ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ
ಮೈಸೂರು

ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

July 29, 2019

ಮೈಸೂರು,ಜು.28(ಪಿಎಂ)- ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಮೈಸೂರಿನ ಕೃಷ್ಣಮೂರ್ತಿ ಪುರಂನ ಮೈಸೂರು ಹೋಟೆಲ್ ಮಾಲೀಕರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಸಭೆಯ ಉದ್ಘಾಟನೆಯನ್ನು ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಕೆ.ಪುರಾಣಿಕ್ ನೆರವೇರಿಸಿದರು. ಇದೇ ವೇಳೆ ಮಾತ ನಾಡಿದ ಸಹಕಾರ ಸಂಘದ ನಿರ್ದೇ ಶಕರೂ ಆದ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾ ಯಣಗೌಡ, ಇಷ್ಟು ವರ್ಷ ಕೊನೆ ಘಳಿಗೆಯಲ್ಲಿ ತರಾತುರಿಯಲ್ಲಿ ವಾರ್ಷಿಕ ಸಭೆ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಸಕಾಲದಲ್ಲಿ ವಾರ್ಷಿಕ ಸಾಮಾನ್ಯ ಸಭೆ ಆಯೋಜಿಸ ಲಾಗಿದೆ. ಇದು ಆಡಳಿತ ಮಂಡಳಿಯ ಬದ್ಧತೆಯನ್ನು ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಳೆದ ಬಾರಿಗಿಂತ ಈ ಬಾರಿ 15 ಲಕ್ಷ ರೂ. ಹೆಚ್ಚುವರಿ ಸಾಲ ವಿತರಣೆ ಮಾಡ ಲಾಗಿದೆ. ಮುಂದಿನ ವರ್ಷ 1 ಕೋಟಿ ರೂ.ವರೆಗೆ ಸಾಲಸೌಲಭ್ಯ ವಿಸ್ತರಿಸಲು ಉದ್ದೇಶಿಸಲಾಗಿದೆ. ಜೊತೆಗೆ ಛಾಪಾ ಕಾಗದ ಮಾರಾಟ ಏಜೆನ್ಸಿ ಪಡೆಯಲು ಕ್ರಮ ವಹಿಸುತ್ತಿದ್ದು, ಇದರಿಂದ ಪತ್ತಿನ ಸಹಕಾರ ಸಂಘಕ್ಕೆ ಆದಾಯದ ಒಂದು ಉತ್ತಮ ಮೂಲ ಲಭ್ಯವಾಗಲಿದೆ ಎಂದರು.

ಇದಕ್ಕೂ ಮುನ್ನ 2019-20ನೇ ಸಾಲಿನ ಮುಂಗಡ ಪತ್ರವನ್ನು ಸಂಘದ ಉಪಾಧ್ಯಕ್ಷ ಪಿ.ನಾರಾಯಣ ಕುಂದರ್ ಮಂಡಿಸಿದರು. ಅಲ್ಲದೆ, ಹಿಂದಿನ ವಾರ್ಷಿಕ ಸಾಮಾನ್ಯ ಸಭೆಯ ನಡಾವಳಿ ಓದಿ ಅನುಮೋದಿಸುವುದೂ ಸೇರಿದಂತೆ ಸಭೆಯ ಎಲ್ಲಾ ಪ್ರಕ್ರಿಯೆಗಳನ್ನು ನಡೆಸ ಲಾಯಿತು. ಸಭೆ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆರ್.ತಂತ್ರಿ ವಹಿಸಿದ್ದರು.
ಸಂಘದ ನಿರ್ದೇಶಕರಾದ ವಿ.ಎಸ್. ರವಿಶಾಸ್ತ್ರಿ, ಬಿ.ಸಿದ್ದರಾಜು, ನಾರಾಯಣ ಹೆಗಡೆ, ಕೆ.ವಿ.ವಿಶ್ವಾನಂದ ಭಟ್, ಎಂ.ಎಸ್.ಜಯಪ್ರಕಾಶ್, ಹೇಮಂತ್ ಕುಮಾರ್, ಸುಮಿತ್ರ ಎ.ತಂತ್ರಿ ಸೇರಿದಂತೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »