ಛಿದ್ರವಾಗಿರುವ `ತರಾಸು’ ನಾಮಫಲಕ
ಮೈಸೂರು

ಛಿದ್ರವಾಗಿರುವ `ತರಾಸು’ ನಾಮಫಲಕ

November 10, 2018

ಮೈಸೂರು: ತ.ರಾ.ಸು ಎಂದೇ ಪ್ರಸಿದ್ಧರಾಗಿದ್ದ ತ.ರಾ.ಸುಬ್ಬರಾವ್ ಕನ್ನಡದ ಖ್ಯಾತ ಕಾದಂಬರಿಕಾರರು. ಸ್ವಾತಂತ್ರ್ಯ ಹೋರಾಟ ಗಾರರೂ ಆದ ಇವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮೈಸೂರಿನ ಯಾದವಗಿರಿಯ ಚೆಲು ವಾಂಬ ಉದ್ಯಾನವನದ ಬಳಿ ವೃತ್ತಕ್ಕೆ (ಆಕಾಶ ವಾಣಿ ವೃತ್ತವೆಂದೇ ಕರೆಯಲಾಗುತ್ತಿತ್ತು) ಅವರ ಹೆಸರು ನಾಮಕರಣ ಮಾಡಿ, ಫಲಕ ಸಹ ಅಳ ವಡಿಸಲಾಗಿತ್ತು. ಆದರೆ ನಾಮಫಲಕ ಈಗ ಛಿದ್ರಗೊಂಡಿದ್ದು, ಮೈಸೂರು ನಗರಪಾಲಿಕೆ ಪ್ರಸಿದ್ಧ ಸಾಹಿತಿಗಳಿಗೆ ಗೌರವ ನೀಡುವ ಪರಿ ಭಾರೀ ಟೀಕೆಗೆ ಆಸ್ಪದ ಮಾಡಿಕೊಟ್ಟಿದೆ.

ಇತ್ತೀಚೆಗೆ ರಸ್ತೆ ಹಾಗೂ ಫುಟ್‍ಪಾತ್ ದುರಸ್ತಿಗೆ ಜೆಸಿಬಿ ಬಳಸಿದ ಪರಿಣಾಮ ತರಾಸು ನಾಮ ಫಲಕ ಭಗ್ನಗೊಂಡಿದೆ. ನಾಮಫಲಕದ ಒಂದು ತುದಿ ಮಾತ್ರ ಇದ್ದು, ಇನ್ನೊಂದು ತುದಿ ಹಾಗೂ ಒಡೆದಿರುವ ಫಲಕವನ್ನು ಪಕ್ಕದ ಅಪಾರ್ಟ್ ಮೆಂಟ್ ದ್ವಾರದ ಬಳಿ ಬಿಸಾಡಲಾಗಿದೆ.

ಕಾಮಗಾರಿ ನಂತರ ನಾಮಫಲಕವನ್ನು ಸರಿ ಪಡಿಸಬೇಕೆಂಬ ಪರಿಜ್ಞಾನ ಇಲ್ಲದ ಉಸ್ತುವಾರಿ ನಗರಪಾಲಿಕೆ ಅಧಿಕಾರಿಗಳು ಹೆಸರಾಂತ ಕಾದಂಬರಿಕಾರ ತರಾಸು ಅವರನ್ನು ಅವ ಮಾನಿಸಿದಂತಿದೆ. ಇದಕ್ಕೆ ಸಾಹಿತ್ಯ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತರಾಸು ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ವಿಶಿಷ್ಟ ಕಾದಂಬರಿಗಳ ಕೊಡುಗೆ ನೀಡಿದ್ದಾರೆ. ಅವರ `ಹಂಸಗೀತೆ’, `ಚಂದವಳ್ಳಿಯ ತೋಟ’, `ನಾಗರಹಾವು’, `ಬೆಂಕಿಯ ಬಲೆ’, `ಗಾಳಿ ಮಾತು’, `ಮಸಣದ ಹೂವು’, `ಬಿಡುಗಡೆಯ ಬೇಡಿ’ ಹೀಗೆ ಆನೇಕ ಕಾದಂಬರಿಗಳು ಚಲನಚಿತ್ರವಾಗಿ ಇಂದಿಗೂ ಜನಮಾನಸದಲ್ಲಿ ನೆಲೆಯೂರಿವೆ.

`ಹಂಸಗೀತೆ’ಯನ್ನು ಓದಿದ್ದ ಆಗಿನ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆ ಯರು, ತರಾಸು ಅವರನ್ನು ನೋಡಬಯಸಿ ದ್ದರಂತೆ. ಅಂತಹ ಮಹಾನ್ ಕಾದಂಬರಿಕಾರನ ಹೆಸರಿನ ವೃತ್ತದಲ್ಲಿ, ಅವರ ನಾಮಫಲಕದ ಸ್ಥಿತಿ ನೋಡಿದರೆ ಬೇಸರ ವೆನಿಸುತ್ತದೆ ಎನ್ನುತ್ತಾರೆ ಯಾದವಗಿರಿಯ ಹಿರಿಯ ನಾಗರಿಕ ರಾಮೇಗೌಡ.

Translate »