ಪೇದೆ ಮೇಲೆ ಹಲ್ಲೆ: ಸಹೋದರರ ಬಂಧನ
ಕೊಡಗು

ಪೇದೆ ಮೇಲೆ ಹಲ್ಲೆ: ಸಹೋದರರ ಬಂಧನ

February 26, 2019

ಕುಶಾಲನಗರ: ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದ ಆರೋಪಿಗಳಿಬ್ಬರು ಕರ್ತವ್ಯ ನಿರತ ಪೆÇಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಘಟನೆಯೊಂದಕ್ಕೆ ಸಂಬಂಧಿಸಿದಂತೆ ಕೂಡುಮಂಗಳೂರು ಗ್ರಾಪಂ ಸದಸ್ಯ ಸುರೇಶ ಮತ್ತು ಆತನ ಸಹೋದರ ಸ್ವಾಮಿ ವಿರುದ್ಧ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡು ಬಂಧಿಸಲಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಘಟನೆ ವಿವರ: ಆರೋಪಿಗಳಿಬ್ಬರು ಮದ್ಯಪಾನ ಮಾಡಿ ನೆರೆಮನೆಯವ ರೊಂದಿಗೆ ಗಲಾಟೆ ಮಾಡಿ ಮಹಿಳೆ ಯೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ರಮೇಶ್ ಎಂಬುವರು ದೂರು ನೀಡಿದ್ದರು. ಇದರ ವಿಚಾರಣೆಗೆ ಒಳಪಡಿ ಸಲು ಗ್ರಾಮಾಂತರ ಠಾಣೆಗೆ ಆರೋಪಿ ಗಳನ್ನು ಕರೆತರಲಾಗಿತ್ತು. ಬಳಿಕ ಅಲ್ಲಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲೆಂದು ಕರೆದೊಯ್ಯಲು ಮುಂದಾದಾಗ ಗ್ರಾಪಂ ಸದಸ್ಯ ಸುರೇಶ್, ತಾನು ಚುನಾಯಿತ ಜನಪ್ರತಿನಿಧಿಯಾಗಿದ್ದು, ನನ್ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ತನ್ನ ಸಹೋದರ ಸ್ವಾಮಿ ಒಡಗೂಡಿ ಪೆÇಲೀಸ್ ಸಿಬ್ಬಂದಿ ಮಹೇಶ್ ಎಂಬು ವರ ಮೇಲೆ ಹಲ್ಲೆ ನಡೆಸಿದ್ದಾರೆ.ಘಟನೆಯಿಂದ ಪೆÇಲೀಸ್ ಸಿಬ್ಬಂದಿ ಮಹೇಶ್ ಎಂಬವರ ಮೂಗು ಮತ್ತು ತಲೆಗೆ ಗಾಯವಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕೆ.ಸಿ.ರಮೇಶ್ ಅವರ ದೂರಿನನ್ವಯ ಆರೋಪಿಗಳಿಬ್ಬರ ಮೇಲೆ ಪೆÇಲೀಸ್ ಕಾಯ್ದೆ 323, 354, 504, 506 ಮತ್ತು ಕರ್ತವ್ಯ ನಿರತ ಪೆÇಲೀಸರಾದ ಎಚ್.ಎ.ಮಹೇಶ್ ಅವರ ಮೇಲೆ ಹಲ್ಲೆಗೆ ಸಂಬಂಸಿದಂತೆ 353, 332, 504, 506 ಕಾಯ್ದೆ ಅನ್ವಯ ಎರಡು ಮೊಕದ್ದಮೆ ಗಳನ್ನು ದಾಖಲಿಸಿ ಕೊಳ್ಳಲಾಗಿದೆ.

Translate »