ಮೈಸೂರಿಂದ ರಾಜಧಾನಿಗೆ ಪಾದಯಾತ್ರೆ
ಮೈಸೂರು

ಮೈಸೂರಿಂದ ರಾಜಧಾನಿಗೆ ಪಾದಯಾತ್ರೆ

November 10, 2018

ಮೈಸೂರು: ಕೆಆರ್‍ಎಸ್ ಅಣೆಕಟ್ಟೆಯ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿ ಅಣೆಕಟ್ಟೆ ಯನ್ನು ರಕ್ಷಿಸುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯ ಕರ್ತರು ಶುಕ್ರವಾರ ಮೈಸೂರಿನಿಂದ ಬೆಂಗ ಳೂರಿಗೆ ಪಾದಯಾತ್ರೆ ಆರಂಭಿಸಿದರು.

ಮೈಸೂರು ಅರಮನೆ ಉತ್ತರ ದ್ವಾರದಲ್ಲಿ ರುವ ಕೋಟೆ ಆಂಜನೇಯಸ್ವಾಮಿ ದೇವಾ ಲಯದ ಮುಂಭಾಗದಿಂದ ತಲೆಯ ಮೇಲೆ ಕಲ್ಲನ್ನು ಎತ್ತಿಕೊಂಡು ಪಾದಯಾತ್ರೆ ಆರಂಭಿಸಿದ ಕಸ್ತೂರಿ ಕರ್ನಾಟಕ ಜನ ಪರ ವೇದಿಕೆಯ ಕಾರ್ಯಕರ್ತರು ದೊಡ್ಡ ಗಡಿಯಾರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಸಯ್ಯಾಜಿರಾವ್ ರಸ್ತೆಯ ಮೂಲಕ ಬೆಂಗಳೂರು ರಸ್ತೆ ತಲುಪಿ ಪಾದಯಾತ್ರೆ ಮುಂದುವರಿಸಿದರು.
ಇದಕ್ಕೂ ಮುನ್ನ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವೇದಿಕೆಯ ಕಾರ್ಯಕರ್ತರು, ಅಕ್ರಮ ಗಣಿಗಾರಿಕೆ ನಿಲ್ಲಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು. ವೇದಿಕೆ ರಾಜ್ಯಾಧ್ಯಕ್ಷ ಕೆರೆ ಚಳವಳಿ ರಮೇಶ ಗೌಡ ಮಾತನಾಡಿ, ಮೈಸೂರು ರಾಜಮನೆ ತನದವರು ಕೆಆರ್‍ಎಸ್ ಅಣೆಕಟ್ಟೆಯನ್ನು ಕಟ್ಟಿಸಿ ಮೈಸೂರು, ಮಂಡ್ಯ, ಬೆಂಗಳೂರು ಸೇರಿ ದಂತೆ ವಿವಿಧ ಜಿಲ್ಲೆಗಳ ರೈತರಿಗೆ ಕೊಡುಗೆ ನೀಡಿದ್ದಾರೆ. ಆದರೆ ಕೆಲವು ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯ ಬಂದೊದಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೆಆರ್‍ಎಸ್ ಅಣೆಕಟ್ಟೆಯನ್ನು ಕಳೆದುಕೊಳ್ಳುವ ಸ್ಥಿತಿ ಬರು ತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಬಂಡೆಗಳನ್ನು ಸಿಡಿಸುವುದಕ್ಕಾಗಿ ಸಿಡಿಮದ್ದು ಬಳಸುತ್ತಿದ್ದಾರೆ. ಇದರಿಂದ ಅಣೆಕಟ್ಟು ಬಿರುಕು ಬಿಡುತ್ತಿದೆ. ಮೂರ್ನಾಲ್ಕು ಬಾರಿ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಭೂಮಿ ಕಂಪಿಸಿ ಜನರು ಆತಂಕಪಡುವಂತಾಗಿದೆ. ವಿಜ್ಞಾನಿಗಳು ಸಂಶೋಧನೆ ನಡೆಸಿ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿ ಗಾರಿಕೆ ಸ್ಥಳದಿಂದಲೇ ನಿಗೂಢ ಶಬ್ದ ಬಂದಿದೆ. ಗಣಿ ಗಾರಿಕೆಯಿಂದ ಅಣೆಕಟ್ಟೆಗೆ ಆಪತ್ತು ಒದಗಿ ಬರಲಿದೆ ಎಂದು ಅಭಿ ಪ್ರಾಯಪಟ್ಟಿದ್ದಾರೆ ಎಂದು ದೂರಿದರು.
ಮಂಡ್ಯ ಜಿಲ್ಲಾಡಳಿತದ ಕೆಆರ್‍ಎಸ್ ಸಮೀಪ ವಿರುವ ಬೇಬಿ ಬೆಟ್ಟ ಹಾಗೂ ಅಣೆಕಟ್ಟೆಯ ಸುತ್ತಮುತ್ತಲ ಅಕ್ರಮ ಗಣಿಗಾರಿಕೆಯ ಮೇಲೆ ದಾಳಿ ನಡೆಸಿ ಬೀಗ ಹಾಕಿದ್ದರು. ಆದರೆ ರಾತ್ರಿ ವೇಳೆ ಗಣಿಗಾರಿಕೆ ಮುಂದು ವರಿಸಿ ನೂರಾರು ಲೋಡ್ ಜಲ್ಲಿ ಕಲ್ಲು, ಗ್ರಾನೈಟ್‍ಗಳನ್ನು ಸಾಗಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೆಆರ್‍ಎಸ್ ಅಣೆ ಕಟ್ಟೆಯ 20 ಕಿ.ಮೀ. ಸುತ್ತಲೂ ಗಣಿ ಗಾರಿಕೆ ನಿಷೇಧಿಸುವುದಕ್ಕೆ ಕ್ರಮ ಕೈಗೊಳ್ಳು ವಂತೆ ಆಗ್ರಹಿಸಲು ಪಾದಯಾತ್ರೆ ನಡೆಸು ತ್ತಿರುವುದಾಗಿ ಹೇಳಿದರು.

ಜಲ್ಲಿಯ ಕ್ರಷರ್‍ಗಳಿಂದ ಬರುವ ಧೂಳಿ ನಿಂದಾಗಿ ಸಮೀಪದ ಗ್ರಾಮಗಳಲ್ಲಿ ವಾಸಿ ಸುತ್ತಿರುವ ಜನರ ಆರೋಗ್ಯ ಹದಗೆಡು ತ್ತಿದೆ. ಕೃಷಿ ಚಟುವಟಿಕೆಗೆ ಹಿನ್ನಡೆಯಾಗು ತ್ತಿದೆ. ಅಂತರ್ಜಲಕ್ಕೂ ಹಾನಿಯಾಗುತ್ತಿದೆ. ಕೆರೆ, ನದಿಗಳು, ಬೋರ್‍ವೆಲ್‍ಗಳು ಬತ್ತಿಹೋಗು ತ್ತಿವೆ ಎಂದು ಹೇಳಿದರು. ನ.15ರಂದು ಪಾದಯಾತ್ರೆ ಬೆಂಗಳೂರು ತಲುಪಲಿದೆ. ಅಂದು ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವು ದಾಗಿ ಅವರು ತಿಳಿಸಿದರು.

ವೇದಿಕೆ ಉಪಾಧ್ಯಕ್ಷ ಸಿ.ಕೆ.ಎಂ.ಗೌಡ, ಎಸ್.ಎನ್.ದಿನೇಶ್, ಮಂಗಳಮ್ಮ, ಹೇಮಾ, ಸುಜಾತ, ಅನುಶ್ರೀ, ಬಿ.ಸಿ.ಯೋಗೇಶ್ ಗೌಡ, ಗಿರೀಶ್‍ಕುಮಾರ್, ಸುಬ್ರಹ್ಮಣ್ಯ, ಉಮಾಶಂಕರ್, ನಾಗಲಕ್ಷ್ಮೀ, ನಾಗರತ್ನ ಹಾಗೂ ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Translate »