ಸಿಎನ್‍ಸಿಯಿಂದ ಎಡಮ್ಯಾರ್ ಹೊಸ ವರ್ಷಾಚರಣೆ
ಕೊಡಗು

ಸಿಎನ್‍ಸಿಯಿಂದ ಎಡಮ್ಯಾರ್ ಹೊಸ ವರ್ಷಾಚರಣೆ

April 14, 2019

ಕುಶಾಲನಗರ: ಸಮೀಪದ ಚಿಕ್ಕ ಬೆಟ್ಟಗೇರಿ ಗ್ರಾಮದಲ್ಲಿ ಭಾನುವಾರ ಕೊಡವ ಪಂಚಾಂಗದ ಹೊಸವರ್ಷ ಎಡಮ್ಯಾರ್ ಅಂಗವಾಗಿ ಸಿಎನ್‍ಸಿ ಸಂಘಟನೆಯ ಆಶ್ರಯ ದಲ್ಲಿ ಭೂಮಿತಾಯಿ ಹಾಗೂ ಜಾನುವಾರು ಗಳಿಗೆ ಪೂಜೆ ಸಲ್ಲಿಸುವ ಮೂಲಕ ಜೋಡಿ ಎತ್ತುಗಳ ಮೂಲಕ ಗದ್ದೆಯಲ್ಲಿ ಉಳುಮೆ ಮಾಡಿ ಕೃಷಿಚಟುವಟಿಕೆಗೆ ಚಾಲನೆ ನೀಡಲಾಯಿತು.

ಚಿಕ್ಕಬೆಟ್ಟಗೇರಿ ಗ್ರಾಮದ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಇಂದು ಬೆಳಿಗ್ಗೆ ಸಿಎನ್‍ಸಿ ಮುಖ್ಯಸ್ಥ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಕಾರ್ಯ ಕರ್ತರು ಕೊಡವರ ಸಂಪ್ರಾದಾಯಿಕದಂತೆ ಉಡುಗೆ ತೊಡುಗೆ ಧರಿಸಿ ಹೊಸ ವರ್ಷ ವನ್ನು ಸಂಭ್ರಮದಿಂದ ಆಚರಿಸಿದರು. ಇಂದು ಕೊಡವ ವರ್ಷದ ಪ್ರಾರಂಭದ ದಿನವಾಗಿದ್ದು, ಸಾಂಪ್ರದಾಯಿಕ ಹಿನ್ನಲೆಯಲ್ಲಿ ಎತ್ತುಗಳನ್ನು ಹಾಗೂ ಭೂಮಿ ತಾಯಿಗೆ (ಗದ್ದೆಗೆ) ಪೂಜೆ ಸಲ್ಲಿಸಿ ಉಳುಮೆ ಮಾಡುವ ಮೂಲಕ ನಾಚಪ್ಪ ಶುಭ ಹಾರೈಸಿದರು.

ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ಈ ದಿನ ಹೊಸ ವರ್ಷ ಆಚರಿಸಲಾಗುತ್ತದೆ. ಈ ಸಂದರ್ಭ ಮಾತನಾಡಿದ ನಾಚಪ್ಪ ಅವರು, ಎಲ್ಲ ಮೂಲ ಭೂತ ಹಕ್ಕುಗಳನ್ನು ಸಂವಿಧಾನ ಬದ್ಧಗೊಳಿ ಸಲು ಸರ್ಕಾರ ‘ಕೊಡವ ಲ್ಯಾಂಡ್’ ಕೇಂದ್ರಾ ಡಳಿತ ಪ್ರದೇಶವಾಗಿ ಘೋಷಣೆ ಮಾಡ ಬೇಕು ಎಂದು ಆಗ್ರಹಿಸಿದರು. ಅಲ್ಪಸಂಖ್ಯಾ ತರಾಗಿರುವ ಕೊಡವರಿಗೆ ಬುಡಕಟ್ಟು ಜನಾಂ ಗದ ಸ್ಥಾನಮಾನ ನೀಡುವ ಮೂಲಕ ಸಂವಿ ಧಾನ ಭದ್ರತೆ ನೀಡಬೇಕು ಎಂದರು.

ಇಂದಿನ ಪೀಳಿಗೆಗೆ ಅಮೂಲ್ಯ ಸಂಸ್ಕೃತಿ ಯನ್ನು ಬಳುವಳಿಯಾಗಿ ನೀಡುವುದು ಮತ್ತು ಮಾನವರ ನಡುವಿನ ಬಾಂಧವ್ಯಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲು ಕೊಡ ವರು ಸಾಮೂಹಿಕವಾಗಿ ಹಬ್ಬಹರಿದಿನ ಗಳನ್ನು ಆಚರಣೆ ಮಾಡುವುದು ಅಗತ್ಯ ವಾಗಿದೆ ಎಂದು ಅಭಿಪ್ರಾಯಪಟ್ಟರು. ಉಳು ಮೆಗೆ ಮುನ್ನಾ ಮನೆಯ ನೆಲ್ಲಕ್ಕಿ ಬಾಡೆ ಯಲ್ಲಿ ಪೂಜೆ ಸಲ್ಲಿಸಿ ನಂತರ ಗದ್ದೆಯಲ್ಲಿ ಹೊಲ ಹಾಗೂ ಎತ್ತುಗಳಿಗೆ ಸಾಂಪ್ರದಾ ಯಿಕ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಸಿ.ಎನ್.ಸಿ. ಸಂಘಟ ನೆಯ ಪ್ರಮುಖರಾದ ನಂದಿನೆರವಂಡ ಉತ್ತಪ್ಪ, ನಂದಿನೆರವಂಡ ವಿಜು, ನಂದಿ ನೆರವಂಡ ಬೋಪಣ್ಣ, ಪಾರ್ವತಿ ನಾಚಪ್ಪ ಮತ್ತು ಕುಟುಂಬಸ್ಥರು ಇದ್ದರು.

Translate »