ಮೈಸೂರು ವಿನ್ಯಾಸ್ ಕಂಪನಿ ಕಾರ್ಮಿಕರ ಪ್ರತಿಭಟನೆ
ಮೈಸೂರು

ಮೈಸೂರು ವಿನ್ಯಾಸ್ ಕಂಪನಿ ಕಾರ್ಮಿಕರ ಪ್ರತಿಭಟನೆ

November 10, 2018

ಮೈಸೂರು: ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿನ್ಯಾಸ್ ಕಂಪನಿ ಕಾರ್ಮಿಕರು ಇಂದು ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸೆಂಟರ್ ಆಫ್ ಟ್ರೇಡ್ ಯೂನಿಯನ್ (ಸಿಐ ಟಿಯು)ನ ಮೈಸೂರು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ ನೇತೃತ್ವದಲ್ಲಿ ಸುಮಾರು 50 ಮಂದಿ ಕಾರ್ಮಿಕರು ಮಾತೃ ಮಂಡಳಿ ಸರ್ಕಲ್‍ನಿಂದ ಕಾಳಿದಾಸ ರಸ್ತೆ ಮೂಲಕ ಮೆರವಣಿಗೆಯಲ್ಲಿ ವಿಜಯನಗರದಲ್ಲಿ ರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ನಿವಾಸಕ್ಕೆ ತೆರಳಿ ಸಚಿವರು ಇಲ್ಲದ ಕಾರಣ, ಸಚಿವರ ಸಹಾಯಕ ಕೃಷ್ಣ ರಾಜು ಅವರಿಗೆ ಮನವಿ ಸಲ್ಲಿಸಿದರು.

18 ಮಹಿಳೆಯರೂ ಸೇರಿದಂತೆ 94 ಮಂದಿ ಕಾರ್ಮಿಕರನ್ನು ಆಂಧ್ರಪ್ರದೇಶದ ಘಟಕಕ್ಕೆ ವರ್ಗಾವಣೆ ಮಾಡಿರುವ ವಿನ್ಯಾಸ್ ಕಂಪನಿ, ಅಲ್ಲಿ ಘಟಕವೂ ಬೀಗ ಮುದ್ರೆಯಾಗಿದೆ ಎಂಬ ನೆಪ ಹೇಳಿ ಕಿರುಕುಳ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದರು.

ಸಾರ್ವಜನಿಕರು ಲಕ್ಷ ಸಹಿ ಸಂಗ್ರಹ ಮಾಡಿ, ನವೆಂಬರ್ 12ರಂದು ಮೈಸೂರಿನಿಂದ ಬೆಂಗ ಳೂರಿಗೆ ಪಾದಯಾತ್ರೆ ಮೂಲಕ ತೆರಳಿ ನವೆಂ ಬರ್ 13ರಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಅಂದೇ ಉಪವಾಸ ಸತ್ಯಾಗ್ರಹ ನಡೆಸು ತ್ತೇವೆ ಎಂದು ಕಾರ್ಮಿಕರು ತಿಳಿಸಿದ್ದಾರೆ.

Translate »