ಆಯುಧ ಪೂಜೆಗಾಗಿ ವ್ಯಾಪಾರ ಜೋರು
ಮೈಸೂರು

ಆಯುಧ ಪೂಜೆಗಾಗಿ ವ್ಯಾಪಾರ ಜೋರು

October 18, 2018

ಮೈಸೂರು: ಆಯುಧ ಪೂಜೆ ಹಾಗೂ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬುಧ ವಾರ ಹೂವು-ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಆಯುಧ ಪೂಜೆ ಹಿನ್ನೆಲೆ ಯಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿತ್ತಾದರೂ ಜನರು ಮುಗಿಬಿದ್ದು ಖರೀದಿ ಮಾಡಿದರು.

ದೇವರಾಜ ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆ, ಧನ್ವಂ ತರಿ ರಸ್ತೆ, ಅಗ್ರಹಾರ ವೃತ್ತ, ವಿನೋಬಾ ರಸ್ತೆ, ಟೆರಿಷಿ ಯನ್ ಕಾಲೇಜು, ಸಿದ್ಧಾರ್ಥನಗರ, ಕುವೆಂಪುನಗರ, ಒಂಟಿ ಕೊಪ್ಪಲು, ತಿಲಕ್‍ನಗರ ವೃತ್ತ ಸೇರಿದಂತೆ ವಿವಿಧೆಡೆಗಳಲ್ಲಿ ಬಗೆ ಬಗೆಯ ಹೂವು, ಪೂಜಾ ಸಾಮಗ್ರಿಗಳು, ಬೂದು ಗುಂಬಳಕಾಯಿ, ನಿಂಬೆಹಣ್ಣು, ಕಬ್ಬಿನ ಜಲ್ಲೆ, ಬಾಳೆಕಂದು ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಆಯುಧ ಪೂಜೆ ಹಿನ್ನೆಲೆಯಲ್ಲಿ ವಿವಿಧ ರಸ್ತೆಗಳ ಬದಿಯಲ್ಲಿ ತಲೆ ಎತ್ತಿದ್ದ ಮಾರುಕಟ್ಟೆಗಳಲ್ಲಿ ಬುಧ ವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ವ್ಯಾಪಾರ ಜೋರಾ ಗಿತ್ತು. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಬುಧವಾರ ಹೂವು-ಹಣ್ಣುಗಳ ಬೆಲೆ ತುಸು ಹೆಚ್ಚಾಗಿತ್ತು. ಸೇವಂತಿ ಹೂವು ಒಂದು ಮಾರಿಗೆ 50 ರೂ.ನಿಂದ 80 ರೂ.ಗೆ ಮಾರಾಟ ಮಾಡಲಾಗುತ್ತಿತ್ತು.

ಸಣ್ಣ ಗಾತ್ರದ ನಿಂಬೆಹಣ್ಣು 10 ರೂ.ಗೆ 4, ದಪ್ಪ ಗಾತ್ರದ ನಿಂಬೆಹಣ್ಣು 10 ರೂ.ಗೆ ಎರಡು, ಸಣ್ಣ ಗಾತ್ರದ ಬೂದುಗುಂಬಳಕಾಯಿ 30 ರೂ., ಮಧ್ಯಮ ಗಾತ್ರ ಬೂದುಗುಂಬಳಕ್ಕೆ 50 ರಿಂದ 60 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಒಂದು ಜೊತೆ ಬಾಳೆ ಕಂದಿಗೆ 30ರಿಂದ 100 ರೂ.ವರೆಗೆ ದರ ನಿಗದಿ ಮಾಡಲಾಗಿತ್ತು. ಕಡಲೇಪುರಿ, ಸಿಹಿ ತಿನಿಸುಗಳ ವ್ಯಾಪಾ ರವೂ ಜೋರಾಗಿತ್ತು.

ಕಾರ್ಖಾನೆಗಳು, ಕಚೇರಿಗಳಲ್ಲಿ ಆಯುಧ ಪೂಜೆ ಮಾಡುವ ಹಿನ್ನೆಲೆಯಲ್ಲಿ ತಂಡೋಪತಂಡವಾಗಿ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡುವುದಕ್ಕೆ ಬರುತ್ತಿದ್ದ ದೃಶ್ಯ ಕಂಡು ಬಂದಿತು. ಏಕಕಾಲಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಹಿನ್ನೆಲೆಯಲ್ಲಿ ದೇವರಾಜ ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ, ಇರ್ವಿನ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

Translate »