ನೆರೆ ಸಂತ್ರಸ್ತ ಕಾಲೂರು ಮಹಿಳೆಯರ ಛಲ ಶ್ಲಾಘನೀಯ
ಕೊಡಗು

ನೆರೆ ಸಂತ್ರಸ್ತ ಕಾಲೂರು ಮಹಿಳೆಯರ ಛಲ ಶ್ಲಾಘನೀಯ

ಮಡಿಕೇರಿ: ಪ್ರಕೃತಿ ವಿಕೋಪ ದಿಂದ ಸಂಕಷ್ಟ ಎದುರಿಸಿದ ಕೊಡಗಿನ ಗ್ರಾಮೀಣ ಪ್ರದೇಶದ ಜನತೆ, ಸಂಘಸಂಸ್ಥೆ ಗಳ ನೆರವಿನೊಂದಿಗೆ ಮತ್ತೆ ಸ್ವಾವಲಂಭಿ ಜೀವನಕ್ಕೆ ಮರಳುತ್ತಾರೆ ಎಂಬ ವಿಶ್ವಾಸವನ್ನು ದಕ್ಷಿಣ ಕನ್ನಡ ಕನ್ನಡಿಗರ ಸಂಘದ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯ ಶಿಶುಕಲ್ಯಾಣ ಸಂಸ್ಥೆಯ ಮುಂಬದಿ ಭಾರತೀಯ ವಿದ್ಯಾಭವನದ ಪ್ರಾಜೆಕ್ಟ್ ಕೂರ್ಗ್‍ನ ಯಶಸ್ವಿನಿ ಯೋಜನೆ ಯಡಿ ಕಾಲೂರು ಗ್ರಾಮದ ಮಹಿಳೆ ಯರು ತಯಾರಿಸಿದ ಮಸಾಲಾ ಪದಾರ್ಥ ಗಳ ಎರಡನೇ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ರಾಮಚಂದ್ರ ಉಪಾಧ್ಯಾಯ, ಕಾಲೂರು ಗ್ರಾಮದ ಛಲ ವಂತ ಮಹಿಳೆಯರು ತಯಾರಿಸಿದ ಉತ್ಪನ್ನ ಗಳು ದೇಶದ ಇತರ ಹೆಸರಾಂತ ಉತ್ಪನ್ನ ಗಳಿಗೆ ಸರಿಸಮನಾಗಿ ಖ್ಯಾತವಾಗಲಿ ಎಂದು ಹಾರೈಸಿದರು. ವೈಜ್ಞಾನಿಕ ಮತ್ತು ಅತ್ಯಾ ಧುನಿಕ ರೀತಿಯಲ್ಲಿ ಉತ್ಪನ್ನಗಳ ತಯಾ ರಿಕೆಗೆ ಸಹಕಾರ ನೀಡುವುದಾಗಿಯೂ ಭರವಸೆ ನೀಡಿದ ರಾಮಚಂದ್ರ ಉಪಾ ಧ್ಯಾಯ, ಭಾರತೀಯ ವಿದ್ಯಾಭವನವು ಸಾಂಸ್ಕø ತಿಕ ಚಟುವಟಿಕೆಗಳೊಂದಿಗೆ ಸಾಮಾಜಿಕ ಕಳಕಳಿಯ ಯೋಜನೆ ರೂಪಿಸುತ್ತದೆ ಎಂಬು ದನ್ನು ಕೊಡಗಿನ ಕೇಂದ್ರ ನಿರೂಪಿಸಿದೆ ಎಂದು ಶ್ಲಾಘಿಸಿದರು.

ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತ ನಾಡಿ, ಜಲಪ್ರಳಯದಿಂದ ಸಂಕಷ್ಟಕ್ಕೀಡಾ ಗಿದ್ದ ಕಾಲೂರಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಇಲ್ಲಿನ ಮಹಿಳೆಯರು ಸ್ವಾವ ಲಂಭಿಗಳಾಗಬೇಕೆಂಬ ಧೋರಣೆಯಿಂದ ಹಠತೊಟ್ಟು ಸಾಧನೆಯ ಹಾದಿಯಲ್ಲಿ ಮುನ್ನ ಡೆದದ್ದು ಶ್ಲಾಘನೀಯ ಎಂದರು. ಊಹೆಗೂ ನಿಲುಕದಂಥ ಜಲಪ್ರಳಯವು ಹಲವರ ಜೀವ ಬಲಿ ಪಡೆದಿರುವುದು ಮಾತ್ರವಲ್ಲ, ಅನೇಕರು ಬದುಕಿಯೂ ಸಾಯುತ್ತಿರು ವಂಥ ಸ್ಥಿತಿಗೆ ತಂದೊಡ್ಡಿದೆ ಎಂದು ವಿಷಾ ಧಿಸಿ, ಯಾವುದೇ ಸಂಕಷ್ಟವಿದ್ದರೂ ಭಾರ ತೀಯ ವಿದ್ಯಾಭವನ ಸೇರಿದಂತೆ ಅನೇಕ ಸಂಘಸಂಸ್ಥೆಗಳು ಅಂಥವರ ನೆರವಿಗೆ ಮುಂದಾ ಗಲಿದೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕಾಲೂರಿನ ಮಹಿ ಳೆಯರ ಜೀವನ ಸ್ಥಿತಿ ಸುಧಾರಣೆಗೆ ಈ ಯೋಜನೆ ನೆರವಾಗಿರುವುದು ಶ್ಲಾಘನೀಯ ಎಂದರು. ದಕ್ಷಿಣ ಕನ್ನಡ ಕನ್ನಡಿಗರ ಸಂಘದ ಕಾರ್ಯ ದರ್ಶಿ ವೈ.ಜಯಂತ್ ರಾವ್, ನಿರ್ದೇಶಕ ರಾದ ಕೆ.ಎಸ್.ಅಡಿಗ, ಹರಿದಾಸ ಉಪಾ ಧ್ಯಾಯ, ಪೂರ್ಣಿಮಾ ರಾಮಚಂದ್ರ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಉಪಾಧ್ಯಕ್ಷ ಕೆ.ಪಿ.ಉತ್ತಪ್ಪ, ಕಾಲೂರು ಗ್ರಾಮದ ಭಗವತಿ ದೇವಾಲಯದ ಪ್ರಧಾನ ಅರ್ಚಕ ನಾಗೇಶ್ ಕಾಲೂರು, ಪ್ರಾಜೆಕ್ಟ್ ಕೂರ್ಗ್ ಸಂಚಾಲಕ ಬಾಲಾಜಿ ಕಶ್ಯಪ್, ನಿರ್ದೇಶಕರಾದ ನಯನಾ ಕಶ್ಯಪ್, ರಮೇಶ್ ಹೊಳ್ಳ, ಅನಿಲ್ ಎಚ್.ಟಿ., ಎಂ.ಇ.ಚಿಣ್ಣಪ್ಪ, ಓಂಕಾರೇಶ್ವರ ದೇವಾ ಲಯ ಸಮಿತಿ ಅಧ್ಯಕ್ಷ ಜಗದೀಶ್, ಕೊಡಗು ಹೊಟೇಲ್, ರೆಸ್ಟೋರೆಂಟ್ ರೆಸಾರ್ಟ್ ಅಸೋಸಿಯೇಷನ್ ಖಜಾಂಚಿ ಭಾಸ್ಕರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

April 14, 2019

Leave a Reply

Your email address will not be published. Required fields are marked *