ಜಿಲ್ಲಾದ್ಯಂತ ಸಂವಿಧಾನ ಶಿಲ್ಪಿ ಜನ್ಮ ದಿನಾಚರಣೆ
ಹಾಸನ

ಜಿಲ್ಲಾದ್ಯಂತ ಸಂವಿಧಾನ ಶಿಲ್ಪಿ ಜನ್ಮ ದಿನಾಚರಣೆ

April 14, 2019

ಅಂಬೇಡ್ಕರ್ ಕೊಡುಗೆ ಅಪಾರ: ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಲ್ಲೆಡೆ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ

ಹಾಸನ: ಜಿಲ್ಲಾದ್ಯಂತ ಭಾನು ವಾರ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣ ವಾಗಿ ಆಚರಿಸಲಾಯಿತು.

ಹಾಸನ, ಆಲೂರು, ಅರಸೀಕೆರೆ, ಬೇಲೂರು, ಸಕಲೇಶಪುರ, ಅರಕಲಗೂಡು, ಶ್ರವಣ ಬೆಳಗೊಳ, ರಾಮನಾಥಪುರ, ಹೊಳೆನರ ಸೀಪುರ, ಚನ್ನರಾಯಪಟ್ಟಣದಲ್ಲಿ ವಿವಿಧ ಸಂಘ-ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ವಿಟ್ಟು ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿ ಸುವ ಮೂಲಕ ಗೌರವ ಸಮರ್ಪಣೆ ಮಾಡಿ ದರು. ಈ ವೇಳೆ ಅಂಬೇಡ್ಕರ್ ಅವರ ಕೊಡುಗೆ, ಜೀವನ, ಆದರ್ಶ, ತತ್ವ-ಸಿದ್ಧಾಂತಗಳ ಬಗ್ಗೆ ಗಣ್ಯರು ತಿಳಿಸುವ ಮೂಲಕ ಅವರ ಗುಣಗಾನ ಮಾಡಿದರು.

ಜಿಲ್ಲಾಡಳಿತದಿಂದ ಅಂಬೇಡ್ಕರ್ ಸ್ಮರಣೆ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾ ಟಿಸಿದರು. ಬಳಿಕ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕಂಡ ಅಪ್ರತಿಮ ವ್ಯಕ್ತಿ, ಶೋಷಿತ ಸಮುದಾಯಗಳ ಹಾಗೂ ಹಿಂದುಳಿದವರ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನು ಮುಡು ಪಾಗಿಟ್ಟಿದ್ದರು ಎಂದು ತಿಳಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಇಂತಹ ಮಹಾನ್ ವ್ಯಕ್ತಿಗಳ  ಆದರ್ಶಗಳನ್ನು ನಾವೆ ಲ್ಲರೂ ಮೈಗೂಡಿಸಿಕೊಂಡು ಅವರ ಮಾರ್ಗ ದರ್ಶನದಲ್ಲಿಯೇ ಸಾಗೋಣ ಎಂದ ಅವರು, ಅಂಬೇಡ್ಕರ್ ಇಡೀ ವಿಶ್ವಕ್ಕೆ ಮಾದರಿ ಯಾಗಿರುವವರು. ಅವರ ಬುದ್ದಿವಂತಿಕೆ ಯಿಂದ ಭಾರತವನ್ನು ಇತರೆ ರಾಷ್ಟ್ರಗಳು ಗುರುತಿಸುವಂತೆ ಮಾಡಿದರು ಎಂದರು.

ಏ.18ರಂದು ಚುನಾವಣೆ ದಿನವಾಗಿದ್ದು ತಪ್ಪದೇ ಪ್ರತಿಯೊಬ್ಬರೂ ಕಡ್ಡಾಯ ಮತ ದಾನ ಮಾಡೋಣ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯ್‍ಪ್ರಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಹೆಚ್ಚು ವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ನಗರಸಭೆ ಪೌರಾಯುಕ್ತೆ ರೂಪ ಶೆಟ್ಟಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಅರಸೀಕೆರೆ ವರದಿ: ನಗರದ ತಾಲೂಕು ಕಚೇರಿ ಸೇರಿದಂತೆ ವಿವಿಧೆಡೆ ಭಾನುವಾರ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ್ ಸಂತೋಷ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿ ಧಾನ ರಚಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ನೀಡುವ ಜೊತೆಯಲ್ಲಿ, ನೊಂದ ದೀನ ದಲಿತರಿಗೆ ದಾರಿದೀಪ ವಾಗಿದ್ದಾರೆ ಎಂದರು.

ಅಂಬೇಡ್ಕರ್ ಅವರು ಇಂದು ವಿಶ್ವಕ್ಕೆ ಮಾದರಿಯಾಗುವುದರ ಮೂಲಕ ಉತ್ತಮ ಸಂವಿಧಾನ ರೂಪಿಸಿದÀ ಮಹಾನ್ ಪುರು ಷರು ಎಂಬ ಹೆಗ್ಗಳಿಕೆ ಅವರಿಗಿದೆ. ಲೋಕ ಸಭಾ ಚುನಾವಣೆ ನಿಮಿತ್ತ ನೀತಿ ಸಂಹಿತೆ ಇರುವುದರಿಂದ ಹೆಚ್ಚಿನ ಅದ್ಧೂರಿ ಕಾರ್ಯ ಕ್ರಮವನ್ನಾಗಿ ಆಚರಣೆ ಮಾಡದಿದ್ದರೂ, ಇಂದು ಸಂಘ ಸಂಸ್ಥೆಗಳ ಪದಾಧಿಕಾರಿ ಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಗಳನ್ನು ಕೋರುತ್ತೇನೆ ಎಂದರು.

ನಗರದಲ್ಲಿರುವ ಅಂಬೇಡ್ಕರ್ ವೃತ್ತದ ಲ್ಲಿರುವ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಪುಷ್ಪ ನಮನ ಸಲಿಸಿದರು. ಸಿಂಧೂ ಭವನದಲ್ಲಿ ಮಾದಿಗ ದಂಡೋದರ ಸೇರಿ ದಂತೆ ವಿವಿಧ ದಲಿತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಹಾಸನ ರಸ್ತೆಯಯಲ್ಲಿ ಅಂಬೇಡ್ಕರ್ ಯುವಕ ಸಂಘದಿಂದ ಶ್ರೀರಾಮನವಮಿ ಮತ್ತು ಅಂಬೇಡ್ಕರ್ ಜಯಂತಿಯನ್ನು ಯವಕರು ಅದ್ದೂರಿಯಾಗಿ ಆಚರಿಸಿ ದರು. ತಾಲೂಕಿನ ವಿವಿಧೆಡೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕಾರ್ಯಕರ್ತರು ಜಯಂತಿಯನ್ನು ಆಚರಿ ಸುವುದರ ಮೂಲಕ ವಿಚಾರ ಧಾರೆಗಳನ್ನು ತಿಳಿಸುವುದರ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದÀಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೆರ್Éೀಶಕ ಪರಮ ಶಿವಮೂರ್ತಿ, ನಗರಸಭೆ ಪೌರಾಯುಕ್ತ ಚಲಪತಿ, ತಾಪಂ ಇಓ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ, ಸದಸ್ಯ ಜಿ.ರಾಮು, ಮುಖಂಡರಾದ ಮಂಜುಳಾ ಬಾಯಿ, ಶಿವಮೂರ್ತಿ, ಸುಲೋ ಚನಾ ಬಾಯಿ, ಗಂಗಾಧರ್ ನಾಯ್ಕ್,  ಚಿಕ್ಕ ಬಾಣಾವರ ವೆಂಕಟೇಶ್, ಎ.ಪಿ.ಚಂದ್ರಯ್ಯ, ಸುನೀಲ್ ನಾಯ್ಕ್, ಪೌರ ಕಾರ್ಮಿಕ ಮಂಜು ನಾಥ್, ಗೋವಿಂದರಾಜು, ಶೇಖರಪ್ಪ, ಹರಿ ಪ್ರಸಾದ್, ಜಯಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಅಂಬೇಡ್ಕರ್ ಯುವಕರ ಸಂಘದಿಂದ ಅನ್ನ ಸಂತರ್ಪಣೆ

ಬೇಲೂರು:  ಡಾ.ಬಿ.ಆರ್.ಅಂಬೇಡ್ಕರ್ 128ನೇ ಜಯಂತಿ ಅಂಗವಾಗಿ ಪಟ್ಟ ಣದ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಅನ್ನಸಂತರ್ಪಣೆ ನಡೆಸುವ ಮೂಲಕ ವಿಶೇಷವಾಗಿ ಆಚರಿಸಿದರು.

ಜಯಂತಿ ಅಂಗವಾಗಿ ಅಂಬೇಡ್ಕರ್ ಯುವಕ ಸಂಘದಿಂದ ಪ್ರತಿಮೆಯನ್ನು ಸ್ವಚ್ಛ ಗೊಳಿಸಿ, ತಳಿರು ತೋರಣ ಹಾಗೂ ವಿದ್ಯುತ್ ದೀಪ, ವಿವಿಧ ಪುಷ್ಪಗಳಿಂದ ಅಲಂ ಕರಿಸಿ ವಿಶೇಷವಾಗಿ ಪುಷ್ಪಹಾರ ಹಾಕಿ ಹಬ್ಬದ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಯನ್ನು ನೂರಾರು ಸದಸ್ಯರೊಂದಿಗೆ ಆಚರಿಸಲಾಯಿತು. ಅಲ್ಲದೆ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಮಾಡಲು ಆಗಮಿಸುತ್ತಿದ್ದ ಪ್ರತಿಯೊಬ್ಬರಿಗೂ ಬೆಳಗಿನ ಉಪಹಾರ ನೀಡಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಚಂದ್ರಯ್ಯ, ಜಗದೀಶ್, ರಾಮಣ್ಣ, ಬಿ.ಎಲ್.ಲಕ್ಷ್ಮಣ್, ಕುಮಾರಸ್ವಾಮಿ, ಸತೀಶ್, ಚನ್ನಕೇಶವ, ಮಂಜುನಾಥ್, ಮಹೇಶ್, ಚಂದ್ರಶೇಖರ್, ಪಾಪಣ್ಣಿ, ಗಂಗಾಧರ್, ಮಲ್ಲೇಶ್ ಇನ್ನಿತರರಿದ್ದರು.

 

Translate »