ಮೈಸೂರು: ಸರ್ಕಲ್‍ಗಳು, ಜಂಕ್ಷನ್‍ಗಳು ಹಾಗೂ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮೈಸೂರಿನ ಸಂಚಾರ ಠಾಣೆಗಳ ಪೊಲೀಸ್ ಸಿಬ್ಬಂದಿಗೆ ಧೂಳು, ವಾಯುಮಾಲಿನ್ಯದಿಂದ ಪಾರು ಮಾಡಲು ವಿನೂತನ ಮಾದರಿಯ ಉಸಿರಾಟದ ಮಾಸ್ಕ್‍ಗಳನ್ನು ವಿತರಿಸಲಾಗಿದೆ.
ಪ್ರತಿಯೊಬ್ಬ ಸಿಬ್ಬಂದಿಗೆ ಎರಡರಂತೆ ಮೈಸೂರು ನಗರದ ಎಲ್ಲಾ 5 ಸಂಚಾರ ಠಾಣೆಗಳ 350 ಸಿಬ್ಬಂದಿಗೂ ಉಸಿರಾಟದ ಮಾಸ್ಕ್ (ಖesಠಿiಡಿಚಿಣಚಿಡಿಥಿ ಒಚಿsಞ)ಗಳನ್ನು ಪೊಲೀಸ್ ಇಲಾಖೆಯು ನೀಡಿದೆ. ಈ ಹೊಸ ಮಾಸ್ಕ್‍ಗಳು ಬೂದು ಬಣ್ಣದ್ದಾಗಿದ್ದು, ಬಲು ಬೇಗ ಕೊಳೆ ಆಗುವು ದಿಲ್ಲ ಹಾಗೂ ಮೂಗು ಮತ್ತು ಬಾಯಿಗೆ ಧೂಳಿನಿಂದ ಸಂಪೂರ್ಣ ರಕ್ಷಣೆ ನೀಡಲಿದೆ. ಹೆಚ್ಚು ಸಮಯ ಟ್ರಾಫಿಕ್ ಸಿಗ್ನಲ್ ಜಂಕ್ಷನ್‍ಗಳಲ್ಲಿ ಕೆಲಸ ಮಾಡುವ ಟ್ರಾಫಿಕ್ ಪೊಲೀಸರು ವಾಹನಗಳು ಹೊರ ಸೂಸುವ ಹೊಗೆ, ಧೂಳಿನಿಂದ ಬೇಗ ಉಸಿರಾಟದ ಸಮಸ್ಯೆ ಉಂಟಾಗಿ ಅನಾರೋಗ್ಯಕ್ಕೆ ತುತ್ತಾಗು ತ್ತಿದ್ದರಿಂದ ಪೊಲೀಸ್ ಇಲಾಖೆಯು 1990 ರಿಂದಲೂ ಉಸಿರಾಟದ ಮಾಸ್ಕ್ ನೀಡಲು ಆರಂಭಿಸಿತ್ತು.
ಅವು ಹಸಿರು ಬಣ್ಣದ್ದಾಗಿದ್ದು, ಗುಣಮಟ್ಟವೂ ಅಷ್ಟಾಗಿ ಉತ್ತಮವಾಗಿರದ ಕಾರಣ, ಆಸ್ಪತ್ರೆಗಳಲ್ಲಿನ ಸಿಬ್ಬಂದಿಗಳು ಧರಿಸುವಂತೆ ಕಾಣುತ್ತಿದ್ದರಿಂದ ಬಹುತೇಕ ಮಂದಿ ಬಾಯಿಗೆ ಹಾಕಿಕೊಳ್ಳದೆ ಕೊರಳಿಗೆ ನೇತು ಹಾಕಿಕೊಳ್ಳುತ್ತಿದ್ದರು.
ಅದನ್ನು ಗಮನಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ವಿಚಾರಿಸಿದಾಗ ಗುಣಮಟ್ಟ ಉತ್ತಮವಾಗಿಲ್ಲದ ಕಾರಣ ಉದ್ದೇಶ ಸಫಲವಾಗುತ್ತಿಲ್ಲ ಎಂಬುದು ತಿಳಿಯಿತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಹೊಸ ಮಾದರಿಯ ರೆಸ್ಪಿರೇಟರಿ ಮಾಸ್ಕ್‍ಗಳನ್ನು ನೀಡಿದ್ದಾರೆ.
ಈ ಹಿಂದೆ ಮೈಸೂರಿನಲ್ಲಿ ಸಯ್ಯಾಜಿರಾವ್ ರಸ್ತೆಯ ಬಾಟಾ ಶೋ ರೂಂ ಬಳಿ, ದೇವರಾಜ ಮಾರುಕಟ್ಟೆ ಕಟ್ಟಡದ ಮಧ್ಯ ಭಾಗದ ಬಾಂಬೆ ಟಿಫಾನೀಸ್ ಬಳಿಯ ಮೈಸೂರು ಮೆಡಿಕಲ್ ಹಾಲ್ ಮುಂದೆ ಹಾಗೂ ಚಿಕ್ಕಗಡಿಯಾರದ ಕರ್ಜನ್ ಗೇಟ್ ಬಳಿ ಮಾತ್ರ ಒಂದೇ ಕಂಬದ ಸಿಗ್ನಲ್ ಲೈಟ್‍ಗಳಿದ್ದವು ಎಂದು ನಿವೃತ್ತ ಟ್ರಾಫಿಕ್ ಎಎಸ್‍ಐ ನಾಗರಾಜ್ ತಿಳಿಸಿದ್ದಾರೆ.
ಆಗ ಜನಸಂಖ್ಯೆ ವಿರಳವಾಗಿದ್ದರಿಂದ ವಾಹನ ಸಂಚಾರವೂ ಕಡಿಮೆ ಇತ್ತು. ಜಂಕ್ಷನ್‍ಗಳಿಗೆ ಟ್ರಾಫಿಕ್ ಪೊಲೀಸರ ಅಗತ್ಯವೂ ಅಷ್ಟಾಗಿ ಇರಲಿಲ್ಲ. ಬರಬರುತ್ತಾ ವಾಹನಗಳ ಸಂಖ್ಯೆ ಹೆಚ್ಚಾದ್ದರಿಂದ ನಂತರದ ದಿನಗಳಲ್ಲಿ ದೊಡ್ಡ ಗಡಿಯಾರ, ದಾಸಪ್ಪ ಸರ್ಕಲ್ ಹಾಗೂ ಅರಸು ರಸ್ತೆ, ಜೆಎಲ್‍ಬಿ ರಸ್ತೆ ಜಂಕ್ಷನ್‍ಗಳಿಗೆ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸಲಾಯಿತು ಎಂದು ಅವರು ತಿಳಿಸಿದರು.
ಕ್ರಮೇಣ ಸಂಸ್ಕøತ ಪಾಠಶಾಲಾ, ಸೀತಾ ವಿಲಾಸ ಜಂಕ್ಷನ್, ಸಿದ್ದಪ್ಪ ಸ್ಕ್ವೇರ್, ರಾಮಸ್ವಾಮಿ ಸರ್ಕಲ್, ಮುಡಾ ಸರ್ಕಲ್ ಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್‍ಗಳನ್ನು ಹಾಕಲಾಯಿತು. ಸಂಚಾರ ಪೊಲೀಸರೆಂದರೆ ಹೆಲ್ಮೆಟ್ ಡ್ರೈವ್-ಹೆಲ್ಮೆಟ್ ಡ್ರೈವ್ ಟ್ರಾಫಿಕ್ ಪೊಲೀಸ್ ಎಂಬುದಕ್ಕೆ ಸೀಮಿತವಾಗಿತ್ತೇ ಹೊರತು, ಟ್ರಾಫಿಕ್ ಎನ್‍ಫೋರ್ಸ್‍ಮೆಂಟ್ ಹಾಗೂ ಟ್ರಾಫಿಕ್ ಇಂಜಿನಿ ಯರಿಂಗ್ ಮರೆತು ಹೋಗಿದ್ದ ಕಾಲವೊಂದಿತ್ತು ಎಂದು ನಾಗರಾಜ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸದಾ ರಸ್ತೆ, ಜಂಕ್ಷನ್‍ಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ವಾಹನಗಳ ಹೊಗೆ, ಧೂಳಿನಿಂದ ರಕ್ಷಣೆ ಪಡೆಯಲೆಂದು 1990ರಲ್ಲಿ ಉಸಿರಾಟದ ಮಾಸ್ಕ್‍ಗಳನ್ನು ನೀಡಲಾಗಿತ್ತು. ಈಗ ಉತ್ತಮ ಗುಣಮಟ್ಟದ ಮಾಸ್ಕ್ ಗಳನ್ನು ಕೊಟ್ಟಿದ್ದಾರೆಂದು ತಿಳಿದಿದೆ. ಸಂಚಾರ ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡಿದಲ್ಲಿ ಸಂಚಾರ ಪೊಲೀಸರ ಕಾರ್ಯಕ್ಷಮತೆ ಹೆಚ್ಚಿಸಬಹುದು ಎಂದು ನಾಗರಾಜ್ ಅಭಿಪ್ರಾಯಪಟ್ಟರು.