ಮಿಲಿಟರಿ ಬಾಲಕರ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೈಸೂರು

ಮಿಲಿಟರಿ ಬಾಲಕರ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

May 17, 2019

ಮೈಸೂರು: ಮೈಸೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಅಧೀನದಲ್ಲಿರುವ ಮಿಲಿಟರಿ ಬಾಲಕರ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಅರ್ಜಿ ಆಹ್ವಾ ನಿಸಿದೆ. 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ 5ನೇ ತರಗತಿಯಿಂದ 12ನೇ ತರಗತಿಯವರೆಗೆ ಓದುತ್ತಿರುವ ಕರ್ನಾಟಕ ರಾಜ್ಯದ ಮಾಜಿ ಸೈನಿಕರ ಮತ್ತು ಅವರ ಅವ ಲಂಬಿತರ ಗಂಡು ಮಕ್ಕಳಿಗೆ ಆದ್ಯತೆ ಹಾಗೂ ಅರ್ಹತೆ ಮೇರೆಗೆ ಉಚಿತ ಪ್ರವೇಶ ನೀಡಲಾಗುವುದು. ಮೈಸೂರು ನಗರದಲ್ಲಿರುವ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ನಂತರವೇ ನಿಲಯದಲ್ಲಿ ಪ್ರವೇಶ ನೀಡಲಾಗುವುದು. ಅರ್ಜಿ ನಮೂನೆಯನ್ನು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾಧಿಕಾರಿ ಗಳ ಕಾರ್ಯಾಲಯದ ಸಮೀಪ, ಜೆ.ಎಲ್.ಬಿ. ರಸ್ತೆ, ಮೈಸೂರು ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿ ಯನ್ನು ಮೇ31ರೊಳಗಾಗಿ ಸಲ್ಲಿಸುವುದು ಹೆಚ್ಚಿನ ಮಾಹಿ ತಿಗೆ ದೂ.0821-2425240 ಸಂಪರ್ಕಿಸಿ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »