ಬರ ನಿರ್ವಹಣೆಗೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವ ರೇವಣ್ಣ ಸೂಚನೆ
ಹಾಸನ

ಬರ ನಿರ್ವಹಣೆಗೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವ ರೇವಣ್ಣ ಸೂಚನೆ

December 7, 2018

ಹಾಸನ: ಕುಡಿಯುವ ನೀರು ಪೂರೈಕೆ ಬರ ನಿರ್ವಹಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಅವರು ಜಿಲ್ಲೆಯ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸಭೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಪೂರೈಕೆ, ಎತ್ತಿನ ಹೊಳೆ ಯೋಜನೆ ಹಾಗೂ ರಸ್ತೆ ಕಾಮಗಾರಿ ಗಳಿಗೆ ಭೂಸ್ವಾದೀನ ಪ್ರಕ್ರಿಯೆ ಮರಳು ಪೂರೈಕೆ ಯಲ್ಲಿ ಆಗುತ್ತಿರುವ ವ್ಯತ್ಯಯ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಚಿ ವರು ಅಧಿಕಾರಿಗಳಿಂದ ಮಾಹಿತಿ ಪಡೆದು ಹಲವು ನಿರ್ದೇಶನಗಳನ್ನು ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಶಾಸಕರಾದ ಹೆಚ್. ಕೆ.ಕುಮಾರ ಸ್ವಾಮಿ ಎ.ಟಿ.ರಾಮಸ್ವಾಮಿ, ಕೆ.ಎಂ.ಶಿವಲಿಂಗೇ ಗೌಡ, ಸಿ.ಎನ್.ಬಾಲಕೃಷ್ಣ, ಪ್ರೀತಂ ಜೆ.ಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉಪಸ್ಥಿತಿ ಯಲ್ಲಿ ಸುದೀರ್ಘ ಸಭೆ ನಡೆಸಿದ ಸಚಿವರು ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿ ಗಳು ಹೊಸ ಯೋಜನೆಗಳ ಕುರಿತು ಚರ್ಚಿಸಿದರು.
ಮುಂದಿನ ನಾಲ್ಕು ತಿಂಗಳು ಬೇಸಿಗೆ ಕಾಲವಿದ್ದು ಜಿಲ್ಲೆಯ ಯಾವುದೇ ಗ್ರಾಮ ದಲ್ಲಿ ಕುಡಿಯುವ ನೀರಿನ ಸರಬರಾಜಿ ನಲ್ಲಿ ಸಮಸ್ಯೆ ಉಂಟಾಗಬಾರದು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಚುನಾವಣೆ ನೀತಿ ಸಂಹಿತೆ ಕೂಡ ಜಾರಿಯಲ್ಲಿರುತ್ತದೆ. ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಈಗಲೇ ಯೋಜನೆ ರೂಪಿಸಿ, ಅಗತ್ಯವಿರುವ ಕಡೆಗಳಲ್ಲಿ ಕೊಳವೆ ಬಾವಿ ಕೊರೆದು ಶಾಶ್ವತ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದರು.

ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಹಲವು ಕಡೆಗಳಲ್ಲಿ ಮರಳಿನ ನಿಕ್ಷೇಪಗಳಿವೆ. ಅದನ್ನು ಸಾರ್ವಜನಿಕರಿಗೆ ಬಳಸಲು ಕಾನೂನು ರೀತಿಯಲ್ಲಿ ಅಗತ್ಯ ಕ್ರಮ ವಹಿಸ ಬೇಕೆಂದು ಇಲ್ಲವೆ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿ ಕ್ರಿಯೆ ನೀಡಿ, ಈಗಾಗಲೇ ಮರಳು ನಿಕ್ಷೇಪ ಗಳನ್ನು ಗುರುತಿಸಲಾಗಿದೆ. ವಾಹನಗಳಿಗೆ ಜಿ.ಪಿ.ಎಸ್ ಅಳವಡಿಕೆ ಮಾಡಲಾಗುವುದು. ಆದಷ್ಟು ಬೇಗ ಸಾರ್ವಜನಿಕರಿಗೆ ಮರಳು ದೊರೆಯಲಿದೆ ಎಂದರು.
ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ಮರಳು ಅಕ್ರಮ ಸಾಗಾಣಿಕೆ ಬಗ್ಗೆಯೂ ನಿಗಾವಹಿಸಬೇಕು. ಚೆಕ್‍ಪೋಸ್ಟ್ ಮತ್ತು ಸಿ.ಸಿ ಟಿವಿ ಅಳವಡಿಕೆ ಮಾಡಬೇಕು ಎಂದರು.

ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಿ.ಎನ್.ಬಾಲಕೃಷ್ಣ ಅವರು ತಾಲೂ ಕಿನ ಬರಗಾಲದ ತೀವ್ರತೆ ವಿವರಿಸಿ ಹೆಚ್ಚಿನ ಬರ ಪರಿಹಾರ ನಿಧಿಗೆ ಒತ್ತಾಯಿಸಿದರು. ಹಾನಿಗೀಡಾಗಿರುವ ತೆಂಗು ಬೆಳೆ ಪುನಶ್ಚೇ ತನಕ್ಕೆ ಹೊಸದಾಗಿ ಸಸಿ ನೆಡಲು ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಗುಂಡಿಗೆ 800 ರೂಪಾಯಿ ನೀಡಬೇಕು ಹಾಗೂ 5 ವರ್ಷ ನಿರ್ವಹಣೆಗೆ ಹಣ ಒದಗಿಸ ಲಾಗುತ್ತಿದೆ ಎಂದರು.

ಇದೇ ರೀತಿ ಜಿಲ್ಲೆಯಲ್ಲಿ 14 ಲಕ್ಷ ತೆಂಗಿನ ಮರ ಹಾನಿಗೀಡಾಗಿದ್ದು 1 ಲಕ್ಷ ರೈತ ಕುಟುಂಬಗಳಿಗೆ ಬೇಗನೆ ಪರಿಹಾರ ವಿತರಿ ಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಾರಿ ರೈತರೇ ನೇರವಾಗಿ ಆಲುಗೆಡ್ಡೆ ಬಿತ್ತನೆ ಬೀಜ ಖರೀದಿಸಲಿ. ಅವರಿಗೆ ಶೇ.50 ರಷ್ಟು ಸಬ್ಸಿಡಿ ಹಣ ಒದಗಿಸಿ. ಜೊತೆಗೆ ಮೊದಲೇ ಉಚಿತವಾಗಿ ಔಷಧಗಳ ವಿತರಣೆ ಮಾಡಿ ಎಂದು ರೇವಣ್ಣ ಸೂಚಿಸಿದರು.

ಜಿಲ್ಲೆಯಲ್ಲಿ ಸಾಲಮನ್ನಾ ಯೋಜನೆ ಆದಷ್ಟು ಬೇಗನೆ ರೈತರಿಗೆ ತಲುಪಬೇಕು. ಜಿಲ್ಲಾಧಿಕಾರಿಯವರು ಸಹಕಾರ ಸಂಘ ಗಳ ಉಪನಿಬಂಧಕರು, ಖಾಸಗಿ ಹಾಗೂ ವಾಣಿಜ್ಯ ಬ್ಯಾಂಕ್ ವ್ಯವಸ್ಥಾಪಕರಿಂದ ಪಡೆದು ಒಟ್ಟಾರೆ ಸಾಲದ ಪ್ರಮಾಣದ ಬಗ್ಗೆ ಅಂತಿಮ ಮಾಹಿತಿ ಕ್ರೂಢೀಕರಿಸಿ ಶೀಘ್ರವಾಗಿ ತಮಗೆ ವರದಿ ನೀಡುವಂತೆ ರೇವಣ್ಣ ನಿರ್ದೇಶನ ನೀಡಿದರು.

ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಅತಿವೃಷ್ಠಿಯಿಂದ ಸಕಲೇಶ ಪುರ, ಆಲೂರು ತಾಲೂಕುಗಳಲ್ಲಿ ಆಗಿ ರುವ ಹಾನಿಯ ಬಗ್ಗೆ ಗಮನ ಸೆಳೆದು ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಅತಿವೃಷ್ಠಿ ಪೀಡಿತ ಕೊಡಗು ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಅದೇ ರೀತಿ ಹಾಸನ ಜಿಲ್ಲೆಯ ಮಳೆ ಹಾನಿ ಪೀಡಿತ ಪ್ರದೇಶಗಳಿಗೂ ಹೆಚ್ಚಿನ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವೈಶಾಲಿ, ಉಪ ವಿಭಾಗಾಧಿಕಾರಿಗಳಾದ ಲಕ್ಷ್ಮಿಕಾಂತ್ ರೆಡ್ಡಿ, ಡಾ.ಹೆಚ್.ಎಲ್.ನಾಗರಾಜ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Translate »