ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ನಾಳೆಯಿಂದ ಕಲಾವೈಭವ ವಸ್ತು ಪ್ರದರ್ಶನ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ನಾಳೆಯಿಂದ ಕಲಾವೈಭವ ವಸ್ತು ಪ್ರದರ್ಶನ

September 26, 2019

ಮೈಸೂರು: ಜಿಲ್ಲಾ ಮಟ್ಟದ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ `ಮೈಸೂರು ದಸರಾ ಕಲಾವೈಭವ-2019’ ಸೆ.27ರಿಂದ ಅ.7ರವರೆಗೆ ಮೈಸೂರಿನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ನಡೆಯಲಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ (ಯೋಜನೆ ಮತ್ತು ಅಭಿವೃದ್ಧಿ) ಡಾ.ಸಿ.ರಂಗನಾಥಯ್ಯ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೃಹತ್ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ದಸರಾ ಮಹೋ ತ್ಸವದ ಅಂಗವಾಗಿ `ಮೈಸೂರು ದಸರಾ ಕಲಾವೈಭವ-2019’ ಶೀರ್ಷಿಕೆಯಡಿ ಜಿಲ್ಲಾ ಮಟ್ಟದ ಗುಡಿ ಕೈಗಾ ರಿಕೆಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಗ್ರಾಹಕರಿಗೆ ಈ ಮೇಳದಲ್ಲಿ ದೇಶದ ಗ್ರಾಮೀಣ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳು ಒಂದೇ ಸೂರಿ ನಡಿ ದೊರೆಯುವ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಕೈಗಾರಿಕಾ ಕೇಂದ್ರಗಳು ಆಯಾ ಜಿಲ್ಲೆಗಳಲ್ಲಿ ಗುಡಿ ಕೈಗಾ ರಿಕೆಗಳು, ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘ ಗಳಿಂದ ಉತ್ಪಾದನೆಯಾಗುವ ವಸ್ತುಗಳನ್ನು ಮಾರಾಟ ಮಾಡಲು ಪ್ರತಿ ವರ್ಷ ಕಲಾವೈಭವ ವಸ್ತು ಪ್ರದ ರ್ಶನವನ್ನು ಆಯಾಯ ಜಿಲ್ಲೆಗಳಲ್ಲಿ ಏರ್ಪಡಿಸಿ ಕೊಂಡು ಬರುತ್ತಿದೆ. ಅದೇ ರೀತಿ ಪ್ರತಿ ವರ್ಷದಂತೆ ಮೈಸೂರಿನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಆಯೋಜಿಸಿರುವ ಈ ಬಾರಿಯ ಕಲಾವೈಭವದಲ್ಲಿ 60ಕ್ಕೂ ಹೆಚ್ಚಿನ ಮಳಿಗೆ ಗಳಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಕರಕುಶಲ ವಸ್ತುಗಳು, ಕೈಮಗ್ಗ ವಸ್ತುಗಳು, ಕೈಮಗ್ಗದ ರೇಷ್ಮೆ ಮತ್ತು ಕಾಟನ್ ಸೀರೆಗಳು, ಹೊದಿಕೆಗಳು ಸೇರಿ ದಂತೆ ನಾನಾ ಬಗೆಯ ವಸ್ತುಗಳು ಮೇಳದಲ್ಲಿ ದೊರೆ ಯಲಿವೆ. ಸೆ.27ರಂದು ಸಂಜೆ 4ಕ್ಕೆ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಧ್ಯಕ್ಷತೆ ವಹಿಸಲಿ ದ್ದಾರೆ. ಅತಿಥಿಗಳಾಗಿ ಶಾಸಕರೂ ಆದ ಮಾಜಿ ಸಚಿವ ಜಿ.ಟಿ.ದೇವೇಗೌಡ, ಜೆಎಸ್‍ಎಸ್ ಮಹಾವಿದ್ಯಾ ಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ.ಬೆಟ ಸೂರಮಠ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿ ದ್ದಾರೆ. ಮೇಳಕ್ಕೆ ಗ್ರಾಹಕರು ಪ್ರತಿ ದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಭೇಟಿ ನೀಡಬಹುದು. ಪ್ರವೇಶ ಉಚಿತ ವಿರುತ್ತದೆ. ಅರ್ಬನ್ ಹಾತ್‍ನಲ್ಲಿ ಉಡುಪಿ ಮೂಲದ `ಉಡುಪಿ ಪ್ಯಾಲೆಸ್’ ಹೋಟೆಲ್ ಉದ್ಯಮದ ವತಿಯಿಂದ ಫುಡ್ ಕೋರ್ಟ್ ಸೆ.30ರಿಂದ ಆರಂಭಗೊಳ್ಳುತ್ತಿದ್ದು, ಇದು ಮೇಳಕ್ಕೆ ಮಾತ್ರವಲ್ಲದೆ, ನಿರಂತರವಾಗಿ ಕಾರ್ಯ ನಡೆಸಲಿದೆ. ಜೊತೆಗೆ ಅರ್ಬನ್ ಹಾತ್‍ನಲ್ಲಿ ಶೌಚಾಲಯ ಕೊಠಡಿ ಮಿತವಾಗಿದ್ದು, ಮತ್ತಷ್ಟು ನಿರ್ಮಿಸಲು ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆ ಶೀಘ್ರದಲ್ಲಿ ಕೈಗೆತ್ತಿ ಕೊಳ್ಳಲಾಗುವುದು ಎಂದರು. ಮೈಸೂರು ಜಿಲ್ಲಾ ಕೈಗಾ ರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗ ರಾಜು, ಕಲಾವೈಭವ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಸಂಯೋಜಕ ಅನಿರುದ್ಧ್ ಪದ್ಮನಾಭ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »