ಜಾನಪದ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ

ಜಾನಪದ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

July 18, 2018

ಚಾಮರಾಜನಗರ: ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಜಾನಪದ ಅಧ್ಯಯನ ಹಾಗೂ ಜನಪದ ಕಲೆಗಳ ಕಲಿಕಾ ಕೇಂದ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಜರುಗುವ ಸರ್ಟಿಫಿಕೇಟ್ ಶಿಕ್ಷಣ ಕೋರ್ಸುಗಳಾದ ಬೀಸುಕಂಸಾಳೆ, ಡೊಳ್ಳು ಕುಣಿತ, ಗೀತಸಂಪ್ರದಾಯ, ಕಸೂತಿ ಕಲೆ, ಕೋರ್ಸ್‍ಗಳ ಪ್ರವೇಶಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥತೆ ಅರ್ಜಿ ನಮೂನೆ ಪ್ರವೇಶ ಶುಲ್ಕ ಹಾಗೂ ಮಾಹಿತಿಗಳನ್ನು ವಿವರಣಾ ಪುಸ್ತಕದಿಂದ ಪಡೆಯಬಹುದು ಅಥವಾ ವಿಶ್ವವಿದ್ಯಾನಿಲಯದ ವೆಬ್‍ಸೈಟ್  www.janapadauni.in ನಲ್ಲಿ ಸಂಪರ್ಕಿಸಬಹುದು.

ವಿವರಣಾ ಪುಸ್ತಕದ ಶುಲ್ಕ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 300ರ ಪರಿಶಿಷ್ಟ ಜಾತಿ/ಪಂಗಡ ಪ್ರವರ್ಗ-1ರ ಅಭ್ಯರ್ಥಿಗಳಿಗೆ 150ಗಳಾಗಿರುತ್ತದೆ. ಅಂತಹ ಅಭ್ಯರ್ಥಿಗಳು ಜಾತಿ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಮೇಲಿನ ಸರ್ಟಿಫಿಕೇಟ್ ಶಿಕ್ಷಣ ಕೋರ್ಸ್‍ಗಳಿಗೆ ಪ್ರವೇಶ ಬಯಸುವವರು ಪ್ರಾದೇಶಿಕ ಜಾನಪದ ಅಧ್ಯಯನ ಹಾಗೂ ಜನಪದ ಕಲೆಗಳ ಕಲಿಕಾ ಕೇಂದ್ರ, ಮಲೆಮಹದೇಶ್ವರ ಬೆಟ್ಟ ಇಲ್ಲಿ ಪ್ರವೇಶ ಅರ್ಜಿಗಳನ್ನು ಪಡೆಯಬಹುದಾಗಿದೆ.

ಭರ್ತಿ ಮಾಡಿದ ಅರ್ಜಿಗಳನ್ನು ಕುಲ ಸಚಿವರು (ಮೌಲ್ಯಮಾಪನ) ಇವರಿಗೆ ಜುಲೈ 31ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ಜಾನಪದ ಅಧ್ಯಯನ ಹಾಗೂ ಜನಪದ ಕಲೆಗಳ ಕಲಿಕಾ ಕೇಂದ್ರ, ಮಲೆ ಮಹದೇಶ್ವರಬೆಟ್ಟದ ದೂರವಾಣಿ ಸಂಖ್ಯೆ. 08225-272267 ಹಾಗೂ 9741517993 ಅನ್ನು ಸಂಪರ್ಕಿಸಬಹುದು ಎಂದು ವಿಶ್ವವಿದ್ಯಾನಿಲಯದ ಕುಲಸಚಿವರು ತಿಳಿಸಿದ್ದಾರೆ.

Translate »