ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಲೆ, ಸಾಹಿತ್ಯ ಅಭಿರುಚಿ ಬೆಳೆಸಬೇಕು
ಮೈಸೂರು

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಲೆ, ಸಾಹಿತ್ಯ ಅಭಿರುಚಿ ಬೆಳೆಸಬೇಕು

June 30, 2019

ಮೈಸೂರು,ಜೂ.29(ಎಸ್‍ಪಿಎನ್)-ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದರೆ, ಪ್ರತಿಯೊಬ್ಬ ರಲ್ಲೂ ಕಲೆ, ಸಾಹಿತ್ಯದ ಅಭಿರುಚಿ ಬೆಳೆಸ ಬೇಕು ಎಂದು ಸಾಹಿತ್ಯ ಅಭಿಮಾನಿಯೂ ಆದ ಖ್ಯಾತ ವೈದ್ಯ ಡಾ.ಎಚ್.ಬಿ. ರಾಜ ಶೇಖರ್ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಹೊಯ್ಸಳ ಕನ್ನಡ ಸಂಘ ವತಿಯಿಂದ ಆಯೋಜಿಸಿದ್ದ ಪುಸ್ತಕ ಬಿಡುಗಡೆ, ಪೆÇ್ರ.ಕೆ. ಭೈರವಮೂರ್ತಿ ಯವರಿಗೆ ಜನ್ಮದಿನದ ಶುಭ ಹಾರೈಕೆ ಮತ್ತು ಅಂಬಿ ಕಾವ್ಯನಮನ ಕವಿಗೋಷ್ಠಿ ಉದ್ಘಾ ಟಿಸಿ ಅವರು ಮಾತನಾಡಿದರು.

ಕಲೆ, ಸಾಹಿತ್ಯದ ಅಭಿರುಚಿ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿದರೆ ಭ್ರಷ್ಟಾ ಚಾರಕ್ಕೆ ಕಡಿವಾಣ ಹಾಕಬಹುದು. ಇದರಿಂದ ಸಮಾಜದ ಪ್ರಗತಿಗೆ ಸಹಕಾರಿ ಯಾಗಲಿದೆ ಎಂದರಲ್ಲದೆ, ಕನ್ನಡ ಎಲ್ಲಾ ಭಾಷಾ ಲಿಪಿಗಳ ರಾಣಿ ಎಂದರೆ ತಪ್ಪಾಗ ಲಾರದು. ಅಷ್ಟೊಂದು ಸುಂದರ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವೂ ದಕ್ಕಿದ್ದು, ದಿಗ್ಗಜರ ಸಾಹಿತ್ಯವನ್ನು ಯುವಕರು ಅಧ್ಯಯನ ನಡೆಸಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡದಲ್ಲಿ ಪಂಪ, ರನ್ನ, ಜನ್ನ ಕವಿಗಳು ಹಾಗೂ ಆಧುನಿಕ ಯುಗದ ಕವಿಗಳ ಸಾಲಿನ ರಾಷ್ಟ್ರಕವಿ ಕುವೆಂಪು ಸೇರಿದಂತೆ ಇತರರು ಐತಿಹಾಸಿಕ ಘಟನೆಗಳನ್ನು ಆಧರಿಸಿ ಸಾಹಿತ್ಯ ರಚಿಸಿ ಕನ್ನಡಿಗರಿಗೆ ಬಳುವಳಿಯಾಗಿ ನೀಡಿದ್ದಾರೆ. ಇದರಿಂದ ಕನ್ನಡ ಭಾಷೆ ಪ್ರಪಂಚದ ವಿವಿಧ ಭಾಷೆಗಳ ಸಾಲಿನಲ್ಲಿ ಸುಂದರ ಭಾಷೆಯಾಗಿದ್ದು, ಕನ್ನಡ ಸಾಹಿತ್ಯಕ್ಕೆ ಅಗ್ರ ಸ್ಥಾನ ಕಲ್ಪಿಸಿದೆ ಎಂದರು.

ನಮ್ಮ ಹಿಂದಿನ ಕವಿಗಳ ಚರಿತ್ರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯ ಕೆಲಸ ವಾಗಬೇಕು. ಕೇವಲ ತಾಂತ್ರಿಕ ಕೋರ್ಸ್ ಗಳಿಗೆ ಸೀಮಿತವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬಾರದು. ಸಾಹಿತ್ಯ, ಕಲೆಯಲ್ಲಿ ಬೆರೆತಿರುವ ವ್ಯಕ್ತಿ ಅಥವಾ ಯುವಕರಲ್ಲಿ ಮಾನವೀಯ ಮೌಲ್ಯಗಳು ದ್ವಿಗುಣಗೊಳ್ಳು ತ್ತವೆ. ಇದರಿಂದ ಸಮಾಜ ಸ್ವಾಸ್ಥ್ಯವೂ ಉತ್ತಮಗೊಳ್ಳುತ್ತದೆ ಎಂದರು.

ಈ ವೇಳೆ ಬರಹಗಾರ ರಂಗನಾಥ್ ಮೈಸೂರು ರಚಿತ `ಕನ್ನಡ ಗಾಂಧಿ’, ಬಿ.ಪಿ.ಅಶ್ವತ್ಥ ನಾರಾಯಣ ಅವರ `ಸಾಹಿತ್ಯ ಸಂಗಮ’ ಕೃತಿಯನ್ನು ಹಿರಿಯ ಡಾ.ಮಳಲಿ ವಸಂತ ಕುಮಾರ್, ಲೇಖಕಿ ಡಾ.ಸಿ.ಜಿ.ಉಷಾದೇವಿ ಬಿಡುಗಡೆಗೊಳಿಸಿ ಮಾತನಾಡಿದರು.

ಹಿರಿಯ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಎಂ.ಚಂದ್ರ ಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಪೆÇ್ರ.ಕೆ. ಭೈರವ ಮೂರ್ತಿ, ಡಾ.ಡಿ. ತಿಮ್ಮಯ್ಯ, ಬರಹಗಾರ್ತಿ ಶಿವರಂಜನಿ ಅಂಬಿ ಕಾವ್ಯನಮನ ಗೋಷ್ಠಿ ಉದ್ಘಾಟಿಸಿದರು.

Translate »