ಹಾಸನ: ಹಾಸನ ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆ ಸಹಮತಿ ಇಲ್ಲದೆ ಬಿ.ಎಂ.ರಸ್ತೆಯ ಅಭಿವೃದ್ಧಿ ಸಂಬಂಧ ರಸ್ತೆಯನ್ನು ಅಗೆದು ತುರ್ತಾಗಿ ಪೂರ್ಣಗೊಳಿಸದೆ ಸಾರ್ವಜನಿಕರಿಗೆ ನೀಡುತ್ತಿರುವ ಮೂಲಭೂತ ಸೌಕರ್ಯಗಳಲ್ಲಿ ತೊಂದರೆ ಆಗು ತ್ತಿರುವ ಬಗ್ಗೆ ಕಾರಣ ಕೇಳಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾದ ಅಭಿಯಂತರರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಹಾಸನ ನಗರದ ಮಧ್ಯಬಾಗದಲ್ಲಿ ಹಾದು ಹೋಗಿ ರುವ ರಾಷ್ಟ್ರೀಯ ಹೆದ್ದಾರಿಯನ್ನು (ಎನ್.ಆರ್. ವೃತ್ತದಿಂದ ತಣ್ಣೀರುಹಳ್ಳ ವೃತ್ತದವರೆಗಿನ ಬಿ.ಎಂ.ರಸ್ತೆ) ಅಭಿವೃದ್ಧಿಪಡಿಸುವ ಸಂಬಂಧ ರಸ್ತೆಯ ಒಂದು ಭಾಗವನ್ನು ಅಗೆಯಲಾಗಿರುತ್ತದೆ. ಹಲವಾರು ದಿನ ಗಳು ಕಳೆದರೂ ಅಗೆದಿರುವ ರಸ್ತೆಯ ಭಾಗದ ಅಭಿ ವೃದ್ಧಿಯನ್ನು ಪೂರ್ಣಗೊಳಿಸದೇ ಇರುವುದರಿಂದ ಸಾರ್ವಜನಿಕರಿಗೆ ಓಡಾಡಲು ಮತ್ತು ವಾಹನಗಳ ಸಂಚಾರಕ್ಕೆ ಬಹಳಷ್ಟು ತೊಂದರೆ ಉಂಟಾಗಿರುತ್ತದೆ.
ಕರ್ನಾಟಕ ಮುನಿಸಿಪಾಲಿಟೀಸ್ ಆಕ್ಟ್ ಸೆಕ್ಷನ್ 218ರ ಪ್ರಕಾರ ನಗರ ಸಭೆ ವ್ಯಾಪ್ತಿಯಲ್ಲಿ, ಯಾವುದೇ ಅಭಿವೃದ್ಧಿ ಅಥವಾ ಇನ್ನಾವುದೇ ನಿರ್ವಹಣೆ ಕೆಲಸ ಮಾಡುವಾಗ, ಸಾರ್ವ ಜನಿಕರಿಗೆ ನೀಡುವ ಮೂಲಭೂತ ಸೌಕರ್ಯ ಗಳಾದ ರಸ್ತೆ, ಚರಂಡಿ, ಒಳಚರಂಡಿ ಮತ್ತು ಬೀದಿ ದೀಪಗಳ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಆಗುವಂತಹ ಈ ಕೆಳಕಂಡ ಸಂದರ್ಭಗಳಲ್ಲಿ ಕಡ್ಡಾಯವಾಗಿ ನಗರಸಭೆಯಿಂದ ಅನುಮತಿ ಪಡೆಯಬೇಕಾಗಿರುತ್ತದೆ.
ಸಂಚಾರದ ಹಾಯುವಿಕೆ ಅಥವಾ ಮಾರ್ಗ ಪಲ್ಲಟನ, ಅಂಥ ಬೀದಿಯಿಂದ ಆವರಣಕ್ಕೆ ತಲು ಪಲು ಸರಿಯಾದ ಪ್ರವೇಶಾವಕಾಶ, ಅಂಥ ಕೆಲಸದ ನಿರ್ಮಹಣೆಯಿಂದ ಅಡ್ಡಿಗೆ ಒಳಗಾದಂಥ ಯಾವುದೇ ಚರಂಡಿ ವ್ಯವಸ್ಥೆ ನೀರು ಸರಬರಾಜು ಅಥವಾ ಬೆಳಕಿನ ಸಾಧನಗಳು,ನಗರದ ಮಧ್ಯಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ (ಎನ್.ಆರ್.ವೃತ್ತದಿಂದ ತಣ್ಣೀರುಹಳ್ಳ ವೃತ್ತದವರೆಗಿನ ಬಿ.ಎಂ.ರಸ್ತೆ) ಅಭಿ ವೃದ್ಧಿಯನ್ನು ಕೈಗೆತ್ತಿಕೊಳ್ಳುವ ಮೊದಲು ನೀವು ನಗರಸಭೆಯಿಂದ ಯಾವುದೇ ಅನುಮತಿ ಪಡೆದಿ ರುವುದಿಲ್ಲ. ಮತ್ತು ರಸ್ತೆಯ ಅಭಿವೃದ್ಧಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತರಹದ ತೊಂದರೆಯಾಗದಂತೆ ಮುಂಜಾಗೃತ ಕ್ರಮ ವನ್ನು ವಹಿಸಿರುವುದಿಲ್ಲ.
ಮೇಲೆ ತಿಳಿಸಿರುವಂತಹ ಮೂಲಭೂತ ಸೌಕರ್ಯಗಳಿಗೆ ಅಡಚಣೆಯಾಗ ದಂತೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಸಹ ನಿಯಮಾನುಸಾರ ಮಾಡಿರುವುದಿಲ್ಲ. ಆದ್ದ ರಿಂದ ಈ ನೋಟೀಸ್ ತಲುಪಿದ ಕೂಡಲೆ ಈ ಕೆಳಕಂಡಂತೆ ಕ್ರಮ ವಹಿಸಿ ನಗರಸಭೆಗೆ ವರದಿ ಸಲ್ಲಿ ಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಸೂಚನಾ ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.
ಅಗೆದಿರುವ ರಸ್ತೆಯ ಭಾಗವನ್ನು, ಸರ್ಕಾರದ ಅನುಮೋದಿತ ಯೋಜನೆಯಂತೆ ತ್ವರಿತವಾಗಿ ಪೂರ್ಣಗೊಳಿಸುವುದು. ಸಾರ್ವಜನಿಕರಿಗೆ ಓಡಾಡಲು ಅನುಕೂಲವಾಗುವಂತೆ ರಸ್ತೆಯ ಎರಡೂ ಬದಿಯಲ್ಲಿ ಪ್ರತಿನಿತ್ಯ ನಿರಂತರವಾಗಿ ನೀರನ್ನು ಸಿಂಪಡಿಸಬೇಕು. ರಸ್ತೆಯ ಉದ್ದಕ್ಕೂ ಬೀದಿ ದೀಪಗಳನ್ನು ತೆಗೆದು ಹಾಕಿ ರುವುದರಿಂದ, ರಾತ್ರಿಯ ಸಮಯದಲ್ಲಿ ಸಾರ್ವಜನಿಕರು ಓಡಾಡಲು ಅನುಕೂಲವಾಗುವ ದೃಷ್ಟಿಯಿಂದ ಪರ್ಯಾಯ ದೀಪದ ವ್ಯವಸ್ಥೆಯನ್ನು ಮಾಡುವುದು. ಈಗಾಗಲೇ ಅಗೆದಿರುವ ರಸ್ತೆಯ ಭಾಗದ ಅಭಿವೃದ್ಧಿ ಯನ್ನು ಪೂರ್ಣಗೊಳಿಸದೇ ಯಾವುದೇ ರಸ್ತೆಯನ್ನು ಅಗೆದು ಸಾರ್ವಜನಿಕರಿಗೆ ತೊಂದರೆ ಕೊಡಬಾರದು.
ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ಕೂಡಲೇ ಸ್ಪಂದಿಸಿ, ತುರ್ತು ಕ್ರಮ ವಹಿಸಿ ಅಗತ್ಯ ವಿರುವ ಕಡೆ ಪರ್ಯಾಯ ವ್ಯವಸ್ಥೆಯನ್ನು ಸಾರ್ವ ಜನಿಕ ಹಿತದೃಷ್ಟಿಯಿಂದ ಕಲ್ಪಿಸಿ ಮರುಟಪಾಲಿನಲ್ಲಿ ವರದಿ ಸಲ್ಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.