಪ್ರೀತಮ್ ಜೆ.ಗೌಡ ಮಾತ ನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‍ರವರ ಸಂವಿಧಾನದಿಂದಲೇ ಇಂದು ಹಾಸನ ಜಿಲ್ಲೆಯ ಮಣ್ಣಿನ ಮಗ ಹೆಚ್.ಡಿ.ದೇವೇಗೌಡರು ಪ್ರಧಾನಿಯಾ ಗಲು ಕಾರಣವಾಗಿದೆ. ರಾಜಕಾರಣ ಮಾಡು ವುದನ್ನು ಬದಿಗಿಟ್ಟಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅವಶ್ಯಕವಾಗಿ ಬೇಕಾಗಿರು ವುದು ರಸ್ತೆ, ಚರಂಡಿ ಮತ್ತು ಮೂರು ಹೊತ್ತು ಆಹಾರ ಎನ್ನುವುದನ್ನು ಕಳೆದ ಶತಮಾನದಲ್ಲಿ ಹೇಳುತ್ತಿದ್ದರು. ಆದರೆ ಇಂದು ಅವರಿಗೆ ಬೇಕಾಗಿರುವುದು ಅಕ್ಷರ ಮತ್ತು ಸ್ವಾಭಿಮಾನವಾಗಿ ಬದುಕುವುದು, ಸ್ವಾವಲಂಬನೆಯಾಗಿದೆ ಎಂದು ಹೇಳಿ ದರು. ಅವರಿಗೆ ಸಮರ್ಪಕವಾಗಿ ಸೌಲಭ್ಯ ತಲುಪಿಸುವ ಕೆಲಸ ಮಾಡಿದರೆ ಮಾತ್ರ ಇಂದಿನ ದಿನದ ಆಚರಣೆ ಸಾರ್ಥಕ ವಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತ ದೇವರಾಜು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅಂದು ಸಂವಿಧಾನ ತಂದು ಕೊಟ್ಟು ಇಂದು ದೇಶದ ಜನರು ನ್ಯಾಯ ಯುತವಾಗಿ ಬಾಳಲು ಸಾಧ್ಯವಾಗಿದೆ. ಮಹಿಳೆಯರಿಗೆ ಆಸ್ತಿ, ಶಿಕ್ಷಣ, ಕೆಲಸದಲ್ಲಿ ಹಕ್ಕು ಮತ್ತು ಗೌರವ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಆಲೂರು-ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಅಂಬೇಡ್ಕರ್ ನಮ್ಮನ್ನು ಬಿಟ್ಟು ಹೋದರೂ ಅವರು ಜಾರಿಗೆ ತಂದಂತಹ ಸಂವಿಧಾನ ಮತ್ತು ವಿಚಾರಗಳು ಇಂದು ಕೂಡ ಜೀವಂತವಾಗಿದೆ. ಅಂಬೇಡ್ಕರ್ ಅವರ ಇಂದಿನ ಸ್ಮರಣೆಯನ್ನು ಭಾವನಾತ್ಮಕವಾಗಿ ನೆನಪು ಮಾಡಿಕೊಳ್ಳುತ್ತಿದ್ದೇವೆ. ದೇಶದ ಅಭಿವೃದ್ಧಿಗೆ ಅಂಬೇಡ್ಕರ್ ಅವರ ಆದರ್ಶ ವನ್ನು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಪ್ರಕಾಶ್‍ಗೌಡ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುಟ್ಟಸ್ವಾಮಿ, ಅಪರ ಜಿಲ್ಲಾಧಿಕಾರಿ ವೈಶಾಲಿ, ಮೆಡಿಕಲ್ ಕಾಲೇಜು ನಿರ್ದೇಶಕ ರವಿಕುಮಾರ್, ಜಿಲ್ಲಾ ಸರ್ಕಾರಿ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಕೆ. ಶಂಕರ್, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ.ಶಿವಣ್ಣ, ದಲಿತ ಮುಖಂಡ ಹೆಚ್.ಕೆ.ಸಂದೇಶ್, ಹೆತ್ತೂರು ನಾಗ ರಾಜು, ಸಮಾಜ ಕಲ್ಯಾಣಾಧಿಕಾರಿಗಳು ಇತರರು ಪಾಲ್ಗೊಂಡಿದ್ದರು.
ಕೋಟ್ಸ್..

ಮೊರಾರ್ಜಿ ಶಾಲೆಯನ್ನು ಮುಂದಿನ ದಿನಗಳಲ್ಲಿ ಪಿಯುಸಿ, ಡಿಗ್ರಿ, ಬಿಕಾಂವರೆಗೂ ವಿಸ್ತರಿಸಲಾಗುವುದು. ಬಡ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು ಎಂಬ ದೃಷ್ಟಿ ಯಲ್ಲಿ ಇಂತಹ ನಿರ್ಧಾರ ಕೈಗೊಳ್ಳಲು ಚಿಂತಿಸಲಾಗುತ್ತಿದೆ.
– ಹೆಚ್.ಡಿ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ

Translate »