ಕಿರಿಯ ವಯಸ್ಸಲ್ಲೇ ಕರಾಟೆಯಲ್ಲಿ ಅಶ್ವಿನಿಯ ಹಿರಿಯ ಸಾಧನೆ
ಮೈಸೂರು

ಕಿರಿಯ ವಯಸ್ಸಲ್ಲೇ ಕರಾಟೆಯಲ್ಲಿ ಅಶ್ವಿನಿಯ ಹಿರಿಯ ಸಾಧನೆ

June 9, 2019

ಮೈಸೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಹಿರಿಯರ ಗಾದೆ ಮಾತಿನಂತೆ, ನಾವು ಚಿಕ್ಕಂದಿನಿಂದಲೇ ಮಕ್ಕಳನ್ನು ಯಾವ ವಾತಾವರಣದಲ್ಲಿ ಬೆಳೆಸುತ್ತೇವೆ ಎಂಬು ದರ ಮೇಲೆ ಅವರ ಭವಿಷ್ಯದ ಬದುಕು ನಿಂತಿರುತ್ತದೆ.

ಇದಕ್ಕೆ ಇಂಬು ನೀಡುವಂತೆ 4ನೇ ತರಗತಿ ವ್ಯಾಸಂಗ ಮಾಡುತ್ತಿರುವಾಗಲೇ ತಂದೆಯ ಆಸೆಯಂತೆ ಕರಾಟೆಯ ಅಭ್ಯಾಸ ಆರಂಭಿಸಿ ಎಸ್.ಅಶ್ವಿನಿ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಜ್ಯದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ.

ಶ್ರೀರಾಂಪುರ ನಿವಾಸಿ ಶ್ರೀರಂಗ ಮತ್ತು ಮಂಜುಳಾ ದಂಪತಿ ಪುತ್ರಿ ಅಶ್ವಿನಿ, ಸದ್ಯ ಹಾಸನದಲ್ಲಿ ಹೋಂ ಸೈನ್ಸ್‍ನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಓದಿನ ಜತೆಗೆ ಕರಾಟೆಯಲ್ಲೂ ಸಾಧನೆಗೈಯ್ಯುತ್ತಿದ್ದಾರೆ.
ಪೋಷಕರು ಆಕೆಗೆ ಸಾಧನೆಗೆ ಬೆನ್ನೆಲು ಬಾಗಿ ನಿಂತಿದ್ದಾರೆ. ತನ್ನ ಗೆಳತಿಯರೊಂ ದಿಗೆ ಆಟವಾಡಿಕೊಂಡು ಇರಬೇಕಿದ್ದ 9ನೇ ವಯಸ್ಸಿನಲ್ಲಿ ಅಂದರೆ, ಸಿಕೆಸಿ ಕಾನ್ವೆಂಟ್ ನಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿ ದ್ದಾಗಲೇ ಕರಾಟೆಯ ಅಭ್ಯಾಸ ಆರಂಭಿ ಸಿದ ಅಶ್ವಿನಿ, ಇದುವರೆಗೆ ಅಂದರೆ 9 ವರ್ಷ ಗಳಿಂದ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗ ವಹಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದಿದ್ದಾರೆ. ಸದ್ಯ ವಿಜಯನಗರದ ಶಿವ ದಾಸ್ ಮತ್ತು ಕಾರ್ಣಿಕ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಬಹುಮಾನಗಳು: 2009 ಮತ್ತು 2014 ರಲ್ಲಿ ಮಲೇಷಿಯಾದಲ್ಲಿ ನಡೆದ ಕರಾಟೆ ಪಂದ್ಯಾವಳಿಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ, 2014ರ ಜೂ.20ರಂದು ದೆಹಲಿ ಯಲ್ಲಿ ನಡೆದ ಕಿರಿಯ/ಹಿರಿಯರ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಚಿನ್ನ, 2015ರ ಸೆ.18-20ರವರೆಗೆ ನಡೆದ ಕಾಮನ್‍ವೆಲ್ತ್ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿ, 2017ರ ಜುಲೈ 7ರಂದು ಆಗ್ರಾದಲ್ಲಿ ನಡೆದ ಸ್ಕೂಲ್ಸ್ ಕಾಂಬೋಟ್ ಗೇಮ್ಸ್‍ನಲ್ಲಿ ಕಂಚು, 2017ರ ಡಿ.25-30ರವರೆಗೆ ಮದ್ಯ ಪ್ರದೇಶದಲ್ಲಿ ನಡೆದ 62ನೇ ನ್ಯಾಷನಲ್ ಸ್ಕೂಲ್ ಗೇಮ್ಸ್‍ನಲ್ಲಿ ಬೆಳ್ಳಿ ಪದಕ.

2012ರ ಜು.14ರಂದು ಬೆಂಗಳೂರಿ ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾ ವಳಿಯಲ್ಲಿ ಚಿನ್ನ, 2014ರಲ್ಲಿ ನಡೆದ ಪಂದ್ಯ ದಲ್ಲಿ ಚಿನ್ನ ಮತ್ತು ಕಂಚು, 2012ರ ನ.11 ರಂದು ಕೇರಳದಲ್ಲಿ ನಡೆದ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿ ಯನ್ ಶಿಪ್‍ನಲ್ಲಿ ಕಂಚು, 2011ರ ನ.12 ರಂದು ನಡೆದ 2ನೇ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಚಿನ್ನ ಹಾಗೂ ದಸರಾ ಮಹೋತ್ಸವ ಅಂಗ ವಾಗಿ 2018ರ ಆ.25ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕರಾಟೆ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಹೀಗೆ 70ಕ್ಕೂ ಹೆಚ್ಚು ಕರಾಟೆ ಪಂದ್ಯಾವಳಿಯ ಗಳಲ್ಲಿ ಭಾಗವಹಿಸಿ 100ಕ್ಕೂ ಹೆಚ್ಚು ಪ್ರಶಸ್ತಿ ಗಳನ್ನು ಪಡೆದುಕೊಂಡಿದ್ದಾರೆ.

Translate »