ಸಿದ್ಧಗಂಗಾ ಶ್ರೀಗಳಿಗೆ ವೀರಶೈವ ಸಮಾಜದಿಂದ ಅಂತಿಮ ಗೌರವ
ಹಾಸನ

ಸಿದ್ಧಗಂಗಾ ಶ್ರೀಗಳಿಗೆ ವೀರಶೈವ ಸಮಾಜದಿಂದ ಅಂತಿಮ ಗೌರವ

January 22, 2019

ಹಾಸನ: ನಡೆದಾಡುವ ದೇವರು, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಯವರು ಸೋಮವಾರ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯರಾದ ಹಿನ್ನೆಲೆ ಯಲ್ಲಿ ಸಂಜೆ ಶ್ರಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ವೀರಶೈವ ಸಮಾಜ ದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಶ್ರೀ ಶಿವಕುಮಾರ ಸ್ವಾಮೀಜಿಯವರು ನಮ್ಮ ಮುಂದೆ ಇಲ್ಲದಿರುವುದು ಇಡಿ ಸಮಾಜಕ್ಕೆ ಹಾಗೂ ವೀರಶೈವ-ಲಿಂಗಾ ಯಿತ ಸಮಾಜಕ್ಕೆ ತುಂಬಲಾರದ ನಷ್ಟ ವಾಗಿದೆ. ದೇಶ-ವಿದೇಶಗಳಲ್ಲಿ ಶ್ರೀಗಳಿಗೆ ಅನೇಕ ಭಕ್ತರುಗಳಿದ್ದು ಹಾಗೂ ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ವರ್ಗದ ಜಾತಿ, ಮತವಿಲ್ಲದೆ ಶಿಕ್ಷಣವನ್ನು ನೀಡುತ್ತಿದ್ದ ಪೂಜ್ಯರು ತಮ್ಮ ಇಳಿ ವಯಸ್ಸಿ ನಲ್ಲಿ ಮಠದ ವಿದ್ಯಾರ್ಥಿಗಳೊಂದಿಗೆ ಹಾಗೂ ಮಠಕ್ಕೆ ಬಂದ ಭಕ್ತಾದಿಗಳಿಗೆ ಸ್ನೇಹ ಜೀವಿಯಾಗಿದ್ದರು, ಯಾರೆ ಸಿದ್ಧ ಗಂಗಾ ಮಠಕ್ಕೆ ಬಂದರೂ ಪ್ರಸಾದ ಮಾಡಿ ಎಂದು ತಿಳಿಸುತ್ತಿದ್ದ ಸ್ವಾಮಿಗಳು ನಂತರ ಅವರ ಕಷ್ಟ ದುಃಖಗಳಿಗೆ ಭಾಗಿಯಾಗು ತ್ತಿದ್ದರು ಹಾಗೂ ಇವರು ಹಾಸನ ಜಿಲ್ಲೆಯ ಭಕ್ತರೊಡನೆ ಅತ್ಯುತ್ತಮವಾದ ಸಂಬಂಧ ತುಂಬಾ ಅನ್ಯೋನ್ಯವಾಗಿತ್ತು. ಅವರನ್ನು ಪಾದ ಪೂಜೆಗೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕರೆಸಲಾಗುತ್ತಿತ್ತು. ಇಂದು ಲಿಂಗೈಕ್ಯರಾಗಿದ್ದಾರೆ ಎಂದು ಇದೇ ವೇಳೆ ಅವರು ಇದ್ದ ಅವಧಿಯಲ್ಲಿನ ಬಗ್ಗೆ ಮುಖಂಡರು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಶ್ರೀ ವೀರಶೈವ ಸಮಾಜದ ಅಧ್ಯಕ್ಷ ಬಿ.ಪಿ. ಐಸಾಮೆಗೌಡ, ಮುಖಂಡರು ಭುವನಾಕ್ಷ, ರುದ್ರಕುಮಾರ್, ಕಟ್ಟಾಯ ಶಿವಕುಮಾರ್, ಹೆಚ್.ಕೆ. ಲೋಕೇಶ್, ಕಿರಣ್ ಕುಮಾರ್, ಟಿ.ಪಿ. ಮಂಜು ನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಉದಯಕುಮಾರ್ ಇತರರು ಪಾಲ್ಗೊಂಡಿದ್ದರು.

Translate »