ಅಂಬೇಡ್ಕರ್ ಒಂದು ವರ್ಗಕ್ಕೆ ಸೀಮಿತರಲ್ಲ
ಕೊಡಗು

ಅಂಬೇಡ್ಕರ್ ಒಂದು ವರ್ಗಕ್ಕೆ ಸೀಮಿತರಲ್ಲ

April 14, 2019

ವಿರಾಜಪೇಟೆ: ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದಂತ ಸಂವಿಧಾನ ಶಿಲ್ಪಿ ಡಾ;ಬಿ.ಆರ್.ಅಂಬೇಡ್ಕರ್ ಒಂದು ಸಮಾಜಕ್ಕೆ ಸೀಮಿತರಲ್ಲ, ಅವರು ದೇಶದ ಮಹಾನ್ ವ್ಯಕ್ತಿ ಭಾರತ ರತ್ನ. ಸದಾ ಅವರನ್ನು ನೆನಪಿಸುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ವಿರಾಜಪೇಟೆ ತಹಶಿಲ್ದಾರ್ ಬಿ.ಎಂ.ಗೋವಿಂದರಾಜು ಹೇಳಿದರು.

ವೀರಾಜಪೇಟೆ ಮಿನಿವಿಧಾನ ಸೌಧ ತಾಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸರಳ ರೀತಿಯಾಗಿ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮದಿನಾ ಚರಣೆ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನವನ್ನು ರಚಿಸಿದಂತ ಸಂವಿಧಾನ ಶಿಲ್ಪಿ ಭಾರತದ ಪ್ರಜಾ ಪ್ರಭುತ್ವದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಮತ್ತು ದೇಶದಲ್ಲಿ ಸಮಾನತೆಯನ್ನು ತೋರಿಸಿಕೊಟ್ಟಂತವರು. ಅಂಬೇಡ್ಕರ್ ದೇಶ ಕಟ್ಟಲು ಪ್ರಯತ್ನಿಸಿದಂತ ಹಿರಿಯ ನಾಯಕರನ್ನು ಪ್ರತಿಯೊಬ್ಬರು ಸ್ಮರಿಸುವ ಮೂಲಕ ಅವರ ಅದರ್ಶವನ್ನು ಪಾಲಿಸುವಂತಾಗಬೇಕು ಎಂದರು. ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯ, ಸಹಾಯಕ ಚುನಾವಣಾಧಿಕಾರಿ ಪಿ.ಶ್ರೀನಿವಾಸ್, ಹೆಚ್.ಸಿ.ಚಂದ್ರು, ತಾಲೂಕು ಕಛೇರಿ ಸಿಬ್ಬಂದಿಗಳು, ಚುನಾವಣಾ ತಂಡದ ಸದಸ್ಯರುಗಳು ಮುಂತಾದವರು ಉಪಸ್ಥಿತರಿದ್ದರು.

Translate »