ಮೈಸೂರು: ಮೈಸೂರಿನ ಆದಿತ್ಯ ಸ್ಪೋಟ್ರ್ಸ್ ಅರೆನಾದ ರಾಮ್ ಬ್ಯಾಡ್ಮಿಂಟನ್ ಅಕಾಡೆಮಿಯ ಕ್ರೀಡಾ ಪಟುಗಳಾದ ಕಿಷಲ್ ಗಣಪತಿ ಹಾಗೂ ಜಿ.ಜಯಂತ್ ಯುನೆಕ್ಸ್ ಸನ್ರೈಸ್ ಯಾದವ್ ಪ್ರೊ ಬ್ಯಾಡ್ಮಿಂಟನ್ ಅಕಾಡೆಮಿ ಸ್ಟೇಟ್ ರ್ಯಾಂಕಿಂಗ್ ಟೂರ್ನಿಮೆಂಟ್ನ ಹದಿನೇಳು ವರ್ಷದ ಒಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.
ಮೇ 15ರಿಂದ 20ರವರೆಗೆ ಬೆಂಗಳೂರಿನ ಜೆ.ಪಿ.ನಗರ ದಲ್ಲಿರುವ ಸ್ಕೈಫಿಂಚ್ ಸ್ಪೋಟ್ರ್ಸ್ ಸೆಂಟರ್ನಲ್ಲಿ ನಡೆದ ಯುನೆಕ್ಸ್ ಸನ್ರೈಸ್ ಯಾದವ್ ಪ್ರೊ ಬ್ಯಾಡ್ಮಿಂಟನ್ ಅಕಾಡೆಮಿ ಸ್ಟೇಟ್ ರ್ಯಾಂಕಿಂಗ್ ಟೂರ್ನಿಮೆಂಟ್ನ ಹದಿನೇಳು ವರ್ಷದ ಒಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.
ಇವರು ಮೈಸೂರಿನ ರಾಮ್ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನುರಿತ ತರಬೇತುದಾರರಾದ ರಾಮೇಶ್ವರ್ ಮಹಾಪಾತ್ರ ಹಾಗೂ ರಾಮಕೃಷ್ಣ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರಸ್ತುತ ಕಿಷಲ್ ಗಣಪತಿ ಹಾಗೂ ಜಯಂತ್ ಜಿ. ಇಬ್ಬರೂ ಹದಿನೇಳು ವರ್ಷದ ಒಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಸೀಡ್ ನಂ.1 ಆಟಗಾರರಾಗಿದ್ದಾರೆ.