ಎರಡು ತಿಂಗಳು ಕರ್ತವ್ಯದಲ್ಲಿ ಮುಂದುವರಿಕೆಗೆ ಅವಕಾಶ ಅನಿರ್ದಿಷ್ಟಾವಧಿ ಧರಣಿ ಕೈಬಿಟ್ಟ ಶುಶ್ರೂಷಕರು
ಚಾಮರಾಜನಗರ

ಎರಡು ತಿಂಗಳು ಕರ್ತವ್ಯದಲ್ಲಿ ಮುಂದುವರಿಕೆಗೆ ಅವಕಾಶ ಅನಿರ್ದಿಷ್ಟಾವಧಿ ಧರಣಿ ಕೈಬಿಟ್ಟ ಶುಶ್ರೂಷಕರು

November 29, 2018

ಚಾಮರಾಜನಗರ :ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಟೈಫಂಡರಿ ಆಧಾರದಡಿ ನೇಮಕಗೊಂ ಡಿದ್ದ ಶುಶ್ರೂಷಕರನ್ನು ಮತ್ತೆ ಎರಡು ತಿಂಗಳು ಕರ್ತವ್ಯದಲ್ಲಿ ಮುಂದುವರಿಯಲು ಅವ ಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡ ಳಿತ ಭವನದ ಮುಂಭಾಗ ಹಮ್ಮಿ ಕೊಂಡಿದ್ದ ಅಹೋರಾತ್ರಿ ಧರಣಿಯನ್ನು ಶುಶ್ರೂಷಕರು ಬುಧವಾರ ಹಿಂಪಡೆದಿದ್ದಾರೆ.

ಮೂರು ವರ್ಷಗಳಿಂದ ಯಾವುದೇ ಲೋಪ ಎಸಗದೆ ಕರ್ತವ್ಯ ನಿರ್ವಹಿಸು ತ್ತಿರುವ ತಮ್ಮನ್ನೇ ಕರ್ತವ್ಯದಲ್ಲಿ ಮುಂದು ವರೆಸುವಂತೆ ಆಗ್ರಹಿಸಿ ಸ್ಟೈಫಂಡರಿ ಆಧಾರ ದಡಿ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 60 ಶುಶ್ರೂಷಕರು ಕರ್ತವ್ಯಕ್ಕೆ ಗೈರಾಗಿ 5 ದಿನಗಳಿಂದ ಪ್ರತಿ ಭಟನೆ ನಡೆಸುತ್ತಿದ್ದರು. ಹೊಸ ಶುಶ್ರೂಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬ ವಿಷಯ ತಿಳಿದ ಶುಶ್ರೂಷಕರು ಮಂಗಳವಾ ರದಿಂದ ಜಿಲ್ಲಾಡಳಿತ ಭವನದ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಹಾಗೂ ಡೀನ್ ಡಾ.ರಾಜೇಂದ್ರ, ಜಿಲ್ಲಾ ಸರ್ಜನ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ರಘುರಾಮ್ ಸರ್ವೇಗಾರ್, ಉಪ ವಿಭಾಗಾಧಿಕಾರಿ ಬಿ.ಫೌಜಿಯ್ ತರನ್ನಮ್ ಅವರೊಂದಿಗೆ ಸಭೆ ನಡೆಸಿ ನಂತರ ಬೆಂಗ ಳೂರಿನ ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾಡಿ ಮಾತನಾಡಿ, ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ಹಿರಿಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದ ಶುಶ್ರೂಷಕರನ್ನು ಎರಡು ತಿಂಗಳವರೆಗೆ ಮುಂದುವರೆಸುವ ಸಂಬಂಧ ಆದೇಶ ಹೊರಡಿಸುವುದಾಗಿ ತಿಳಿಸಿದರು. ಈ ವಿಷಯವನ್ನು ಡಾ.ರಘು ರಾಮ್ ಸರ್ವೇಗಾರ್ ಅವರು ಪ್ರತಿಭಟನಾ ನಿರತ ಶುಶ್ರೂಷಕರಿಗೆ ತಿಳಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿ ಶುಶ್ರೂಷಕರು ಧರಣಿ ಯನ್ನು ಕೈಬಿಟ್ಟು ಗುರುವಾರದಿಂದ ಕರ್ತ ವ್ಯಕ್ಕೆ ಹಾಜರಾಗಲು ನಿರ್ಧರಿಸಿದರು. ಈ ವೇಳೆ ಶುಶ್ರೂಷಕರಾದ ಕುಮಾರ, ರಾಜೇಶ್, ಮಹದೇವಸ್ವಾಮಿ, ಗೀತಾ, ಸುಮಿತ್ರಾ, ಬಹುಜನ ವಿದ್ಯಾರ್ಥಿ ಸಂಘದ ಪರ್ವತ್‍ರಾಜ್, ಅಂಬರೀಶ್ ಇತರರು ಇದ್ದರು.

Translate »