ಉಪಗ್ರಹ ಉಡಾವಣೆ ಮೂಲಕ ಸಮಾಜಕ್ಕೆ ನೆರವಾಗಿರುವ ಇಸ್ರೋ
ಮೈಸೂರು

ಉಪಗ್ರಹ ಉಡಾವಣೆ ಮೂಲಕ ಸಮಾಜಕ್ಕೆ ನೆರವಾಗಿರುವ ಇಸ್ರೋ

November 10, 2018

ಮೈಸೂರು: ಉಪಗ್ರಹ ಉಡಾ ವಣೆ ಮೂಲಕ ಇಸ್ರೋ ಸಮಾಜಕ್ಕೆ ನಾನಾ ರೀತಿ ಯಲ್ಲಿ ಲಾಭ ತಂದುಕೊಟ್ಟಿದೆ ಎಂದು ಇಸ್ರೋದ ಮಾನವಸಹಿತ ಅಂತರಿಕ್ಷಾ ಯೋಜನೆ ನಿರ್ದೇಶಕಿ ಡಾ.ವಿ.ಆರ್.ಲಲಿತಾಂಬಿಕಾ ಇಂದಿಲ್ಲಿ ತಿಳಿಸಿದರು.
ಮೈಸೂರಿನ ಜೆಎಸ್‍ಎಸ್ ಮಹಿಳಾ ಕಾಲೇಜಿ ನಲ್ಲಿ ಸ್ವದೇಶಿ ವಿಜ್ಞಾನ ಅಂದೋಲನ ಕರ್ನಾಟಕ ಮತ್ತು ಕಾಲೇಜು ವತಿಯಿಂದ ವಿಜ್ಞಾನಿಗಳಾದ ಮೇರಿ ಕ್ಯೂರಿ, ಸರ್ ಸಿ.ವಿ.ರಾಮನ್ ಜನ್ಮದಿನ ಪ್ರಯುಕ್ತ ಶುಕ್ರ ವಾರ ಏರ್ಪಡಿಸಿದ್ದ 11ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಯಂತ್ರ ವಿನ್ಯಾಸ, ಉಪಗ್ರಹ ನಿಯಂತ್ರಣ ತಂತ್ರ ಜ್ಞಾನ ಅಳವಡಿಕೆ, ಉಪಗ್ರಹವನ್ನು ಕಕ್ಷೆಗೆ ಕಳುಹಿ ಸುವುದು, ಹೀಗೆ ಎಲ್ಲ ತಂತ್ರಜ್ಞಾನವೂ ನಮ್ಮಲ್ಲಿ ಅಭಿವೃದ್ಧಿಯಾಗಿದೆ. ಅದರಲ್ಲೂ ಪ್ರಮುಖವಾಗಿ ಪಿಎಸ್‍ಎಲ್‍ವಿ (ಪೊಲಾರ್ ಸೆಟಲೈಟ್ ಲಾಂಚ್ಡ್ ವೆಹಿಕಲ್) ಇಸ್ರೋ ಯೋಜನೆಯ ಬೃಹತ್ ಮತ್ತು ಸಂಕೀರ್ಣ ಉಪಗ್ರಹ ಎಂದರು.

ರೇಡಿಯೋ ಸಂವಹನ, ತಂತ್ರಜ್ಞಾನವನ್ನು ಇಸ್ರೋ ಅಭಿವೃದ್ಧಿಪಡಿಸಿದೆ. ಇಸ್ರೋ ಉಪಗ್ರಹಗಳು ವಿವಿಧ ಕಕ್ಷೆಗಳನ್ನು ಯಶಸ್ವಿಯಾಗಿ ತಲುಪಿದ್ದು, ಈಕ್ವೆ ಟೋರಿಯಲ್ ಕಕ್ಷೆಯಿಂದ ಸಂವಹನ, ಪೊಲಾರ್ ಕಕ್ಷೆಯಿಂದ ರಿಮೋಟ್ ಸೆನ್ಸಿಂಗ್‍ನ ಲಾಭವನ್ನೂ ನಾವು ಪಡೆದುಕೊಳ್ಳುತ್ತಿದ್ದೇವೆ ಎಂದರು.

ಮಹಿಳೆಯ ನಾಯಕತ್ವ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವ ಪಡೆದಿದ್ದು, ಮಹಿಳೆಯರು ಒಟ್ಟಾದರೆ ಬದಲಾ ವಣೆಯ ಕಂಪನ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಸ್ತ್ರೀಶಕ್ತಿ ಒಟ್ಟಾಗಿ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇ ಳನ ಆಯೋಜಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಕøತ ವಿವಿ ಕುಲಪತಿ ಪದ್ಮಾಶೇಖರ್ ಮಾತ ನಾಡಿ, ಶ್ರೀಮಂತ ಸಂಸ್ಕøತಿ ಹೊಂದಿರುವ ನಮ್ಮಲ್ಲಿ, ಸಾಹಿತ್ಯ, ಗಣಿತ, ಆಯುರ್ವೇದ, ವಿಜ್ಞಾನ, ಜೋತಿಷ್ಯ ದಲ್ಲಿ ಸಾಂಪ್ರದಾಯಿಕ ಜ್ಞಾನವನ್ನೂ ಹೊಂದಿದ್ದೇವೆ. ಚುಕ್ಕಿ ಇಟ್ಟು ಬಿಡಿಸುವ ರಂಗೋಲಿಯಲ್ಲಿ ಗಣಿತ ಒಳಗೊಂಡಿದೆ. ಮನೆ ಮುಂದಿನ ಗೋಮೂತ್ರ ಸಿಂಪಡಣೆಯಲ್ಲೂ ಸೊಳ್ಳೆ ನಿವಾರಣೆಯಾಗುತ್ತಿತ್ತು. ಹೀಗೆ ನಾನಾ ವೈಜ್ಞಾನಿಕ ಚಿಂತನೆಗಳು ನಮ್ಮ ಪೂರ್ವಿಕರಲ್ಲಿತ್ತು. ಆದರೆ ಪ್ರಸ್ತುತ ವೈಜ್ಞಾನಿಕತೆ ಯಿಂದ ನಮ್ಮ ಸಂಪ್ರದಾಯಿಕ ಜ್ಞಾನ ಮರೆಯಾ ಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೈದ್ಯ ವಿಜ್ಞಾನ, ಶಸ್ತ್ರಚಿಕಿತ್ಸೆ, ಆಯುರ್ವೇದ ಕ್ಷೇತ್ರದ ಲ್ಲಾಗಿರುವ ಅನನ್ಯ ಸಾಧನೆಯನ್ನು ಶುಶ್ರುತಾ, ಚರಕ ಸಂಹಿತೆಯಲ್ಲಿ ಗುರುತಿಸಬಹುದು. ಹರಪ್ಪ-ಮೊಹೆಂ ಜೊದಾರೊ ನಾಗರಿಕತೆಯಲ್ಲಿ ಸಿವಿಲ್ ಎಂಜಿನಿಯರಿಂಗ್, ವಾಸ್ತುಶಿಲ್ಪದ ವೈಶಿಷ್ಟ್ಯತೆ ಕಾಣಬಹುದು ಎಂದರು.

ವ್ಯಾಕರಣ ಮತ್ತು ಭಾಷಾ ವಿಜ್ಞಾನದಲ್ಲಿ ಪಾಣಿನಿ, ಯೋಗ-ಪತಂಜಲಿ, ಅರ್ಥಶಾಸ್ತ್ರ-ಕೌಟಿಲ್ಯ, ಅಯು ರ್ವೇದ-ಧನ್ವಂತರಿ, ವೈಮಾನಿಕಶಾಸ್ತ್ರ-ಭಾರದ್ವಾಜ್ ಕೊಡುಗೆ ಮಹತ್ವವಾದದ್ದು. ಅದೇ ರೀತಿ ವಿಜ್ಞಾನ ಕ್ಷೇತ್ರಕ್ಕೆ ಆಧುನಿಕ ಮಹಿಳಾ ವಿಜ್ಞಾನಿಗಳಾದ ಜಾನಕಿ ಅಂಬಾಳ್, ವಿಜಯಲಕ್ಷ್ಮಿ, ಆಸಿಮಾ ಚಟರ್ಜಿ, ಆನಂದಿಬಾಯಿ ಜೋಷಿ ಕೊಡುಗೆಯೂ ಅನನ್ಯ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಡಾ.ವಿ.ಆರ್.ಲಲಿತಾಂಬಿಕಾ ಅವರಿಗೆ `ಮೇರಿ ಕ್ಯೂರಿ ಮಹಿಳಾ ವಿಜ್ಞಾನ ಪುರಸ್ಕಾರ’ ನೀಡಿ ಗೌರವಿಸ ಲಾಯಿತು. ಮೈಸೂರು ವಿವಿ ಹಂಗಾಮಿ ಕುಲಪತಿ ಆಯಿಷಾ ಎಂ.ಷರೀಫ್, ಸ್ವದೇಶಿ ವಿಜ್ಞಾನ ಆಂದೋ ಲನ-ಕರ್ನಾಟಕ ಖಜಾಂಚಿ ವೈ.ಎಸ್.ಗಾಯತ್ರಿ, ಪ್ರಾಧ್ಯಾಪಕಿ ಎಸ್.ಪಿ.ಉಮಾದೇವಿ ಉಪಸ್ಥಿತರಿದ್ದರು.

Translate »