ಅಂಬೇಡ್ಕರ್ ಆಶಯ ಈಡೇರಿಕೆಗೆ ಮತದಾನದ ಹಕ್ಕು ಚಲಾಯಿಸಿ
ಕೊಡಗು

ಅಂಬೇಡ್ಕರ್ ಆಶಯ ಈಡೇರಿಕೆಗೆ ಮತದಾನದ ಹಕ್ಕು ಚಲಾಯಿಸಿ

ಗೋಣಿಕೊಪ್ಪಲು: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕನಸುಗಳು ಮತ್ತು ಸಂವಿಧಾನದಲ್ಲಿರುವ ಆಶಯಗಳು ಹಾಗೂ ಉದ್ದೇಶಗಳನ್ನು ಪೂರ್ಣ ಗೊಳಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಲೋಕೋಪಯೋಗಿ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಕರೆ ನೀಡಿದರು.

ಮೈತ್ರಿ ಪಕ್ಷದ ವತಿಯಿಂದ ಗೋಣಿ ಕೊಪ್ಪ ಸ್ವಾತಂತ್ರ್ಯ ಹೋರಾಟಗಾರರ ಭವ ನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಪ್ರಚಾರ ಸಭೆ ಯಲ್ಲಿ ಮಾತನಾಡಿದ ಅವರು, ಸಂವಿ ಧಾನದ ಅಡಿಯಲ್ಲಿ ಆಡಳಿತ ನಡೆಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ ದೇಶದಲ್ಲಿ ಮೋದಿ ಸರ್ವಾಧಿಕಾರ ನಡೆ ಯುತ್ತಿದೆ. ಸಮೃದ್ಧ ಭಾರತದ ಆಲೋಚನೆ ಕಾಂಗ್ರೆಸ್ ಪಕ್ಷದಲ್ಲಿದೆ. ಆದರೆ ಮೋದಿ ಭಾರತದ ಆಶಯ ಬಿಜೆಪಿ ಸರ್ಕಾರದ ಚಿಂತನೆಯಾಗಿದೆ. ಬಿಜೆಪಿ ಅಂಬೇಡ್ಕರ್ ಅವರ ಸಾಂವಿಧಾನವನ್ನು ಬುಡಮೇಲು ಮಾಡು ತ್ತಿದೆ ಎಂದು ಆರೋಪಿಸಿದರು.

ಜನರಿಂದ ಆರಿಸಿ ಬಂದ ಸರ್ಕಾರ ಆಡಳಿತ ನಡೆಸಬೇಕು. ಆದರೆ ದೇಶದ ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳ ವಿರುದ್ಧ ನಡೆದುಕೊಳ್ಳುತ್ತಿರು ವುದನ್ನು ಕಾಣುತ್ತಿದ್ದೇವೆ. ಭಾರತದ ಸಂವಿ ಧಾನ ಅಪಾಯದಲ್ಲಿದೆ ಹಾಗೂ ಪ್ರಜಾಪ್ರ ಭುತ್ವ ಶೋಚನೀಯ ಸ್ಥಿತಿಯಲ್ಲಿದೆ. ಸಂವಿ ಧಾನ ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿಯುತ್ತಿದೆ ಎಂದು ಹೇಳಿದರು.

ಕೇರಳದ ವಯನಾಡು ಕ್ಷೇತ್ರದ ಮಾಜಿ ಸಚಿವೆ ರೋಸಾ ಕುಟ್ಟಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಎಲ್ಲಾ ಅಂಶಗಳನ್ನು ಹೇಳ ಲಾಗಿದೆ. ಪ್ರಣಾಳಿಕೆಯನ್ನು ಅರ್ಥೈಸಿ ಕೊಂಡು ಮೈತ್ರಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ. ಮೋದಿ ಸರ್ಕಾರದಲ್ಲಿ ಬಡವರಿಗೆ ಹಣವಿಲ್ಲ. ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಲಲಿತ್ ಮೋದಿಗೆ ನರೇಂದ್ರ ಮೋದಿ ನಂಟಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ ಮಂಜುನಾಥ್ ಮಾತನಾಡಿ, ದೇಶದ ಉಳಿವಿಗೆ ಜಾತ್ಯಾ ತೀತ ಪಕ್ಷಗಳ ಉಳಿವು ಅತಿಮುಖ್ಯ. ಮೈತ್ರಿ ಪಕ್ಷದ ಆಯ್ಕೆ ಮೂಲಕ ದೇಶವನ್ನು ಉಳಿಸುವ ಹೊಣೆಗಾರಿಕೆ ಮತದಾರರ ಮೇಲಿದೆ. ರಾಹುಲ್ ಗಾಂಧಿ ಬಡವರ ಖಾತೆ ಗಳಿಗೆ ವಾರ್ಷಿಕ 72000 ರೂ.ಗಳನ್ನು ಜಮೆ ಮಾಡುವ ಘೋಷಣೆಯನ್ನು ಮಾಡಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಡವರಿಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಅದ್ದರಿಂದ ಕೋಟ್ಯಾಂತರ ಬಡವರು ಪ್ರಯೋಜನವನ್ನು ಪಡೆದಿದ್ದಾರೆ. ಮೈತ್ರ ಪಕ್ಷಕ್ಕೆ ಮತವನ್ನು ನೀಡುವ ಮೂಲಕ ಸರ್ಕಾರದ ಋಣವನ್ನು ತೀರಿಸಿ ಎಂದು ಮನವಿ ಮಾಡಿದರು.

ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್ ಮಾತ ನಾಡಿ, ಸಂವಿಧಾನವನ್ನು ತಿರುಚಲು ಹೊರ ಟಿರುವ ಬಿಜೆಪಿ ಸರ್ಕಾರ ನಮಗೆ ಬೇಕಿಲ್ಲ. 5 ವರ್ಷಗಳಲ್ಲಿ ಒಂದು ದಿನವೂ ಅಚ್ಚೇ ದಿನ್ ಬಂದಿಲ್ಲ. ಸ್ವಿಜ್ ಬ್ಯಾಂಕ್‍ನಲ್ಲಿರುವ ಕಪ್ಪುಹಣವನ್ನು ದೇಶದ ಪ್ರತಿಯೊಬ್ಬ ನಾಗ ರಿಕನ ಖಾತೆ ಜಮಾ ಮಾಡುವ ಭರವಸೆ ಹುಸಿಯಾಗಿದೆ ಎಂದು ಹೇಳಿದರು.

ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ, ಮಾಜಿಸಚಿವೆ ಸುಮಾ ವಸಂತ್, ಶಾಸಕಿ ವೀಣಾ ಅಚ್ಚಯ್ಯ, ಮಾಜಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ, ಪರಿಶಿಷ್ಟ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷೆ ಪಂಕಜಾ, ಪಕ್ಷದ ಕ್ಷೇತ ವೀಕ್ಷಕ ಶಾಹಿದ್ ಇದ್ದರು.

April 14, 2019

Leave a Reply

Your email address will not be published. Required fields are marked *