ಖದೀಮನ ಸೆರೆ; 3.81 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
ಹಾಸನ

ಖದೀಮನ ಸೆರೆ; 3.81 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

December 3, 2018

ಬೇಲೂರು: ತಾಲೂಕು ವ್ಯಾಪ್ತಿಯಲ್ಲಿ ನಡೆದ ಐದು ಕಳ್ಳತನ ಪ್ರಕರಣವನ್ನು ಬೇಧಿಸಿರುವ ಬೇಲೂರು ಪೊಲೀಸರು ಆರೋಪಿಯಿಂದ ಸುಮಾರು 3.81 ಲಕ್ಷ ರೂ. ಮೌಲ್ಯದ 127 ಗ್ರಾಂ ಆಭರಣ ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿದ್ದ ಆರೋಪಿ ಅಶೋಕ ಬಂಧಿತ ಆರೋಪಿಯಾಗಿದ್ದು, ಕಳವು ಪ್ರಕರಣ ಪತ್ತೆಗೆ ಸಿಪಿಐ ಲೋಕೇಶ್ ಹಾಗೂ ಪಿಎಸ್‍ಐ ಜಗದೀಶ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಯನ್ನು ಜಮ್ರದ್‍ಖಾನ್, ರವೀಶ್, ಶಿವಮೂರ್ತಿ, ದೇವರಾಜ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಯನ್ನು ಪತ್ತೆಹಚ್ಚಿದ್ದಕ್ಕೆ ಎಸ್‍ಪಿ ಪ್ರಕಾಶಗೌಡ, ಅಧೀಕ್ಷಕರಾದ ನಂದಿನಿ, ಡಿವೈಎಸ್‍ಪಿ ಸದಾನಂದ ತಿಪ್ಪಣ್ಣನವರ್ ಅಭಿನಂದಿಸಿದ್ದಾರೆ.

Translate »