ಆಯುರ್ವೇದ ಕರಗದ ಸಂಪತ್ತು: ತ್ರಿನೇತ್ರ ಸ್ವಾಮೀಜಿ
ಮೈಸೂರು

ಆಯುರ್ವೇದ ಕರಗದ ಸಂಪತ್ತು: ತ್ರಿನೇತ್ರ ಸ್ವಾಮೀಜಿ

November 10, 2018

ಮೈಸೂರು: ನಮ್ಮ ಸಂಸ್ಕøತಿ, ಸಂಸ್ಕಾರ ಹಾಗೂ ಆಯುರ್ವೇದ ಕರಗಲಾಗದ ಸಂಪತ್ತಾಗಿದ್ದು, ಅವುಗಳ ರಕ್ಷಣೆಗೆ ಎಲ್ಲರೂ ಬದ್ಧರಾಗ ಬೇಕು ಎಂದು ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಶುಕ್ರವಾರ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾ ಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಜನರು 90ರಿಂದ 120 ವರ್ಷ ಕಾಲ ಬದುಕುತ್ತಿದ್ದರು. ಅಲ್ಲದೆ ರೋಗಗಳ ಸಂಖ್ಯೆಯೂ ಕಡಿಮೆಯಿತ್ತು. ಪ್ಲೇಗ್ ಮತ್ತು ಮಲೇರಿಯಾ ದಂತಹ ರೋಗಗಳನ್ನು ಹೊರತುಪಡಿಸಿದರೆ ಬೇರ್ಯಾವ ಸಮಸ್ಯೆ ಗಳು ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗಿದೆ. ಇಂಗ್ಲೀಷ್ ಮೆಡಿಸಿನ್, ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಸಾಟಿಯಾಗುವುದಿಲ್ಲ ಎಂದರು.

ಇದೇ ವೇಳೆ ಶಾಸಕ ಎಸ್.ಎ.ರಾಮದಾಸ್ ಮಾತ ನಾಡಿ, ಪುರಾತನ ಕಾಲದಿಂದ ಆಯುರ್ವೇದ ಅತ್ಯಂತ ಪರಿಣಾಮಕಾರಿ ಕೆಲಸ ಮಾಡುತ್ತಿದೆ. ಅಡ್ಡ ಪರಿಣಾಮ ಬೀರದೆ ಅನೇಕ ಕಾಯಿಲೆಗಳನ್ನು ಗುಣ ಪಡಿಸುವ ಸಾಮಥ್ರ್ಯ ಹೊಂದಿದೆ. ಇದನ್ನು ಅನೇಕ ಸಂಶೋ ಧನೆಗಳು ಸಾಬೀತುಪಡಿಸಿವೆ ಎಂದರು. ಶಿಬಿರದಲ್ಲಿ ನಾರಾಯಣ ಹೃದಯಾಲಯ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಸರ್ಕಾರಿ ಆಯುರ್ವೇದ ವೈದ್ಯ ಕೀಯ ಮಹಾವಿದ್ಯಾನಿಲಯ, ಜೆಎಸ್‍ಎಸ್ ಆಯುರ್ವೇದ ಆಸ್ಪತ್ರೆ ಹಾಗೂ ಶಾಂತಿಗಿರಿ ಆಯುರ್ವೇದ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಮಾಜಿ ಸಚಿವ ಸಿ.ಹೆಚ್.ವಿಜಯ ಶಂಕರ್, ಯೋಗ ತಜ್ಞ ಪ್ರಕಾಶ್ ಯೋಗಿ, ಡಾ.ಶೆಣೈ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‍ಬಾಬು, ಹಿರಿಯ ಪತ್ರಕರ್ತ ನಿರಂಜನ ನಿಕ್ಕಂ ಮತ್ತಿತರರು ಉಪಸ್ಥಿತರಿದ್ದರು.

Translate »