ಹನೂರು: ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ ಅಡ್ಡೆಯ ಮೇಲೆ ಹನೂರು ಪೊಲೀಸರು ದಾಳಿ ಮಾಡಿ 11 ಮಂದಿಯನ್ನು ಪಣಕ್ಕಿಟ್ಟಿದ್ದ ನಗದು ಸಮೇತ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹನೂರು ಪೊಲೀಸ್ ಠಾಣೆ ಸರಹದ್ದಿನ ಚಿಕ್ಕಲ್ಲೂರು ಬಳಿ ಇರುವ ಬಾಣೂರು ಗ್ರಾಮದ 11 ಮಂದಿ ಸಾರ್ವಜನಿಕ ರಸ್ತೆ ಬದಿಯ ಜಮೀನೊಂದರಲ್ಲಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹನೂರು ಇನ್ಸ್‍ಪೆಕ್ಟರ್ ಮೋಹಿತ್ ಸಹದೇವ್ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾರ್ಗದರ್ಶದಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ದಾಳಿಯಲ್ಲಿ ಮುಖ್ಯಪೇದೆ ಸಿದ್ದೇಶ್, ಪೇದೆಗಳಾದ ರಾಜು, ಮಕಂದರ್ ಪಾಷ, ಬಿಳಿಗೌಡ ಪಾಲ್ಗೊಂಡಿದ್ದರು.