ಅಂಬಿಗರ ಚೌಡಯ್ಯ, ಮಹಾಯೋಗಿ ವೇಮನ ಜಯಂತಿ ಆಚರಣೆ
ಹಾಸನ

ಅಂಬಿಗರ ಚೌಡಯ್ಯ, ಮಹಾಯೋಗಿ ವೇಮನ ಜಯಂತಿ ಆಚರಣೆ

January 22, 2019

ಹಾಸನ: ಅಂಬಿಗರ ಚೌಡಯ್ಯ ಮತ್ತು ಮಹಾಯೋಗಿ ವೇಮನ ಮಹರ್ಷಿಗಳು ಸಮಾಜದಲ್ಲಿನ ಪಿಡುಗು ಗಳ ವಿರುದ್ಧ ಧ್ವನಿಯಾಗಿ ಎಲ್ಲರಿಗೂ ದಾರಿದೀಪವಾಗಿ ಬದುಕಿದರು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು ತಿಳಿಸಿದರು.

ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಾಸನಾಂಬ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಅಂಬಿಗರ ಚೌಡಯ್ಯ ಮತ್ತು ಮಹಾ ಯೋಗಿ ವೇಮನ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿ ದರು. ಇಬ್ಬರು ಮಹನೀಯರು ಹಿಂದಿನ ಕಾಲದಿಂದಲೂ ಸಮಾನತೆಯ ಪರವಾಗಿ ಅನೇಕ ಕಾರ್ಯಗಳನ್ನು ಮಾಡಿದವರು ಸರ್ವರೂ ಸಮಾನರು ಎಂದವರು. ಸಾಮಾಜಿಕ ಕಳಕಳಿಗೆ ಸಾಹಿತ್ಯಗಳನ್ನು ರಚಿಸುವುದರ ಮೂಲಕ ಜನಜಾಗೃತಿ ಮೂಡಿಸಿದರು ಎಂದರು.

ಅಂಬಿಗರ ಚೌಡಯ್ಯನವರು ಇತರ ಸಾಹಿತ್ಯ ವಚನಕಾರರಿಗಿಂತ ವಿಭಿನ್ನವಾ ಗಿದ್ದು ನೇರವಾದ ಮಾತುಗಳ ಮೂಲಕ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಿ ದಂತಹ ಇವರ ವಿಚಾರಗಳು ನಿಜಕ್ಕೂ ಶ್ಲಾಘನೀಯ. ಇನ್ನೂ ವೇಮನವರೂ ಕೂಡ ತಮ್ಮ ಸಾಹಿತ್ಯದಿಂದ ಸಾಮಾನ್ಯ ರಿಗೆ ಅರಿವು ಮೂಡಿಸಿದಂತಹವರು ಎಂದು ತಿಳಿಸಿದರಲ್ಲದೆ, ಇವರ ಸಮುದಾಯ ದವರಿಗೆ ಉನ್ನತ ಶಿಕ್ಷಣ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ಮೂಲಭೂತ ಸೌಲಭ್ಯ ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಮಾತನಾಡಿ, ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನ ಇಬ್ಬರು ದಾರ್ಶ ನಿಕರೆ ಇಬ್ಬರೂ ಸ್ಮರಣಿಯರೇ. ಸಮಾಜ ದಲ್ಲಿನ ಅಂಕುಡೊಂಕುಗಳನ್ನು ತಿದ್ದಿದ ವರು. ವಚನಕಾರರಾದ ಬಸವಣ್ಣನವರು ನಯವಾಗಿ ಮಾತನಾಡುತ್ತಿದ್ದರೆ ಚೌಡಯ್ಯ ನವರು ನೇರವಾದ ಮಾತುಗಳನ್ನು ಬಳಸು ತ್ತಿದ್ದಂತಹವರು, ತನ್ನ ಮಾತುಗಳನ್ನು ಖಂಡಿಸಿ ಹೇಳಿದಂತಹವರು ಎಂದರು.

ಮಹಾಯೋಗಿ ಅವರು ಮೂಢ ನಂಬಿಕೆಗಳ ವಿರುದ್ಧ ಹೋರಾಡಿದ ಮಹಾ ನರು. ಇವರುಗಳ ವಚನಗಳನ್ನು ಮುಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕೆಂದರು.
ಅಪರ ಹೆಚ್ಚುವರಿ ಪೊಲೀಸ್ ಅಧಿಕಾರಿ ಬಿ.ಕೆ ನಂದಿನಿ ಮಾತನಾಡಿ, ವಚನಕಾರರ ಆದರ್ಶ, ಚಿಂತನೆಗಳು ಇಂದಿಗೂ ಪ್ರಸ್ತುತ ಅವರ ಸಾಹಿತ್ಯವನ್ನು ಗಮನಿಸಿದಾಗ ಅರ್ಥವಾಗದೆ ಇರುವಂತಹ ಸಾಮಾನ್ಯ ಜನರಿಗೆ ಇವರ ಸಾಹಿತ್ಯ, ವಚನಗಳು ಅರ್ಥವಾಗುವಂತಿದೆ ಎಂದು ಅವರು ತಿಳಿಸಿದರು. ಇಂದಿಗೂ ಸಹ ಬಾಲ್ಯ ವಿವಾಹ, ಜಾತಿ ಪದ್ಧತಿ ಸೇರಿದಂತೆ ಹಲ ವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಇದರ ವಿರುದ್ಧ ಹೋರಾಡಿದವರು ಈ ಮಹಾನ್ ಪುರುಷರು, ಇವರುಗಳು ಯಾವುದೋ ಒಂದು ವರ್ಗಕ್ಕೆ ಮಾತ್ರ ಸೀಮಿತವಾದವರಲ್ಲ ಎಂದು ತಿಳಿಸಿದರು.

ಎನ್.ಡಿ.ಆರ್.ಕೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಬಸವರಾಜು ಮಾತ ನಾಡಿ, ನೂರಾರು ಶಿವಶರಣರು ಅಂದಿನ ಅನಿಷ್ಟ ಪದ್ಧತಿಗಳು, ಮೂಢನಂಬಿಕೆಗಳ ವಿರುದ್ಧ ಹೋರಾಡಿದವರು. ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಸಾಮಾಜಿಕ ಕಳಕಳಿಯನ್ನು ಕಾಣಬಹುದಾಗಿತ್ತು, ಭೇದ ಭಾವ ಮಾಡುತ್ತಿದ್ದಂತಹ ಸಮುದಾಯ ದವರಿಗೆ ಇವರ ನೇರ ನುಡಿಗಳಿಂದ ಉತ್ತ ರಿಸುತ್ತಿದ್ದವರು. ಇವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎಂ ಕುಂಬಾರ, ತಹಶೀಲ್ದಾರ್ ಶ್ರೀನಿವಾಸಯ್ಯ ಮತ್ತಿತರರು ಹಾಜರಿದ್ದರು.

ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿ ಆವ ರಣದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮಾಡುವ ಮೂಲಕ ಚಾಲನೆ ನೀಡಿ ದರು. ವಿವಿಧ ಸಾಂಸ್ಕøತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

Translate »